ಕುಂಬಳಕಾಯಿ ಬೀಜ.. ಎನ್‌ ಮಾಡ್ಲಿ ತಗೊಂಡು ಅಂತ ಎಸೆಯಬೇಡಿ..! ಮೆಮೊರಿ ಪವರ್‌ ಹೆಚ್ಚಿಸುತ್ತವೆ

Pumpkin seeds Benefits: ಆಹಾರದಲ್ಲಿ ಕುಂಬಳಕಾಯಿಯನ್ನು ಸೇರಿಸುವುದು ತುಂಬಾ ಪ್ರಯೋಜನಕಾರಿ ಅಂತ ಎಲ್ಲರಿಗೂ ಗೊತ್ತಿದೆ. ಇದು ಪೌಷ್ಟಿಕಾಂಶದ ತರಕಾರಿ ಮಾತ್ರವಲ್ಲ, ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಸಹ. ಈ ಬೀಜಗಳು ವಿಟಮಿನ್‌, ಪ್ರೋಟೀನ್‌ ಮತ್ತು ಒಮೆಗಾ 6 ಹಾಗೂ ಒಮೆಗಾ 3 ನಂತಹ ಜೈವಿಕ ಸಕ್ರಿಯ ರಾಸಾಯನಿಕಗಳಿಂದ ತುಂಬಿವೆ.

Pumpkin seeds for memory power : ಕುಂಬಳಕಾಯಿಯನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೂ ಅಂತ ಯಾವತ್ತೂ ಅದರ ಬೀಜಗಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಹೊರಗೆ ಎಸೆದ್ರೆ ಸಸಿ ಆಗುತ್ತೆ ಅಂತ ಹಿತ್ತಲಕ್ಕೆ ಎಸೆಯುವ ಮುನ್ನ ಈ ಬೀಜಗಳ ಮಹತ್ವವನ್ನು ಅರಿಯುವುದು ತುಂಬಾ ಅವಶ್ಯಕ. ಏಕೆಂದರೆ ಕುಂಬಳಕಾಯಿ ಬೀಜಗಳು ಜೀವಸತ್ವಗಳು, ಪ್ರೋಟೀನ್ ಮತ್ತು ಒಮೆಗಾ 6 ಮತ್ತು ಒಮೆಗಾ 3 ರ ಮೂಲವಾಗಿದೆ, ಇದು ಉತ್ತಮ ಸ್ಮರಣಾ ಶಕ್ತಿ ಹೆಚ್ಚಿಸುತ್ತವೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..

1 /5

ಜೀವಸತ್ವಗಳು, ಪ್ರೋಟೀನ್‌ಗಳು ಮತ್ತು ಜೈವಿಕ ಸಕ್ರಿಯ ರಾಸಾಯನಿಕಗಳಿಂದ ಸಮೃದ್ಧವಾಗಿರುವ ಕುಂಬಳಕಾಯಿ ಬೀಜಗಳು ಸ್ಮರಣಾ ಶಕ್ತಿಯನ್ನು ಸುಧಾರಿಸುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.  

2 /5

ವರದಿಗಳ ಪ್ರಕಾರ, ಮಧುಮೇಹ ಇರುವವರಿಗೆ ಕುಂಬಳಕಾಯಿ ಬೀಜಗಳು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಹೆಚ್ಚುವರಿಯಾಗಿ, ಈ ಬೀಜಗಳ ಸೇವನೆಯು ಚರ್ಮದ ಆರೋಗ್ಯ ಸುಧಾರಣೆಗೆ ಒಳ್ಳೆಯದರು ಅಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.  

3 /5

ಕುಂಬಳಕಾಯಿ ಬೀಜಗಳು ಫೈಬರ್, ಮೆಗ್ನೀಸಿಯಮ್, ಜೀವಸತ್ವಗಳು, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ಸೋಡಿಯಂ, ಕಾರ್ಬೋಹೈಡ್ರೇಟ್‌ಗಳು, ಥಯಾಮಿನ್ ಮತ್ತು ಸತು ಸೇರಿದಂತೆ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಕುಂಬಳಕಾಯಿ ಬೀಜಗಳು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಯ ಹುಳುಗಳನ್ನು ತೆಗೆದುಹಾಕುತ್ತದೆ.  

4 /5

ಹೆಚ್ಚಿನ ನಾರಿನಂಶವನ್ನು ಹೊಂದಿರುವ ಕುಂಬಳಕಾಯಿ ಬೀಜಗಳ ಸೇವನೆಯು ಹೊಟ್ಟೆಯನ್ನು ತುಂಬುವ ಮೂಲಕ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಕುಂಬಳಕಾಯಿ ಬೀಜಗಳು ಪುರುಷರ ಲೈಂಗಿಕ ಆರೋಗ್ಯ ಮತ್ತು ಕಾಮವನ್ನು ಹೆಚ್ಚಿಸುವಲ್ಲಿ ಪಾತ್ರವಹಿಸುತ್ತವೆ.

5 /5

ಲೈಂಗಿಕ ಆರೋಗ್ಯದಲ್ಲಿ ಕುಂಬಳಕಾಯಿ ಬೀಜಗಳ ಪಾತ್ರ ದೊಡ್ಡದು. ಈ ಬೀಜಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು, ಜೀರ್ಣಕ್ರಿಯೆಯನ್ನು ಹೆಚ್ಚಿಸಲು, ಮೂಳೆಗಳನ್ನು ಬಲಪಡಿಸಲು ಪ್ರಯೋಜನಕಾರಿಯಾಗಿದೆ. ಇದು ಮೂತ್ರದ ಸೋಂಕು ಮತ್ತು ಮೂತ್ರಕೋಶದ ಕಲ್ಲುಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.