Shani Vakri: 4 ದಿನಗಳ ನಂತರ ರಾಹು-ಕೇತು-ಶನಿ ಹಿಮ್ಮುಖ ಚಲನೆ, ಈ ರಾಶಿಯವರಿಗೆ ಕಾದಿದೆ ಆಪತ್ತು !

Saturn Retrograde 2023: ಶನಿಯು ಎಲ್ಲಾ ಗ್ರಹಗಳಿಗಿಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. 2023 ರ ಆರಂಭದಲ್ಲಿ, ಜನವರಿ 17 ರಂದು, ಸ್ವರಾಶಿ ಕುಂಭ ರಾಶಿಗೆ 30 ವರ್ಷಗಳ ನಂತರ ಶನಿ ಪ್ರವೇಶಿಸಿದ್ದಾನೆ. ಜೂನ್ 17 ರಂದು ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. 

Shani Vakri 2023: ರಾಹು-ಕೇತುಗಳು ಸಹ ಶನಿಯೊಂದಿಗೆ ಹಿಮ್ಮುಖವಾಗಿ ಚಲಿಸಲಿವೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರ ಅಂದರೆಸ ಜೂನ್ 17 ರಂದು ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ಶನಿಯು ತನ್ನ ಸ್ವಂತ ರಾಶಿಯಲ್ಲಿ 6 ತಿಂಗಳವರೆಗೆ ಹಿಮ್ಮುಖ ಚಲನೆಯಲ್ಲಿರುತ್ತಾನೆ. ಶನಿಯ ಜೊತೆಗೆ, ಇತರ ಎರಡು ಗ್ರಹಗಳು ಅಕ್ಟೋಬರ್ ವರೆಗೆ ಹಿಮ್ಮುಖವಾಗಿ ಚಲಿಸುತ್ತವೆ. ಈ 4 ರಾಶಿಗಳು ಇದರಿಂದ ನಷ್ಟವನ್ನು ಅನಿಭವಿಸಲಿವೆ.

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಸಂಗತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಶನಿ ವಕ್ರಿ: ಮುಂದಿನ 6 ತಿಂಗಳಲ್ಲಿ 3 ಗ್ರಹಗಳ ಹಿಮ್ಮುಖ ಚಲನೆ ಸಂಭವಿಸಲಿದೆ. ಇದರ ಪರಿಣಾಮವು ಈ 4 ರಾಶಿಗಳ ಮೇಲೆ ಕಂಡುಬರುತ್ತದೆ. ಈ ಜನರು ಆರೋಗ್ಯ, ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಬೇಕು.   

2 /5

ಕಟಕ ರಾಶಿ: ಶನಿಯೊಂದಿಗೆ ರಾಹು-ಕೇತುಗಳ ಹಿಮ್ಮುಖ ಚಲನೆಯಿಂದಾಗಿ, ಕಟಕ ರಾಶಿಯವರು ಮುಂದಿನ 6 ತಿಂಗಳವರೆಗೆ ತಮ್ಮ ವೃತ್ತಿಜೀವನದ ವಿಚಾರದಲ್ಲಿ ಎಚ್ಚರದಿಂದ ಇರಬೇಕು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ರಾಶಿಯವರಿಗೆ ಹಣಕಾಸಿನ ವಿಷಯಗಳಲ್ಲಿ ಸಹ ತೊಂದರೆಯಾಗುವ ಸಾಧ್ಯತೆಯಿದೆ. ಸಾಲ ಪಡೆದ ಜನರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಜೀವನದಲ್ಲಿ ಗೊಂದಲ ಹೆಚ್ಚಾಗಲಿದೆ. ಕೌಟುಂಬಿಕ ಜೀವನದಲ್ಲಿ ಒತ್ತಡ ಹೆಚ್ಚಾಗಲಿದೆ.  

3 /5

ಸಿಂಹ ರಾಶಿ: ಈ 3 ಗ್ರಹಗಳ ಹಿಮ್ಮುಖ ಚಲನೆಯು ಸಿಂಹ ರಾಶಿಯವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶ್ರಮಕ್ಕೆ ತಕ್ಕ ಫಲಿತಾಂಶ ಸಿಗದ ಕಾರಣ ನಿರಾಸೆ ನಿಮ್ಮನ್ನು ಕಾಡಲಿದೆ. ಹೊಸ ಉದ್ಯೋಗಕ್ಕಾಗಿ ಹುಡುಕುವ ಬಗ್ಗೆ ಗೊಂದಲ ಕಾಡಬಹುದು. ಈ ಸಮಯದಲ್ಲಿ ಏನೇ ಮಾಡಿದರೂ ನಿಮಗೆ ಮಾನಸಿಕ ಶಾಂತಿ ಸಿಗುವುದಿಲ್ಲ. ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆಯಿಂದ ಯೋಚಿಸಿ. ಯಾವುದೇ ಕಾನೂನು ವಿಷಯದಲ್ಲಿ ಜಾಗರೂಕರಾಗಿರಿ. 

4 /5

ವೃಶ್ಚಿಕ ರಾಶಿ: ಮುಂಬರುವ 6 ತಿಂಗಳು ಈ ರಾಶಿಯವರಿಗೆ ತುಂಬಾ ಕಷ್ಟವಾಗಲಿದೆ. ಶನಿ, ರಾಹು ಮತ್ತು ಕೇತುಗಳು ಕೌಟುಂಬಿಕ ವಿಷಯಗಳಲ್ಲಿ ಜಾಗರೂಕರಾಗಿರಿ. ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಸಮಸ್ಯೆಗಲು ಉಂಟಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ವ್ಯಾಪಾರಸ್ಥರು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗಬಹುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಜನರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. ಈ ಸಮಯದಲ್ಲಿ ಪೇಪರ್ಸ್ ಇಲ್ಲದೆ ಹಣಕಾಸಿನ ವ್ಯವಹಾರಗಳನ್ನು ಮಾಡಬೇಡಿ. 

5 /5

ಮೀನ ರಾಶಿ: ಪ್ರಸ್ತುತ ಸಾಡೇ ಸತಿಯ ಮೊದಲ ಹಂತದಲ್ಲಿ ಈ ರಾಶಿಯವರಿದ್ದಾರೆ. ಅದರ ಜೊತೆ 3 ಗ್ರಹಗಳ ಹಿಮ್ಮುಖ ಸಂಚಾರ ನಿಮ್ಮ ಮಾನಸಿಕ, ಆರ್ಥಿಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಮನಸ್ಸಿನಲ್ಲಿ ಏನೋ ಗೊಂದಲವಿರಬಹುದು. ಸಂಗಾತಿಯೊಂದಿಗಿನ ವಾದಗಳು ಮತ್ತು ಸಮನ್ವಯದ ಕೊರತೆಯಿಂದಾಗಿ ಮನೆಯ ವಾತಾವರಣ ಹಾಳಾಗಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಹೆಚ್ಚಿನ ಹಣ ಖರ್ಚಾಗಲಿದೆ.