Putin Assassination Attempts: ಸ್ನಾನ ಮಾಡಲು ಕೂಡ ಹೆದರುತ್ತಾರಂತೆ ರಷ್ಯಾ ರಾಷ್ಟ್ರಪತಿ ವ್ಲಾಡಿಮೀರ್ ಪುಟಿನ್. ಕಾರಣ ಇಲ್ಲಿದೆ

Putin Assassination Attempts: ಉಕ್ರೇನ್ ವಿರುದ್ಧದ ಯುದ್ಧದ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಹೌದು, ಇದುವರೆಗೆ ತಮ್ಮ ಮೇಲೆ 5 ಮಾರಣಾಂತಿಕ ದಾಳಿಗಳು ನಡೆದಿವೆ ಎಂದು ಪುಟಿನ್ ಹೇಳಿದ್ದಾರೆ. 

Putin Assassination Attempts: ಉಕ್ರೇನ್ ವಿರುದ್ಧದ ಯುದ್ಧದ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಹೌದು, ಇದುವರೆಗೆ ತಮ್ಮ ಮೇಲೆ 5 ಮಾರಣಾಂತಿಕ ದಾಳಿಗಳು ನಡೆದಿವೆ ಎಂದು ಪುಟಿನ್ ಹೇಳಿದ್ದಾರೆ. ಪ್ರಸ್ತುತ ಪುಟಿನ್ ಪ್ರಾಣ ಭೀತಿ ಎದುರಿಸುತ್ತಿದ್ದು, ಅವರ ರಕ್ಷಣೆಗಾಗಿ ಸ್ನೈಪರ್ ಗಳ ಒಂದು ಬಲಿಷ್ಠ ಪಡೆಯನ್ನೇ ನಿಯೋಜಿಸಲಾಗಿದೆ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಯುಕ್ರೇನ್ ವಿರುದ್ಧ ಯುದ್ಧ ಆರಂಭಗೊಂಡಾಗ ತಮ್ಮ ಮೇಲೆ ಕೊನೆಯಬಾರಿಗೆ ಮಾರಣಾಂತಿಕ ದಾಳಿ ನಡೆದಿದೆ ಎಂದು ಅವರು ಹೇಳಿದ್ದು, ಇದೆ ಮೊದಲಬಾರಿಗೆ ಈ ಮಾಹಿತಿ ಮುನ್ನೆಲೆಗೆ ಬಂದಿದೆ. 

 

ಇದನ್ನೂ ಓದಿ-Bank Locker Charges: ಎಸ್ಬಿಐನಿಂದ ಹಿಡಿದು ಐಸಿಐಸಿಐ ಬ್ಯಾಂಕುಗಳವರೆಗೆ ಯಾವ ಬ್ಯಾಂಕ್ ಲಾಕರ್ ಶುಲ್ಕ ಎಷ್ಟು?

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /5

‘ದಿ ಸನ್’ ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಯ ವಿಫಲ ಯತ್ನ ನಡೆದಿದೆ ಎಂದು ಉಕ್ರೇನ್‌ನ ರಕ್ಷಣಾ ಗುಪ್ತಚರ ಮುಖ್ಯಸ್ಥ ಕಿರ್ಲೊ ಬುಡಾನೊವ್ ಹೇಳಿದ್ದಾರೆ. ಪುಟಿನ್ ಮೇಲೆ ಮಾರಣಾಂತಿಕ ದಾಳಿ ನಡೆದಿದೆ, ಆದರೆ  ಅವರು ಅದರಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಸುಮಾರು 2 ತಿಂಗಳ ಹಿಂದೆ ಈ ಪ್ರಯತ್ನ ನಡೆಸಲಾಗಿದೆ ಎಂದು ಬುಡಾನೋವ್ ಹೇಳಿದ್ದಾರೆ. ಆದರೆ, ಈ ದಾಳಿಯ ಹಿಂದಿನ ಪಿತೂರಿಯನ್ನು ಬಹಿರಂಗಪಡಿಸಲು ನಿರಾಕರಿಸಿರುವ ಅವರು, ಇದರ ಹಿಂದೆ ಯಾರಿದ್ದಾರೆ ಮತ್ತು ಪುಟಿನ್ ಮೇಲೆ ಎಲ್ಲಿ ದಾಳಿ ನಡೆಸಲಾಗಿದೆ ಎಂಬುದರ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

2 /5

ಬ್ರಿಟನ್‌ನ ಅಜರ್‌ಬೈಜಾನ್‌ನಲ್ಲಿಯೂ ಪುಟಿನ್ ಹತ್ಯೆಗೆ ಯತ್ನ ನಡೆದಿತ್ತು. ಪುಟಿನ್ ಪ್ರಸ್ತುತ ತಮ್ಮ ಪ್ರಾಣದ ಬಗ್ಗೆ ತುಂಬಾ ಎಚ್ಚರಿಕೆ ವಹಿಸುತ್ತಾರೆ ಮತ್ತು ಯಾವುದೇ ಪ್ರವಾಸದ ಕೈಗೊಳ್ಳುವ ಮೊದಲು ಸಾಕಷ್ಟು ಯೋಚಿಸುತ್ತಾರೆ. ಪುಟಿನ್ ಪಕ್ಕದಲ್ಲಿರುವ ಸ್ನೈಪರ್‌ಗಳು ಯಾವಾಗಲೂ ಎಚ್ಚರಿಕೆಯಿಂದ ಇರುತ್ತಾರೆ ಮತ್ತು ಯಾವುದೇ ಅಪಾಯದ ಎದುರಾಗುವ ಮೊದಲೇ ಶತ್ರುಗಳನ್ನು ಗುರುತಿಸುತ್ತಾರೆ. ವರದಿಯ ಪ್ರಕಾರ, ಪುಟಿನ್ ಅವರಿಗೆ ಆಹಾರವನ್ನು ಕೊಡುವ ಮೊದಲು, ತಂಡವು ಯಾವುದೇ ರೀತಿಯ ಕಲಬೆರಕೆ ನಡೆಯದಂತೆ ಅವರ ಆಹಾರವನ್ನು ಮೊದಲು ಪರೀಕ್ಷಿಸುತ್ತದೆ. ಪುಟಿನ್ ಅವರಿಗೆ ಆಹಾರದಲ್ಲಿ ವಿಷ ಬೆರೆಸಿ ಹತ್ಯೆಗೈಯ್ಯುವ ಅಪಾಯವಿದೆ ಎನ್ನಲಾಗಿದೆ.  

3 /5

ಈಜಲು ಹೋಗುವ ಮುನ್ನವೂ ಪುಟಿನ್ ಅವರ ಈಜು ಕೊಳವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ಅವರ ಮೇಲೆ ರಾಸಾಯನಿಕ ದಾಳಿಯ ಅಪಾಯವೂ ಇದೆ. ಈ ಕಾರಣದಿಂದಲೇ ಕೊಳದ ನೀರನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗುತ್ತದೆ. ಅಂದರೆ, ಇದೀಗ ರಷ್ಯಾ ಅಧ್ಯಕ್ಷರು ಸ್ನಾನ ಮಾಡಲು ಕೂಡ ಹೆದರುತ್ತಾರೆ ಎಂದರ್ಥ. ಫೆಬ್ರವರಿಯಲ್ಲಿ ನಡೆದ ಹತ್ಯೆಯ ಪ್ರಯತ್ನಕ್ಕೂ ಮುನ್ನ ಪುಟಿನ್ ಮೇಲೆ ನಾಲ್ಕು ಬಾರಿ ಮಾರಣಾಂತಿಕ ದಾಳಿಗಳು ನಡೆದಿವೆ ಮತ್ತು ನಾಲ್ಕು ಬಾರಿ ರಷ್ಯಾದ ಅಧ್ಯಕ್ಷರು ಸಾವನ್ನು ಹಿಮ್ಮೆಟ್ಟಿಸುವ ಮೂಲಕ ತಮ್ಮ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.  

4 /5

2002 ರಲ್ಲಿ, ಪುಟಿನ್ ಅವರ ಅಜೆರ್ಬೈಜಾನ್ ಭೇಟಿಯ ಸಂದರ್ಭದಲ್ಲಿ ದಾಳಿ ನಡೆಸಲಾಗಿತ್ತು. ಈ ದಾಳಿಯ ನಂತರ, ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಇರಾಕಿನ ವ್ಯಕ್ತಿಯನ್ನು ಸಹ ಬಂಧಿಸಲಾಗಿದೆ. ಆಗ ಆರೋಪಿಗೆ ಚೆಚೆನ್ ಯೋಧರು ಮತ್ತು ಅಫ್ಘಾನಿಸ್ತಾನದ ಜತೆ ಸಂಪರ್ಕವಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ, ಇರಾಕಿನ ವ್ಯಕ್ತಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ. ಇದಾದ ಬಳಿಕ 2002ರ ನವೆಂಬರ್ ನಲ್ಲಿ ಮತ್ತೊಮ್ಮೆ ಪುಟಿನ್ ಹತ್ಯೆಗೆ ಯತ್ನ ನಡೆದಿತ್ತು, ಅವರ ಚಲಿಸುತ್ತಿದ್ದ ಮಾರ್ಗದಲ್ಲಿ ಬಾಂಬ್ ಇಟ್ಟು ಅವರ ಕಾರನ್ನು ಸ್ಫೋಟಿಸುವ ಸಂಚು ನಡೆದಿತ್ತು. ಆದರೆ, ಆ ಯತ್ನವೂ ಕೂಡ ವಿಫಲವಾಗಿತ್ತು.

5 /5

2003 ರಲ್ಲಿ, ಬ್ರಿಟಿಷ್ ಪೊಲೀಸರು ಪುಟಿನ್ ಹತ್ಯೆಯ ಸಂಚನ್ನು ವಿಫಲಗೊಳಿಸಿದರು. ಈ ಪ್ರಕರಣದಲ್ಲಿ ಇಬ್ಬರು ಶಂಕಿತರನ್ನು ಸಹ ಬಂಧಿಸಲಾಗಿತ್ತು, ಆದರೆ ನಂತರ ಇಬ್ಬರೂ ಆರೋಪಿಗಳು ಶಿಕ್ಷೆಗೆ ಒಳಗಾಗದೆ ರಷ್ಯಾಕ್ಕೆ ಮರಳಿದ್ದರು. ಇದರ ನಂತರ, 2012 ರಲ್ಲಿ, ರಷ್ಯಾದ ಅಧ್ಯಕ್ಷರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಹಿನ್ನೆಲೆ ಉಕ್ರೇನ್‌ನ ಒಡೆಸ್ಸಾದಿಂದ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಚೆಚೆನ್ ಬಂಡುಕೋರರು ಹೇಳಿದ್ದಾರೆ.