ಶನಿ ನೇರ ನಡೆ: 50 ದಿನಗಳ ಬಳಿಕ ಈ ನಾಲ್ಕು ರಾಶಿಯವರ ಜೀವನದಲ್ಲಿ ಸೋಲೆಂಬುದೇ ಇಲ್ಲ

Shani Margi: ನವಗ್ರಹಗಳಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಸದ್ಯ ಹಿಮ್ಮುಖ ಸ್ಥಿತಿಯಲ್ಲಿ ಚಲಿಸುತ್ತಿರುವ ಶನಿ ದೇವನು ಶೀಘ್ರದಲ್ಲೇ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /10

ನವಗ್ರಹಗಳಲ್ಲಿ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಶನಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. 

2 /10

ದ್ವಾದಶ ರಾಶಿಗಳಲ್ಲಿ ಶನಿಯು ಮಕರ ಮತ್ತು ಕುಂಭ ರಾಶಿಯ ಅಧಿಪತಿ ಆಗಿದ್ದಾನೆ. ಇದಲ್ಲದೆ, ಶನಿ ದೇವನು ತುಲಾ ರಾಶಿಗೆ ಬಂದಾಗ ಉತ್ತುಂಗ ಸ್ಥಿತಿಯಲ್ಲಿ ಇರುತ್ತಾನೆ ಎಂದು ಹೇಳಲಾಗುತ್ತದೆ. 

3 /10

ಮೂರು ದಶಕಗಳ ಬಳಿಕ ಈ ವರ್ಷದ ಆರಂಭದಲ್ಲಿ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ದೇವನು ಸದ್ಯ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. 

4 /10

ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ರಾಶಿ ಬದಲಾವಣೆ, ಶನಿಯ ಹಿಮ್ಮುಖ ಚಲನೆ, ಶನಿಯ ನೇರ ಸಂಚಾರ ಎಲ್ಲವೂ ಕೂಡ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಮಹತ್ವದ ಪರಿಣಾಮವನ್ನು ಬೀರುತ್ತದೆ. 

5 /10

ಇನ್ನೂ ಸರಿಯಾಗಿ 50 ದಿನಗಳಲ್ಲಿ ಎಂದರೆ ನವೆಂಬರ್ 04, 2023ರಂದು ಶನಿ ಮಹಾತ್ಮನು ಕುಂಭ ರಾಶಿಯಲ್ಲಿ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ.   

6 /10

ಮಾರ್ಗಿ ಶನಿಯು ಎಲ್ಲಾ 12 ರಾಶಿಯವರ ಮೇಲೂ  ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡಲಿದ್ದಾನೆ. ಆದರೂ, ಈ ಸಮಯದಲ್ಲಿ ನಾಲ್ಕು ರಾಶಿಯವರ ಬದುಕು ಬಂಗಾರದಂತಾಗುತ್ತದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

7 /10

ಶನಿಯ ನೇರ ಸಂಚಾರವು ವೃಷಭ ರಾಶಿಯವರ ಜೀವನದಲ್ಲಿ ಶುಭ ದಿನಗಳನ್ನು ಹೊತ್ತು ತರಲಿದೆ.

8 /10

ಮಾರ್ಗಿ ಶನಿಯು ನವೆಂಬರ್ 04, 2023ರ ಬಳಿಕ ಮಿಥುನ ರಾಶಿಯವರ ಪ್ರತಿ ಕೆಲಸದಲ್ಲೂ ಯಶಸ್ಸನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. 

9 /10

ಶನಿಯ ನೇರ ಸಂಚಾರದೊಂದಿಗೆ ತುಲಾ ರಾಶಿಯವರ ಜೀವನದಲ್ಲಿ ಇಷ್ಟು ದಿನಗಳಿಂದ ಎದುರಾಗಿದ್ದ ಸಂಕಷ್ಟಗಳು ಸರಿದು, ಸಕಾರಾತ್ಮಕ ಫಲಗಳನ್ನು ಅನುಭವಿಸುವರು. 

10 /10

ಮಕರ ರಾಶಿಯ ಅಧಿಪತಿಯೂ ಆಗಿರುವ ಶನಿಯ ಸಂಚಾರದಲ್ಲಿನ ಬದಲಾವಣೆಯು ಈ ರಾಶಿಯವರಿಗೆ ಪ್ರಯೋಜನಕಾರಿ ಆಗಿದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.