ದೊಡ್ಮನೆ ಕುಡಿಗೆ ಬರ್ತ್‌ಡೇ ಸಂಭ್ರಮ..! ʼಯುವʼ ಬಗ್ಗೆ ಅಪ್ಪು ಫ್ಯಾನ್ಸ್‌ ಕನಸ್ಸು ಏನ್‌ ಗೊತ್ತಾ..?

Yuva rajkumar Birthday : ಇಂದು ರಾಜ್‌ ಕುಟುಂಬದ ಕುಡಿ, ರಾಘವೇಂದ್ರ ರಾಜ್‌ಕುಮಾರ್‌ ಅವರ ಪುತ್ರ ನಟ ಯುವ ರಾಜ್​ಕುಮಾರ್‌ ತಮ್ಮ 30ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಯುವ ಮನೆ ಮುಂದೆ ಅಭಿಮಾನಿಗಳ ದಂಡೇ ನರೆದಿತ್ತು, ಕೇಕ್‌ ಕಟ್‌ ಮಾಡಿ ಯುವ ಫ್ಯಾನ್‌ ಸಂಭ್ರಮಿಸಿದರು.

Yuva rajkumar : ನಟ ಯುವರಾಜ್‌ ಕುಮಾರ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ, ರಾಜ್ಯಾದ್ಯಂತ ಅವರ ಅಭಿಮಾನಿಗಳು ಕೇಕ್‌ ಕಟ್‌ ಮಾಡಿ ಶುಭ ಕೋರುತ್ತಿದ್ದಾರೆ. ಇದರ ನಡುವೆ, ಅಪ್ಪು ಅಭಿಮಾನಿಗಳು ಯುವನಿಗೆ ವಿಶ್‌ ಮಾಡುತ್ತಿದ್ದಾರೆ.
 

1 /6

ಸದಾಶಿವನಗರದಲ್ಲಿರುವ ರಾಘವೇಂದ್ರ ರಾಜ್‌ಕುಮಾರ್‌ ಅವರ ಮನೆಯ ಬಳಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.  

2 /6

ಅಭಿಮಾನಿಗಳ ಮಧ್ಯೆ ಯುವ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.  

3 /6

ಅಪ್ಪು ಅಭಿಮಾನಿಗಳು ಸಹ ಯುವಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ. ಅಲ್ಲದೆ, ಅಪ್ಪು ಉತ್ತರಾಧಿಕಾರಿಯಾಗಿ ಅವರ ಮಾರ್ಗದಲ್ಲಿ ನಡೆಯುವ ಭರವಸೆ ವ್ಯಕ್ತಪಡಿಸಿದ್ದಾರೆ.  

4 /6

ಹೌದು.. ಅಪ್ಪು ಅಗಲಿಕೆ ನಂತರ ಯುವ ಅವರಲ್ಲಿ ಅಪ್ಪು ಅವರನ್ನು ಕಾಣುತ್ತಿದ್ದಾರೆ ರಾಜರತ್ನನ ಅಭಿಮಾನಿಗಳು.  

5 /6

ಯುವರಾಜ್‌ಕುಮಾರ್‌ಗೂ ಸಹ ಅಪ್ಪು ಅಂದ್ರೆ ತುಂಬಾ ಇಷ್ಟ, ಅವರ ಸ್ಪೂರ್ತಿಯಿಂದಲೇ ಈಗಾಗಲೇ ʼಯುವʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  

6 /6

ಇತ್ತ ಯುವ ನಟನೆಯ ಮುಂಬರುವ ʼಯುವʼ ಸಿನಿಮಾದ ಹೊಸ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಹೊಂಬಾಳೆ ಫಿಲಂಸ್‌ ಶುಭ ಕೋರಿದೆ.