ನನ್ನ ಮರ್ಯಾದೆಗೆ ಭಂಗ ಬಂದಿದೆ.. ಅದಕ್ಕೆ..! ಮಹತ್ವದ ನಿರ್ಧಾರ ತೆಗೆದುಕೊಂಡ ʼಪುಷ್ಪಾʼ ನಟಿ

Anchor Anasuya  : ಅಲ್ಲು ಅರ್ಜುನ್‌ ನಟನೆಯ ಪುಷ್ಪಾ ಸಿನಿಮಾದಲ್ಲಿ ನಟಿಸಿ ಸೌಥ್‌ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿರುವ ನಟಿ ಅನಸೂಯಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ನಿರೂಪಕಿಯಾಗಿ ಕಿರುತೆಗೆ ಕಾಲಿಟ್ಟು ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಧ್ಯ ಅನಸೂಯ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

1 /7

ನಟಿ ಅನಸೂಯಾ ಇತ್ತೀಚೆಗಷ್ಟೇ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಮಾಹಿತಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಮರ್ಯಾದೆಗೆ ಭಂಗ ತಂದರೆ.. ಅವರನ್ನು ದೂರವಿಡುವುದು ಪ್ರಮುಖ ನಿರ್ಧಾರ.. ಇನ್ನು ಮುಂದೆ ವಾದ ಮತ್ತು ನಾಟಕಕ್ಕೆ ಅವಕಾಶವಿಲ್ಲ. ಯಾರು ಏನು ಹೇಳಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ನಾನು ಅವರೊಂದಿಗೆ ಮಾತನಾಡುವುದನ್ನು ನಿಲ್ಲಿಸುತ್ತೇನೆ, ನಾನು ರಜೆಯಲ್ಲಿದ್ದೇನೆ.. ಎಂದು ಪೋಸ್ಟ್ ಮಾಡಿದ್ದಾಳೆ. ಆದ್ರೆ ಈ ಮಾತು ಯಾರಿಗೆ ಹೇಳಿದ್ರು ಎನ್ನುವುದು ಸ್ಪಷ್ಟವಾಗಿಲ್ಲ  

2 /7

ಆಂಕರ್ ಅನಸೂಯಾ ರಂಗಸ್ಥಳ ಸಿನಿಮಾದ ಮೂಲಕ ಮುನ್ನೆಲೆಗೆ ಬಂದರು, ಪುಷ್ಪಾ ಸಿನಿಮಾದ ಮೂಲಕ ದಕ್ಷಿಣದಲ್ಲಿಯೂ ಮಿಂಚಿದರು.  

3 /7

ಪ್ರಸ್ತುತ ಅವರು ಓಟಿಟಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರು ವಿಮಾನ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಮುದ್ರಖನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.   

4 /7

ಸದ್ಯ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ‘ಕನ್ಯಾಶುಲ್ಕಂ’ ಎಂಬ ವೆಬ್ ಸೀರಿಸ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಈ ವೆಬ್ ಸರಣಿಯು ಗುರಜಾಡ ಅಪ್ಪಾರಾವ್ ಅವರ ಶ್ರೇಷ್ಠ ನಾಟಕ 'ಕನ್ಯಾಶುಲ್ಕಂ' ಅನ್ನು ಆಧರಿತ ಸಿನಿಮಾವಾಗಿದೆ.   

5 /7

'ಕನ್ಯಾಶುಲ್ಕಂ' ವೆಬ್ ಸೀರಿಸ್ ನಲ್ಲಿ ಮಧುರವಾಣಿ ಎಂಬ ವೇಶ್ಯೆಯ ಪಾತ್ರದಲ್ಲಿ ಅನಸೂಯಾ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇತ್ತೀಚಿನ ಮಾತು. ಜನಪ್ರಿಯ ನಿರ್ದೇಶಕ ಕ್ರಿಶ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.   

6 /7

ಮತ್ತೊಂದೆಡೆ, ಅನಸೂಯಾ ಅವರ ಸಂಭಾವನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ರೂ. 2 ಲಕ್ಷದವರೆಗೆ ಸಂಭಾವನೆ ಇದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.   

7 /7

ತೆಲುಗು ಅಲ್ಲದೆ, ಮಲಯಾಳಂ ಚಿತ್ರದಲ್ಲಿ ಕಾಣಿಸಿಕೊಂಡಿರುವ ಅನಸೂಯಾಗೆ ಮತ್ತೊಂದು ಮಲಯಾಳಂ ಚಿತ್ರದಲ್ಲಿ ಅವಕಾಶ ಸಿಕ್ಕಿದೆ ಎನ್ನಲಾಗಿದೆ. ಇವುಗಳ ಜೊತೆಗೆ ಎರಡು ತಮಿಳು ಸಿನಿಮಾಗಳಲ್ಲೂ ಅನಸೂಯಾ ನಟಿಸುತ್ತಿದ್ದಾರೆ.