Fans Celebrating James Poster Release: ಎಲ್ಲೆಲ್ಲೂ ʼಅಪ್ಪುʼ ನೆನಪು..! ಅಭಿಮಾನಿಗಳ ಪ್ರೀತಿ ʼಆಕಾಶʼದಷ್ಟು..!

Power Star Puneet Raj Kumar - ಒಂದ್ಕಡೆ ಜೇಮ್ಸ್‌ ಚಿತ್ರದ ಪೋಸ್ಟರ್‌ (James Poster Release) ರಿಲೀಸ್‌ ಸಂಭ್ರಮ ದೇಶಾದ್ಯಂತ ಮನೆಮಾಡಿದ್ರೆ, ಇನ್ನೊಂದ್ಕಡೆ ಅಪ್ಪು (Appu) ಅಗಲಿಕೆ ನೋವಲ್ಲೇ ಅಭಿಮಾನಿ ಬಳಗವಿದೆ. ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಪ್ರೀತಿಯ ʼಅಪ್ಪುʼ ಅವರನ್ನು ಫ್ಯಾನ್ಸ್ ಪೋಸ್ಟರ್‌ ಹಾಗೂ ಟೀ ಶರ್ಟ್‌ ಗಳ (T-Shirts With James Poster) ಮೂಲಕ ನೆನೆಪು ಮಾಡಿಕೊಳ್ಳುತ್ತಿದ್ದಾರೆ.

  • Jan 28, 2022, 17:34 PM IST

Power Star Puneet Raj Kumar - ಒಂದ್ಕಡೆ ಜೇಮ್ಸ್‌ ಚಿತ್ರದ ಪೋಸ್ಟರ್‌ (James Poster Release) ರಿಲೀಸ್‌ ಸಂಭ್ರಮ ದೇಶಾದ್ಯಂತ ಮನೆಮಾಡಿದ್ರೆ, ಇನ್ನೊಂದ್ಕಡೆ ಅಪ್ಪು (Appu) ಅಗಲಿಕೆ ನೋವಲ್ಲೇ ಅಭಿಮಾನಿ ಬಳಗವಿದೆ. ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಪ್ರೀತಿಯ ʼಅಪ್ಪುʼ ಅವರನ್ನು ಫ್ಯಾನ್ಸ್ ಪೋಸ್ಟರ್‌ ಹಾಗೂ ಟೀ ಶರ್ಟ್‌ ಗಳ (T-Shirts With James Poster) ಮೂಲಕ ನೆನೆಪು ಮಾಡಿಕೊಳ್ಳುತ್ತಿದ್ದಾರೆ. ಕಂಠೀರವ ಸ್ಟೂಡಿಯೋಗೆ ಈಗಲೂ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ.

 

ಇದನ್ನೂ ಓದಿ-'ಅಪ್ಪು ಎಂದೆದಿಗೂ ಶಾಶ್ವತ'- ಬಾಲ್ಯದ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ

 

ಅಪ್ಪು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. ಜೇಮ್ಸ್‌ ಚಿತ್ರ ತಂಡ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಗಣರಾಜ್ಯೋತ್ಸವಕ್ಕೆ ಸ್ವೀಟ್‌ ನ್ಯೂಸ್‌ ಕೊಟ್ಟಿದೆ. ಅದರಲ್ಲೂ ಅಪ್ಪು ಸಮಾಧಿ ಸ್ಥಳಕ್ಕೆ ಪೋಸ್ಟರ್‌ ರಿಲೀಸ್‌ ಆದ ದಿನ 35 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರಂತೆ.

 

ಇದನ್ನೂ ಓದಿ-RIP Puneeth Rajkumar: ಕನ್ನಡಕ್ಕೊಬ್ಬನೇ ಪ್ರೀತಿಯ ಅಪ್ಪು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಭರ್ಜರಿ ಸಂಭ್ರಮಾಚರಣೆ - ಜೇಮ್ಸ್‌ ಪೋಸ್ಟರ್‌ ಬಿಡುಗಡೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಹೊರಗೆ ಭರ್ಜರಿ ಸಂಭ್ರಮಾಚರಣೆ ನಡೆದಿದೆ. ದೂರದ ಊರುಗಳಿಂದ ಬಂದ ಅಭಿಮಾನಿಗಳು ಅಪ್ಪು ಅವರನ್ನ ನೆನೆದು ಭಾವುಕರಾದರು. ಹಾಗೇ ತಮ್ಮ ನೆಚ್ಚಿನ ನಟನಿಗೆ ನಮಿಸಿದ್ದಾರೆ.

2 /4

2. ಸಂಗೀತದ ಮೂಲಕ ಗೌರವ - ಅಪ್ಪು ನಮ್ಮನ್ನೆಲ್ಲಾ ಅಗಲಿ 3 ತಿಂಗಳು ಕಳೆಯುತ್ತಿದೆ. ಆದರೆ ಅಪ್ಪು ಸಮಾಧಿಗೆ ಭೇಟಿ ನೀಡುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ  ನಟನನ್ನು ವಿಶೇಷವಾಗಿ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಕಂಠೀರವ ಸ್ಟೂಡಿಯೋ ಬಳಿ ಕೆಲ ಅಭಿಮಾನಿಗಳು ಕೊಳಲಿನ ಸಂಗೀತದಲ್ಲಿ ಅಪ್ಪು ಹಾಡುಗಳನ್ನು ನುಡಿಸುವ ಮೂಲಕ ತಮ್ಮ ನೆಚ್ಚಿನ ನಟನನ್ನ ಸ್ಮರಿಸುತ್ತಿದ್ದಾರೆ.

3 /4

3. ಎಲ್ಲೆಲ್ಲೂ ʼಅಪ್ಪುʼ..! -ಹಾಗೇ ಕಂಠೀರವ ಸ್ಟುಡಿಯೋ ಬಳಿ ಅಪ್ಪು ಅವರ ಫೋಟೋಗಳು ಮತ್ತು ಟೀ ಶರ್ಟ್‌ಗಳನ್ನ ಮಾರಾಟ ಮಾಡಲಾಗುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೋಟೋ ಮತ್ತು ಟೀ ಶರ್ಟ್‌ ಖರೀದಿಸುತ್ತಿದ್ದಾರೆ. ಅದರಲ್ಲೂ ತಮ್ಮ ತಮ್ಮ ಮಕ್ಕಳಿಗೆ ಅಪ್ಪು ಭಾವಚಿತ್ರವಿರುವ ಟೀ ಶರ್ಟ್‌ ಗಳನ್ನ ಪೋಷಕರು ಖರೀದಿ ಮಾಡುತ್ತಿದ್ದಾರೆ.

4 /4

4. 'ಅಪ್ಪು ಅಜರಾಮರ - ಒಟ್ನಲ್ಲಿ ಹೇಳುವುದಾದರೆ, ಅಪ್ಪು ನೆನಪು ಅಜರಾಮರ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಬಹು ನಿರೀಕ್ಷಿತ ಜೇಮ್ಸ್‌ ಸಿನಿಮಾಗಾಗಿ ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಿದ್ದು. ಅಪ್ಪು ಹುಟ್ಟುಹಬ್ಬಕ್ಕೆ ಸಿಹಿಸುದ್ದಿ ಸಿಗುವ ನಿರೀಕ್ಷೆ ಇದೆ.