Salaar trailer : ಸಲಾರ್ ಟ್ರೇಲರ್‌ನಲ್ಲಿಯೂ ಮುಗೋರ್‌ಗೆ ಬದಲಾಗಿ ಖಾನ್‌ಸಾರ್‌ನಿಂದ ಕಥೆ ಪ್ರಾರಂಭವಾಗುತ್ತದೆ. ಅಲ್ಲದೆ, ನಿನಗಾಗಿ ಏನ್ ಬೇಕಾದ್ರೂ ಮಾಡ್ತೀನಿ ಅನ್ನುವ ಪ್ರಭಾಸ್ ಮಾತುಗಳಂತೂ, ಉಗ್ರಂನ ಅಗಸ್ತ್ಯ ತನ್ನ ಸ್ನೇಹಿತ ಬಾಲನಿಗೆ ಕೇಳುವ ಮಾತಿನ ದಾಟಿಯಲ್ಲಿವೆ... ಅಲ್ಲದೆ...
Salaar Ugramm remake : ಸಲಾರ್ ಟ್ರೈಲರ್ ರಿಲೀಸ್ ಹಿನ್ನೆಲೆ ಎಲ್ಲೇಡೆ ಒಂದೇ ಒಂದು ಮಾತು ಕೇಳಿ ಬರುತ್ತಿದೆ. ಈ ಸಿನಿಮಾ ಕನ್ನಡದ ಶ್ರೀಮುರಳಿ ನಟನೆಯ ಉಗ್ರಂ ಸಿನಿಮಾದ ರಿಮೇಕ್ ಅಂತ. ಅದ್ರೆ, ಕನ್ನಡಿಗರಿಗೆ ಬಿಟ್ಟು ಹೆಚ್ಚು ʼಉಗ್ರಂʼ ಬಗ್ಗೆ ಪರಭಾಷಿಗರಿಗೆ ಗೊತ್ತಿಲ್ಲದ ಕಾರಣ ಅಷ್ಟೇನೂ ಎಫೆಕ್ಟ್ ಈ ಸಿನಿಮಾಗೆ ಬೀಳಲ್ಲ ಅನಿಸುತ್ತದೆ. ಹಾಗಿದ್ರೆ ಸಲಾರ್‌ಗೂ ಮತ್ತು ಉಗ್ರಂಗೂ ಅಂತಹ ವ್ಯತ್ಯಾಸ ಏನ್ ಇದೆ ಅಂತ ಗಮನಿಸೋಣ ಬನ್ನಿ.
ಉಗ್ರಂ ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ. ಈ ಚಿತ್ರದ ಬಗ್ಗೆ ಗೊತ್ತಿರದ ಕನ್ನಡ ಸಿನಿ ಅಭಿಮಾನಿಗಳೇ ಇಲ್ಲ ಅಂದ್ರೂ ತಪ್ಪಾಗಲ್ಲ. ಅಷ್ಟರ ಮಟ್ಟಿಗೆ ಉಗ್ರಂ ಎಲ್ಲರಿಗೂ ಇಷ್ಟವಾಗಿತ್ತು. ಮುಗೋರ್ ನಿಂದ ಪ್ರಾರಂಭವಾಗುವ ಕಥೆಯಲ್ಲಿ ಸ್ನೇಹಿತನಿಗೆ ಕೊಟ್ಟ ಭಾಷೆ, ಅಮ್ಮನಿಗೆ ನೀಡಿದ ಮಾತು ಉಗ್ರಂನ ಮೈನ್ ಕಂಟೈಟ್ ಆಗಿತ್ತು.
ಅದರಂತೆ ಇತ್ತೀಚಿಗೆ ರಿಲೀಸ್ ಆದ ಸಲಾರ್ ಟ್ರೇಲರ್‌ನಲ್ಲಿಯೂ ಮುಗೋರ್‌ಗೆ ಬದಲಾಗಿ ಖಾನ್‌ಸಾರ್‌ನಿಂದ ಕಥೆ ಪ್ರಾರಂಭವಾಗುತ್ತದೆ. ಅಲ್ಲದೆ, ನಿನಗಾಗಿ ಏನ್ ಬೇಕಾದ್ರೂ ಮಾಡ್ತೀನಿ ಅನ್ನುವ ಪ್ರಭಾಸ್ ಮಾತುಗಳಂತೂ, ಉಗ್ರಂನ ಅಗಸ್ತ್ಯ ತನ್ನ ಸ್ನೇಹಿತ ಬಾಲನಿಗೆ ಕೇಳುವ ಮಾತಿನ ದಾಟಿಯಲ್ಲಿವೆ. ಇದರಿಂದಾಗಿ ಕಥೆ ಒಂದೇ ಆದ್ರೂ ತೋರಿಸುವ ವಿಧಾನ ಬದಲಾಗಿರಬೇಕು ಎನ್ನುವುದು ನೆಟ್ಟಿಗರ ವಾದ..
ಮುಗೋರ್ ರೌಡಿಸಂ ಪೀಲ್ಡ್‌ನಲ್ಲಿ ದೊಡ್ಡವರ ಮುಂದೆ ಕಾಲುರಿ ಕುಳಿತ ಸ್ನೇಹಿತನ ರಕ್ಷಣೆ ಮಾಡುವ ಅಗಸ್ತ್ಯನಂತೆ ಇಲ್ಲಿಯೂ ಸಹ ದೇವಾ (ಪ್ರಭಾಸ್) ತನ್ನ ಸ್ನೇಹಿತನನ್ನು ವಿಲನ್‌ಗಳಿಂದ ಕಾಪಾಡುತ್ತಾನೆ. ಆದ್ರೆ ಸಲಾರ್‌ನಲ್ಲಿ ಎಲ್ಲಿಯೂ ಸಹ ಹರಿಪ್ರಿಯಾ ಪಾತ್ರಕ್ಕೆ ಹೋಲುವ ದೃಶ್ಯಗಳು ಟ್ರೇಲರ್‌ನಲ್ಲಿ ಇಲ್ಲದಿರುವುದು ಕಥೆ ಬದಲಾವಣೆ ಮಾಡಿರುವ ಬಗ್ಗೆ ಸ್ಪಷ್ಟತೆ ನೀಡುತ್ತದೆ.
ಇನ್ನೋಂದು ಬಹುದೊಡ್ಡ ಹೋಲಿಕೆ ಅಂದ್ರೆ ಉಗ್ರಂ ಸಿನಿಮಾದಲ್ಲಿ ಶ್ರೀಮುರಳಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಸಲಾರ್ ಟ್ರೇಲರ್ ಅನ್ನು ನೀವು ಸೂಕ್ಷ್ಮವಾಗಿ ಗಮನಿಸಿದ್ದೆ ಅದ್ರೆ ಪ್ರಭಾಸ್ ಫಸ್ಟ್ ಎಂಟ್ರಿ ವೇಳೆ ಪಾನ್, ಸ್ಕೂ ಡ್ರೈವರ್ ಅನ್ನು ತಮ್ಮ ಸೊಂಟಕ್ಕೆ ಸಿಲುಕಿಸಿಕೊಂಡಿದ್ದನ್ನು ಕಾಣಬಹುದು.
ಇಷ್ಟೇಲ್ಲಾ ಹೋಲಿಕೆ ನೋಡಿದ್ರೆ ಬಹುಷಃ ಉಗ್ರಂ ಸಿನಿಮಾದ ಮುಖ್ಯ ಅಂಶವನ್ನೇ ಆಧಾರವಾಗಿಟ್ಟು ಸಲಾರ್‌ನಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನು ಪ್ರಶಾಂತ್ ಮಾಡಿರಬೇಕು ಅಂತ ಅನಿಸುತ್ತದೆ. ಒಟ್ಟಿನಲ್ಲಿ ಸಲಾರ್ ಒಂದು ಅದ್ಭುತ ಸಿನಿಮಾ ಅಗುವ ಎಲ್ಲಾ ಲಕ್ಷಣಗಳು ಟ್ರೇಲರ್ ನೋಡಿದ್ರೆ ಗೊತ್ತಾಗುತ್ತದೆ.. ಆದ್ರೆ ಸಲಾರ್ ಉಗ್ರಂ ರಿಮೇಕ್..? ಎನ್ನುವ ಪ್ರಶ್ನೆಗೆ ಉತ್ತರ ಡಿಸೆಂಬರ್ 22ರಂದು ತಿಳಿಯಲಿದೆ.