ನಿಮಗೂ ಹೆಚ್ಚು ಟೊಮ್ಯಾಟೋ ಸೇವಿಸುವ ಅಭ್ಯಾಸವಿದೆಯೇ? ಹುಷಾರ್!

ಟೊಮ್ಯಾಟೋ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಟೊಮ್ಯಾಟೋ ಆರೋಗ್ಯಕ್ಕೂ ಕೂಡ ಒಳ್ಳೆಯದು. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಟೊಮ್ಯಾಟೋ ಸೇವನೆಯು ಆರೋಗ್ಯಕ್ಕೆ ಹಾನಿಕರವಾಗಬಹುದು ಎಂದು ನಿಮಗೆ ತಿಳಿದಿದೆಯೇ? 

ಪ್ರತಿಯೊಬ್ಬ ಭಾರತೀಯರ ಮನೆಯಲ್ಲಿಯೂ ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲಿ ಟೊಮ್ಯಾಟೋ ಇದ್ದೇ ಇರುತ್ತದೆ. ಟೊಮ್ಯಾಟೋ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಟೊಮ್ಯಾಟೋ ಆರೋಗ್ಯಕ್ಕೂ ಕೂಡ ಒಳ್ಳೆಯದು. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಟೊಮ್ಯಾಟೋ ಸೇವನೆಯು ಆರೋಗ್ಯಕ್ಕೆ ಹಾನಿಕರವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಟೊಮ್ಯಾಟೋವನ್ನು ಅತಿಯಾಗಿ ಸೇವಿಸುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

1 /5

ಟೊಮ್ಯಾಟೋಗಳು ಹೆಚ್ಚು ತಿಂದಾಗ ನಿಮ್ಮ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಹುದು. ಟೊಮ್ಯಾಟೋಗಳನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಕಾರಿ ತೊಂದರೆಗಳಿಂದ ಹಿಡಿದು ಅತಿಸಾರ, ಮೂತ್ರಪಿಂಡದ ಸಮಸ್ಯೆಗಳು ಮತ್ತು ದೇಹದ ನೋವಿನವರೆಗೆ ನಮ್ಮ ದೇಹಕ್ಕೆ ಕೆಲವು ಗಂಭೀರ ಹಾನಿಯನ್ನುಂಟುಮಾಡುತ್ತದೆ.

2 /5

ಆಮ್ಲೀಯತೆ ಸಮಸ್ಯೆ:  ಟೊಮ್ಯಾಟೋಗಳು ಮಾಲಿಕ್ ಆಮ್ಲ ಮತ್ತು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ನಿಮ್ಮ ಹೊಟ್ಟೆಯನ್ನು ಅತಿಯಾಗಿ ಆಮ್ಲೀಯವಾಗಿಸುತ್ತದೆ. ಹೆಚ್ಚು ಟೊಮೆಟೊಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಹೆಚ್ಚುವರಿ ಗ್ಯಾಸ್ಟ್ರಿಕ್ ಆಮ್ಲದ ಉತ್ಪಾದನೆಯಿಂದಾಗಿ ಎದೆ ಉರಿ ಸಮಸ್ಯೆ ಉಂಟಾಗಬಹುದು.

3 /5

ಅತಿಯಾದ ಟೊಮ್ಯಾಟೋ ಸೇವನೆ ಕಿಡ್ನಿ ಸ್ಟೋನ್ ಸಮಸ್ಯೆಗೂ ಕಾರಣವಾಗಬಹುದು. ಟೊಮ್ಯಾಟೋಗಳಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್‌ನಲ್ಲಿ ಸಮೃದ್ಧವಾಗಿವೆ, ಇದು ದೇಹದಲ್ಲಿ ಅಧಿಕವಾಗಿರುವಾಗ, ಸುಲಭವಾಗಿ ಚಯಾಪಚಯಗೊಳ್ಳುವುದಿಲ್ಲ. ಈ ಅಂಶಗಳು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದು ಕಿಡ್ನಿ ಸ್ಟೋನ್ ಸಮಸ್ಯೆಗೂ ಕಾರಣವಾಗಬಹುದು.

4 /5

ಕೀಲು ನೋವು :  ಹೆಚ್ಚಾಗಿ ಟೊಮ್ಯಾಟೋ ಬಳಸುವುದರಿಂದ ಕೀಲುಗಳಲ್ಲಿ ಊತ ಮತ್ತು ನೋವಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. 

5 /5

ಅತಿಸಾರ: ಟೊಮ್ಯಾಟೋಗಳು ಅತಿಸಾರಕ್ಕೆ ಕಾರಣವಾದ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಆದಾಗ್ಯೂ, ಟೊಮ್ಯಾಟೋ ಅಸಹಿಷ್ಣುತೆ ಹೊಂದಿರದ ಜನರಲ್ಲಿ ಅತಿಸಾರವು ಬಹಳ ಅಪರೂಪ ಎಂದು ಹೇಳಲಾಗುತ್ತದೆ.