Lalit Modi & Sushmita dating!: ಹುಡುಗಿಯರು ವಯಸ್ಸಾದ ಪುರುಷರನ್ನು ಏಕೆ ಇಷ್ಟಪಡುತ್ತಾರೆ ಗೊತ್ತಾ?

ವಯಸ್ಸಿನಲ್ಲಿ ತನಗಿಂತ 12 ವರ್ಷ ಹಿರಿಯರಾದ ಲಲಿತ್ ಮೋದಿಯನ್ನೇ ಸುಶ್ಮಿತಾ ಸೇನ್ ಏಕೆ ಇಷ್ಟಪಟ್ಟರು ಅನ್ನೋ ಚರ್ಚೆ ನಡೆಯುತ್ತಿದೆ.

ನವದೆಹಲಿ: ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಪ್ರೀತಿ ಯಾರಿಗೆ ಯಾವಾಗ ಬೇಕಾದರೂ ಆಗಬಹುದು. ಇತ್ತೀಚಿನ ದಿನಗಳಲ್ಲಿ ಉದ್ಯಮಿ ಲಲಿತ್ ಮೋದಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ನಡುವಿನ ಡೇಟಿಂಗ್ ವಿಚಾರ ಟ್ರೆಂಡಿಂಗ್‍ನಲ್ಲಿದೆ. ಇತ್ತೀಚೆಗಷ್ಟೇ 58 ವರ್ಷದ ಲಲಿತ್ ಮೋದಿ 46 ವರ್ಷದ ಸುಶ್ಮಿತಾ ಸೇನ್ ಜೊತೆಗೆ ಡೇಟಿಂಗ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.  ಬಳಿಕ ಈ ಜೋಡಿ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ವ್ಯಾಪಕ ಚರ್ಚೆಯಾಗಿತ್ತು. 

ಇದನ್ನೂ ಓದಿ: Top 5 heighest Paid South actress: ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆ ಸಮಂತಾ ಅಲ್ಲ, ಈ ತಾರೆಯರು

ವಯಸ್ಸಿನಲ್ಲಿ ತನಗಿಂತ 12 ವರ್ಷ ಹಿರಿಯರಾದ ಲಲಿತ್ ಮೋದಿಯನ್ನೇ ಸುಶ್ಮಿತಾ ಸೇನ್ ಏಕೆ ಇಷ್ಟಪಟ್ಟರು ಅನ್ನೋ ಚರ್ಚೆಯೂ ನಡೆಯುತ್ತಿದೆ. ಮಹಿಳೆಯರು ತಮಗಿಂತ ವಯಸ್ಸಾದ ಪುರುಷರನ್ನು ಇಷ್ಟಪಡುವುದು ಇಂದು ಸಾಮಾನ್ಯವಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಪುರುಷರು ವಯಸ್ಸಾದಂತೆ ಪ್ರಬುದ್ಧರಾಗುತ್ತಾರೆ ಮತ್ತು ಬುದ್ಧಿವಂತರಾಗುತ್ತಾರೆ. ಪ್ರಬುದ್ಧ ಯುವಕರನ್ನು ಹುಡುಗಿಯರು ಇಷ್ಟಪಡುತ್ತಾರೆ. ಹೀಗಾಗಿ ಹುಡುಗಿಯರು ತಮಗಿಂತಲೂ ಹಿರಿಯರಾದ ಪುರುಷರನ್ನು ಇಷ್ಟಪಡುತ್ತಾರಂತೆ. ಪ್ರಬುದ್ಧ ಸಂಗಾತಿ ಜೊತೆಗೆ ತಾವು ಸುರಕ್ಷಿತವಾಗಿರುತ್ತೇವೆ ಅನ್ನೋದು ಮಹಿಳೆಯರ ಅಭಿಪ್ರಾಯವಾಗಿದೆ.  ಪ್ರಬುದ್ಧ ಹುಡುಗರು ಜೀವನವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಮತ್ತು ಅವರು ಯಾವಾಗಲೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಂದು ಹುಡುಗಿಯರು ನಂಬುತ್ತಾರೆ.

2 /5

ವಯಸ್ಸಾದಂತೆ ಯಾರೇ ಆಗಲಿ ಅನೇಕ ಕ್ಷೇತ್ರಗಳಲ್ಲಿ ಅನುಭವವನ್ನು ಪಡೆಯುತ್ತಾರೆ. ಎಲ್ಲಾ ರೀತಿಯ ಸನ್ನಿವೇಶಗಳನ್ನು ನಿಭಾಯಿಸಬಲ್ಲ ಅನುಭವಿ ಪುರುಷರನ್ನು ಮಹಿಳೆಯರು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಮಹಿಳೆಯರು ವಯಸ್ಸಾದ ಸಂಗಾತಿಯತ್ತ ಆಕರ್ಷಿತರಾಗುತ್ತಾರೆ.

3 /5

ವಯಸ್ಸಾದ ಪುರುಷರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಇದು ಹೆಚ್ಚಾಗಿ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕಿರಿಯರಿಗಿಂತ ವಯಸ್ಸಾದ ಪುರುಷರು ಹೆಚ್ಚು ಅನುಭವ ಮತ್ತು ಆತ್ಮವಿಶ್ವಾಸ ಹೊಂದಿರುತ್ತಾರೆಂದು ಹೇಳಲಾಗಿದೆ. ಇಂತಹ ಪುರುಷರು ಮಹಿಳಾ ಮನೋವಿಜ್ಞಾನವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಮಹಿಳೆಯರು ವಯಸ್ಸಾದ ಪುರುಷರಿಗೆ ಆದ್ಯತೆ ನೀಡುವ ಕಾರಣಗಳಲ್ಲಿ ಇದೂ ಒಂದಾಗಿದೆ.

4 /5

ಹಿರಿಯ ಪುರುಷರು ಆರ್ಥಿಕವಾಗಿ ಸ್ವತಂತ್ರರಾಗಿರುತ್ತಾರೆ. ಅವರು ತಮ್ಮ ಜೀವನದ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುತ್ತಾರೆ. ತಮ್ಮ ಸಂಗಾತಿಗೆ ಉತ್ತಮ ಜೀವನ ನೀಡಬೇಕೆಂಬುದು ಅವರ ಆಸೆಯಾಗಿರುತ್ತದೆ. ಈ ಕಾರಣದಿಂದಲೇ ವಯಸ್ಸಾದ ಪುರುಷರನ್ನು ಮಹಿಳೆಯರು ಇಷ್ಟಪಡುತ್ತಾರೆ.   

5 /5

ವಯಸ್ಸಾದ ಪುರುಷರು ಕಾಳಜಿಯುಳ್ಳ ಸ್ವಭಾವದವರಾಗಿರುತ್ತಾರೆ. ಇವರು ಪ್ರತಿಯೊಂದು ಸನ್ನಿವೇಶದಲ್ಲೂ ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಳ್ಳುತ್ತಾರೆ. ಇಂತಹ ಪುರುಷರು ತಮ್ಮ ಸಂಗಾತಿಗೆ ಸರಿಯಾದ ಸಲಹೆ ನೀಡುವುದರೊಂದಿಗೆ ಅವರ ವೃತ್ತಿಜೀವನಕ್ಕೆ ಸಹಾಯ ಮಾಡುತ್ತಾರೆ. ಪುರುಷರು ತಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಲು ಇಷ್ಟಪಡುತ್ತಾರೆ. ಹೀಗಾಗಿಯೇ ಮಹಿಳೆಯರು ತಮಗಿಂತ ಹಿರಿಯ ವಯಸ್ಸಿನವರನ್ನು ಇಷ್ಟಪಡುತ್ತಾರೆ.