ಸ್ಮೃತಿ ಮಂದಾನ ಬಾಯ್‌ ಫ್ರೆಂಡ್ ಪಲಾಶ್ ಮುಚ್ಚಲ್ ಯಾರು.. ಎಷ್ಟು ಕೋಟಿಯ ಒಡೆಯ ಗೊತ್ತೇ!

Smriti Mandhana Boyfriend: ಸ್ಮೃತಿ ಮಂದಾನ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ದೆಹಲಿ ಕ್ಯಾಪಿಟಲ್ಸ್ ಅನ್ನು ಸೋಲಿಸುವ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ (WPL) ಪ್ರಶಸ್ತಿಯನ್ನು ಗೆದ್ದುಕೊಂಡಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಚಾಂಪಿಯನ್ ಆದ ನಂತರ ತಂಡವು ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾಗ, ಸ್ಮೃತಿ ಮಂದಾನ ಒಬ್ಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ತಬ್ಬಿಕೊಂಡರು. ಈ ವ್ಯಕ್ತಿ ಬೇರೆ ಯಾರೂ ಅಲ್ಲ ಸ್ಮೃತಿ ಮಂದಾನ ಅವರ ಬಾಯ್‌ಫ್ರೆಂಡ್ ಪಲಾಶ್ ಮುಚ್ಚಲ್.

2 /7

ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂದಾನ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ.. ಇಬ್ಬರೂ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟಿಗೆ ಇರುವ ಫೋಟೋಗಳನ್ನು ಸಹ ಶೇರ್‌ ಮಾಡುತ್ತಾರೆ. 

3 /7

ಪಲಾಶ್ ಮುಚ್ಚಲ್ 2023 ರಲ್ಲಿ ಲೈವ್ ಕನ್ಸರ್ಟ್‌ನಲ್ಲಿ ಸ್ಮೃತಿ ಮಂದಾನ ಅವರಿಗೆ ಒಂದು ಹಾಡನ್ನು ಡೆಡಿಕೇಟ್‌ ಮಾಡಿದರು. 'ಐ ಲವ್ ಯೂ ಟು ಸ್ಮೃತಿ' ಎಂದು ಹೇಳಿದರು. ಅಂದೇ ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂದಾನ ಅವರ ಸಂಬಂಧದ ಸುದ್ದಿ ಬೆಳಕಿಗೆ ಬಂದಿತ್ತು.

4 /7

ಪಲಾಶ್ ಮುಚ್ಚಲ್ ಗಾಯಕ ಮತ್ತು ಸಂಗೀತ ಸಂಯೋಜಕ. ಇವರು ಗಾಯಕ ಪಾಲಕ್ ಮುಚ್ಚಲ್ ಅವರ ಸಹೋದರ. ಪಲಾಶ್ ಮುಚ್ಚಲ್ 22 ಮೇ 1995 ರಂದು ಜನಿಸಿದರು.

5 /7

ಪಲಾಶ್ ಮುಚ್ಚಲ್ ಮಧ್ಯಪ್ರದೇಶದ ಇಂದೋರ್ ನಿವಾಸಿಯಾಗಿದ್ದು, ಮಾರ್ವಾಡಿ ಕುಟುಂಬದಿಂದ ಬಂದವರು. ಗಾಯಕ-ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಒಟ್ಟು ಆಸ್ತಿ 20 ರಿಂದ 30 ಕೋಟಿ ರೂ. ಎಂದು ಹೇಳಲಾಗಿದೆ.

6 /7

ಪಲಾಶ್ ಮುಚ್ಚಲ್ ಅವರ ತಂದೆ ರಾಜಕುಮಾರ ಮುಚ್ಚಲ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರ ತಾಯಿ ಅಮಿತಾ ಮುಚ್ಚಲ್ ಗೃಹಿಣಿ. ಬಡ ಮಕ್ಕಳಿಗಾಗಿ ನಿಧಿ ಸಂಗ್ರಹಿಸಲು ಪಲಾಶ್ ಮುಚ್ಚಲ್ ಮತ್ತು ಅವರ ಅಕ್ಕ ಪಾಲಕ್ ಮುಚ್ಚಲ್ ಭಾರತ ಮತ್ತು ವಿದೇಶಗಳಲ್ಲಿ ಸ್ಟೇಜ್‌ ಶೋ ನಡೆಸುತ್ತಾರೆ.

7 /7

ಅಲ್ಲಿಂದ ಬಂದ ಹಣವನ್ನು ಹೃದ್ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುತ್ತಾರೆ. ವರದಿಯ ಪ್ರಕಾರ, ಇಲ್ಲಿಯವರೆಗೆ ಅವರು ಸಾವಿರಾರು ಹೃದ್ರೋಗಿ ಮಕ್ಕಳ ಜೀವ ಉಳಿಸಲು ಸಹಾಯ ಮಾಡಿದ್ದಾರೆ. ಪಲಾಶ್ ಮುಚ್ಚಲ್ 2014 ರಿಂದ ಮನರಂಜನಾ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ.