ದಾಳಿಂಬೆ ಸಿಪ್ಪೆಯ ಪ್ರಯೋಜನಗಳೇನು ಗೊತ್ತಾ?

ದಾಳಿಂಬೆ ಹಣ್ಣಿನ ಸೇವನೆಯಿಂದ ದೇಹಕ್ಕೆ ಹಲವಾರು ಆರೋಗ್ಯಕರ ಪೋಷಕಾಂಶಗಳು ದೊರೆಯುತ್ತವೆ. ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ರಕ್ತ ಕಣಗಳು ಸುಧಾರಿಸುತ್ತದೆ. ಹಣ್ಣಷ್ಟೇ ಅಲ್ಲ, ದಾಳಿಂಬೆ ಸಿಪ್ಪೆಯಲ್ಲೂ ಹಲವು ಪ್ರಯೋಜನಗಳಿವೆ. 

Pomegranate peel: ದಾಳಿಂಬೆ ಹಣ್ಣಿನ ಸೇವನೆಯಿಂದ ದೇಹಕ್ಕೆ ಹಲವಾರು ಆರೋಗ್ಯಕರ ಪೋಷಕಾಂಶಗಳು ದೊರೆಯುತ್ತವೆ. ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ರಕ್ತ ಕಣಗಳು ಸುಧಾರಿಸುತ್ತದೆ. ಹಣ್ಣಷ್ಟೇ ಅಲ್ಲ, ದಾಳಿಂಬೆ ಸಿಪ್ಪೆಯಲ್ಲೂ ಹಲವು ಪ್ರಯೋಜನಗಳಿವೆ. 
 

1 /7

ದಾಳಿಂಬೆ ಸೇವನೆಯಿಂದ ಹೃದಯ ಸಂಬಂಧಿ ಸಮಸ್ಯೆ, ಮಧುಮೇಹದಂತಹ ಸಮಸ್ಯೆಗಳು ದೂರವಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಈ ಹಣ್ಣಿನ ಸಿಪ್ಪೆಯಿಂದ ಹಲವು ಲಾಭಗಳಿವೆ ಎನ್ನುತ್ತಾರೆ ತಜ್ಞರು. ಈಗ ದಾಳಿಂಬೆ ಸಿಪ್ಪೆಯ ಪ್ರಯೋಜನಗಳನ್ನು ತಿಳಿಯೋಣ.

2 /7

ದಾಳಿಂಬೆಯ ಸಿಪ್ಪೆಯಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಅಡಗಿರುತ್ತವೆ. ಇದು ವಿಶೇಷವಾಗಿ ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಆರೋಗ್ಯಕರ ಗುಣಗಳನ್ನು ಹೊಂದಿದೆ.

3 /7

ದಾಳಿಂಬೆ ಸಿಪ್ಪೆಯು ಹೃದಯದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4 /7

ದಾಳಿಂಬೆಯ ಸಿಪ್ಪೆಯನ್ನು ಒಣಗಿಸಿ ಅದಕ್ಕೆ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ತ್ವಚೆಯ ಮೇಲೆ ಹಚ್ಚುವುದರಿಂದ ಮುಖದಲ್ಲಿನ ಮೊಡವೆಗಳು ಗುಣವಾಗಿ ಸುಂದರ ಸ್ಕಿನ್‌ ಟೋನ್‌ ನಿಮ್ಮದಾಗುತ್ತದೆ. 

5 /7

ದಾಳಿಂಬೆ ಸಿಪ್ಪೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ದಾಳಿಂಬೆ ಸಿಪ್ಪೆಯು ತುಂಬಾ ಪ್ರಯೋಜನಕಾರಿಯಾಗಿದೆ.

6 /7

ಸಂಧಿವಾತ ಮತ್ತು ಗಂಟಲು ನೋವು ನಿವಾರಣೆಗೆ ದಾಳಿಂಬೆ ಸಿಪ್ಪೆಯನ್ನು ಕುದಿಸಿ ಜ್ಯೂಸ್ ಮಾಡಿ ಕುಡಿಯಬೇಕು. 

7 /7

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.