ಅಯೋಧ್ಯೆಯ ಭವ್ಯ Ram Mandiraದ ಕೆಲ ಆಯ್ದ ಚಿತ್ರಗಳು ನಿಮಗಾಗಿ ಇಲ್ಲಿವೆ

  • Aug 04, 2020, 18:58 PM IST

ಸಂಪೂರ್ಣ ಮಂದಿರ ನಿರ್ಮಾಣ ಕಾರ್ಯ ಮೂರರಿಂದ ಮೂರುವರೆ ವರ್ಷಗಳ ಕಾಲ ಬೇಕಾಗಲಿದೆ. ಈ ದೇಗುಲಕ್ಕೆ ಒಟ್ಟು ಮೂರು ಮಹಡಿಗಳು ಇರಲಿದ್ದು, ವಾಸ್ತುಶಾಸ್ತ್ರದ ನಿಯಮಗಳ ಪ್ರಕಾರ ಇದನ್ನು ನಿರ್ಮಿಸಲಾಗುತ್ತಿದೆ. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಈ ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ರಾಮ ಭಕ್ತರ ನೂರಾರು ವರ್ಷಗಳ ಕನಸು ಮತ್ತು ನಿರೀಕ್ಷೆಗೆ ತೆರೆ ಬೀಳಲಿದೆ. ಈ ಭೂಮಿ ಪೂಜೆಗೆ ಭರದಿಂದ ಸಿದ್ಧತೆಗಳು ನಡೆದಿವೆ.

1 /4

2 /4

ಶ್ರೀರಾಮನ ನಗರ ಅಯೋಧ್ಯೆಯಲ್ಲಿ ಇತಿಹಾಸ ಸೃಷ್ಟಿಗೆ ಇದೀಗ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ರಾಮ ಮಂದಿರ (Ram Mandir) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. 1989 ರಲ್ಲಿ ಪ್ರಸ್ತಾಪಿಸಲಾದ ದೇವಾಲಯದ ಮಾದರಿಯನ್ನು ಬದಲಾಯಿಸಿ ಇದೀಗ ಭವ್ಯ ಸ್ವರೂಪ ನೀಡಲಾಗುತ್ತಿದೆ. ಮೊದಲ ದೇವಾಲಯದ ಮುಖ್ಯ ಗೋಪುರದ ಎತ್ತರವನ್ನು 128 ಅಡಿಗಳಷ್ಟು ಇರಲಿದೆ ಎಂದು ಹೇಳಲಾಗಿತ್ತು. ಇದೀಗ  ಅದು 161 ಅಡಿ ಇರಲಿದೆ ಮೂರು ಗೋಪುರಗಳ ಬದಲು, ಐದು ಗುಮ್ಮಟಗಳಗಳು ಇರಲಿದ್ದು ಕೆಳಭಾಗವು ನಾಲ್ಕು ಹಾಗೂ ಒಂದು ಪ್ರಮುಖ ಶಿಖರ ಇರಲಿದೆ

3 /4

ರಾಮ ಮಂದಿರ ನಿರ್ಮಾಣದಲ್ಲಿ ರಾಜಸ್ಥಾನದ ಬನ್ಸಿ ಪಹಾರ್‌ಪುರದ ಕಲ್ಲು ಬಳಸಲಾಗುವುದು. ಬನ್ಶಿ ಪಹಾರ್ಪುರ್ ಪ್ರದೇಶದ ಕಲ್ಲು ತನ್ನ ಶಕ್ತಿ ಮತ್ತು ಸೌಂದರ್ಯಕ್ಕೆ ವಿಶ್ವ ಪ್ರಸಿದ್ಧವಾಗಿದೆ. ಅದರ ವಿಶೇಷತೆಯನ್ನು ನೋಡಿ, ಈ ಕಲ್ಲುಗಳನ್ನು ದೇಶದ ದೊಡ್ಡ ದೇವಾಲಯಗಳು ಮತ್ತು ಕಟ್ಟಡಗಳಲ್ಲಿ ಅಳವಡಿಸಲಾಗಿದೆ. ಈ ಕಲ್ಲುಗಳಿಗೆ ಅಯೋಧ್ಯೆಯಲ್ಲಿ ಭಗವಾನ್ ರಾಮ ದೇವಾಲಯವನ್ನು ನಿರ್ಮಿಸಲು ವಿಶೇಷವಾಗಿ ತರಿಸಿಕೊಳ್ಳಲಾಗುತ್ತಿದೆ.

4 /4

ರಾಮ್ ಮಂದಿರ ನಿರ್ಮಾಣಕ್ಕೆ ಸುಮಾರು ನಾಲ್ಕು ಲಕ್ಷ ಘನ ಅಡಿ ಕಲ್ಲು ಬಳಸಲಾಗುವುದು. ಇದರಲ್ಲಿ ಸುಮಾರು 2.75 ಲಕ್ಷ ಘನ ಅಡಿ ಕಲ್ಲು ಭರತ್‌ಪುರದ ಬನ್ಸಿ ಪಹಾರ್‌ಪುರದ ಮರಳು ಕಲ್ಲಿನಿಂದ ಕೂಡಿರುತ್ತದೆ. ಮಣ್ಣಿನ ಪರೀಕ್ಷಾ ವರದಿಯನ್ನು ಆಧರಿಸಿ ದೇವಾಲಯದ ಅಡಿಪಾಯವನ್ನು ಹಾಕಲಾಗುತ್ತಿದೆ. ಇದು 20 ರಿಂದ 25 ಅಡಿ ಆಳವಿರಬಹುದು. ವೇದಿಕೆ ಎಷ್ಟು ಎತ್ತರವಾಗಲಿದೆ ಎಂಬುದನ್ನು ರಾಮ್ ದೇವಾಲಯದ ಟ್ರಸ್ಟ್ ನಿರ್ಧರಿಸಲಿದೆ. ಪ್ರಸ್ತುತ 12 - 14 ಅಡಿಗಳಷ್ಟು ಇರಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.