Super Luxurious Mansion: ಹೇಗಿದೆ ನೋಡಿ ಪೋರ್ಚುಗಲ್‌ನ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಐಷಾರಾಮಿ ಬಂಗಲೆ

ಮ್ಯಾಂಚೆಸ್ಟರ್‌ನಲ್ಲಿ ಸ್ಟಿಯಾನೊ ರೊನಾಲ್ಡೊ ತಮ್ಮ ಕುಟುಂಬದೊಂದಿಗೆ ಕೋಟ್ಯಂತರ ರೂ. ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ ವಾಸಿಸಲಿದ್ದಾರೆ.

5 ಬಾರಿಯ ಬ್ಯಾಲನ್ ಡಿ'ಓರ್ ವಿಜೇತ ಮತ್ತು ಪೋರ್ಚುಗೀಸ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಇಂಗ್ಲಿಷ್ ಪ್ರೀಮಿಯರ್ ಲೀಗ್ ತಂಡ ಮ್ಯಾಂಚೆಸ್ಟರ್ ಯುನೈಟೆಡ್‌(Manchester United) ಸೇರಲು ಶುಕ್ರವಾರ (ಸೆ.3) ಇಂಗ್ಲೆಂಡ್ ಗೆ ಆಗಮಿಸಿದ್ದಾರೆ.

ರೊನಾಲ್ಡೊ ತಮ್ಮ ಗೆಳತಿ ಜಾರ್ಜಿನಾ ರೊಡ್ರಿಗಸ್ ಮತ್ತು ಮಕ್ಕಳ ಜೊತೆ ಯುಕೆ ತಲುಪಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ರೊನಾಲ್ಡೊ ಕೋಟ್ಯಂತರ ರೂ. ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ ವಾಸಿಸಲಿದ್ದಾರೆ. ಇದು 7 ಬೆಡ್‌ರೂಂಗಳು, ಫಿಟ್‌ನೆಸ್ ಸೆಂಟರ್, ಬಾತ್ ಟಬ್ ಮತ್ತು 6 ಭದ್ರತಾ ಗಸ್ತು ವ್ಯವಸ್ಥೆಯನ್ನು ಹೊಂದಿದೆ. ರೊನಾಲ್ಡೊ ಅವರ ಸೂಪರ್ ಐಷಾರಾಮಿ ಬಂಗಲೆ(Super Luxurious Mansion) ಹೇಗಿದೆ ನೋಡಿ…  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕ್ರಿಸ್ಟಿಯಾನೊ ರೊನಾಲ್ಡೊ ಅವರ ಭವ್ಯ ಬಂಗಲೆಯ ಹೊರಾಂಗಣ ನೋಟ ಅದ್ಭುತವಾಗಿದೆ. 7 ಬೆಡ್‌ರೂಂಗಳ ಈ ಐಷಾರಾಮಿ ಬಂಗಲೆಯಲ್ಲಿ ಸಕಲ ಸೌಕರ್ಯಗಳು ಇವೆ.

2 /5

ರೊನಾಲ್ಡೊ ಅವರ ಐಷಾರಾಮಿ ಮಹಲಿನಲ್ಲಿ ದೊಡ್ಡ ಒಳಾಂಗಣ ಈಜುಕೊಳವಿದೆ. ಈಜುಕೊಳದ ಮೇಲ್ಬಾದಲ್ಲಿ ಕಪ್ಪು ಗಾಜಿನ ಮೇಲ್ಛಾವಣಿ ಇದೆ.   

3 /5

ರೊನಾಲ್ಡೊ ಅವರು ಕೋಟ್ಯಂತರ ರೂ. ಮೌಲ್ಯದ ಐಷಾರಾಮಿ ಬಂಗಲೆಯಲ್ಲಿರುವ ಡೈನಿಂಗ್ ಹಾಲ್ ವಿಶಾಲವಾಗಿದೆ. ಇಲ್ಲಿನ ಊಟದ ಕೋಣೆಯು ಅತ್ಯಾಧುನಿಕವಾಗಿದ್ದು, ವಿಶಾಲ ಪ್ರದೇಶದೊಂದಿಗೆ ಅತ್ಯದ್ಭುತವಾಗಿ ನಿರ್ಮಾಣ ಮಾಡಲಾಗಿದೆ.

4 /5

ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಫಿಟ್ಟೆಸ್ಟ್ ಅಥ್ಲೀಟ್ ಗಳಲ್ಲಿ ಒಬ್ಬರು. ಪ್ರತಿದಿನ ದೈಹಿಕ ಕಸರತ್ತು ನಡೆಸಲು ಅವರ ಭವ್ಯ ಬಂಗಲೆಯಲ್ಲಿ ಅತ್ಯಾಧುನಿಕ ಮಾದರಿಯ ಜಿಮ್ ಇದೆ.   

5 /5

ರೊನಾಲ್ಡೊ ಅವರ ಭವ್ಯ ಬಂಗಲೆಯಲ್ಲಿರುವ ಮಲಗುವ ಕೋಣೆಯು ವಿಶಾಲ ಪ್ರದೇಶವನ್ನು ಹೊಂದಿದೆ. ಹೊರಗಿನ ಉತ್ತಮ ನೋಟವನ್ನು ಕಣ್ತುಂಬಿಕೊಳ್ಳುವಂತೆ ದೊಡ್ಡ ಗಾಜಿನ ಫಲಕಗಳನ್ನು ಅಳವಡಿಸಲಾಗಿದೆ.