ಈ ರಾಶಿಯವರನ್ನು ಸೋಲಲು ಬಿಡುವುದಿಲ್ಲ ರಾಹು ! ಎಂಥ ಸನ್ನಿವೇಶವಿದ್ದರೂ ಹೇಳುವುದು ಇವರದ್ದೇ

ರಾಹು ಶುಭ ಸ್ಥಾನದಲ್ಲಿದ್ದರೆ, ಒಬ್ಬ ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾನೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಗೆ ಹಣ ಸಂಪಾದಿಸಲು ಹಲವು ಅವಕಾಶಗಳು  ಒದಗಿ ಬರುತ್ತವೆ. 

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳಲ್ಲಿ ರಾಹುವನ್ನು ದುಷ್ಟ ಗ್ರಹವೆಂದು ಪರಿಗಣಿಸಲಾಗಿದೆ. ರಾಹುವು ನೆರಳು ಗ್ರಹವಾಗಿದೆ. ಇದು ಯಾವುದೇ ರಾ ಶಿಯ ಅಧಿಪತ್ಯ ಹೊಂದಿಲ್ಲ. ಜಾತಕದಲ್ಲಿ ರಾಹುವಿನ ಸ್ಥಾನವು ವ್ಯಕ್ತಿಗೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ರಾಹು ಅಶುಭವಾಗಿದ್ದಾಗ, ವ್ಯಕ್ತಿಯ ನಿದ್ರೆಯ ತೊಂದರೆಗಳು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಒತ್ತಡದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರಾಹು ಒಬ್ಬ ವ್ಯಕ್ತಿಯನ್ನು ಕೆಟ್ಟ ಕೆಲಸಗಳಿಗೆ ಕರೆದೊಯ್ಯುತ್ತಾನೆ ಎಂದು ಹೇಳಲಾಗುತ್ತದೆ. 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ವ್ಯಕ್ತಿಯ ಜೀವನದಲ್ಲಿ ರಾಹುವಿನ ಪ್ರಭಾವವು ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.  ಮತ್ತೊಂದೆಡೆ, ರಾಹು ಶುಭ ಸ್ಥಾನದಲ್ಲಿದ್ದರೆ, ಒಬ್ಬ ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾನೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಗೆ ಹಣ ಸಂಪಾದಿಸಲು ಹಲವು ಅವಕಾಶಗಳು  ಒದಗಿ ಬರುತ್ತವೆ. 

2 /4

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜಾತಕದಲ್ಲಿ ರಾಹುವು ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿಗೆ ಜೀವನದಲ್ಲಿ ಉನ್ನತ ಸ್ಥಾನ, ಗೌರವ ಇತ್ಯಾದಿಗಳು ದೊರೆಯುತ್ತವೆ. ಜ್ಯೋತಿಷ್ಯದಲ್ಲಿ ಅಂಥಹ ಕೆಲವು ರಾಶಿಯನ್ನು ಹೇಳಲಾಗಿದೆ. 

3 /4

ವೈದಿಕ ಜ್ಯೋತಿಷ್ಯದ ಪ್ರಕಾರ, ವೃಶ್ಚಿಕ ರಾಶಿಯನ್ನು ರಾಹುವಿಗೆ ಪ್ರಿಯವೆಂದು ಪರಿಗಣಿಸಲಾಗಿದೆ. ವೃಶ್ಚಿಕ ರಾಶಿಯವರಿಗೆ ರಾಹು ಯಾವತ್ತೂ ತೊಂದರೆ ಕೊಡುವುದಿಲ್ಲ ಎಂದು ಹೇಳಲಾಗಿದೆ. ಜಾತಕದಲ್ಲಿ ರಾಹು ಅಶುಭ ಸ್ಥಾನದಲ್ಲಿಲ್ಲದಿದ್ದರೂ ಸಹ ಇವರನ್ನು ಕಾಡುವುದೇ ಇಲ್ಲವಂತೆ. ರಾಹು ಈ ರಾಶಿಗೆ ಪ್ರವೇಶಿಸಿದಾಗ ಶುಭ ಫಲಗಳು ದೊರೆಯುತ್ತವೆ. ಅಂತಹ ಜನರು ಇದ್ದಕ್ಕಿದ್ದಂತೆ ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದಾಗಿ ಅವರ ಆದಾಯದ ಮೂಲವೂ ಹೆಚ್ಚುತ್ತದೆ. ಈ ಜನರು ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ, ಮಾತ್ರವಲ್ಲ ಇವರ ಜೀವನದಲ್ಲಿ ಹಣದ ಕೊರತೆ  ಎದುರಾಗುವುದೇ ಇಲ್ಲ.  

4 /4

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹುವಿನ ನೆಚ್ಚಿನ ರಾಶಿಗಳಲ್ಲಿ ಸಿಂಹ ರಾಶಿ ಕೂಡಾ ಒಂದು. ಸಿಂಹ ರಾಶಿಯಲ್ಲಿ ರಾಹು ಬಂದರೆ ಅದು ಅವರಿಗೆ ಲಾಭದಾಯಕವಾಗಿರುತ್ತದೆ. ಜ್ಯೋತಿಷಿಗಳ ಪ್ರಕಾರ, ಸಿಂಹ ರಾಶಿಯಲ್ಲಿ ರಾಹು ಬರುವುದರಿಂದ ಹಠಾತ್ ವಿತ್ತೀಯ ಲಾಭವನ್ನು ನೀಡುತ್ತದೆ. ಇದರಿಂದ ವ್ಯಕ್ತಿಯು ಜೀವನದ ಎಲ್ಲಾ ಭೌತಿಕ ಸೌಲಭ್ಯಗಳನ್ನು ಪಡೆಯುತ್ತಾನೆ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)