Vasant Panchmi 2021 - ದೇಶಾದ್ಯಂತ ವಸಂತ ಪಂಚಮಿಯ ದಿನ ಸರಸ್ವತಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ವಸಂತ ಪಂಚಮಿಯ ದಿನ ನಾವು ತಿಳಿದು ಅಥವಾ ತಿಳಿಯದೆ ಮಾಡುವ ಕೆಲ ತಪ್ಪುಗಳಿಂದ ದೇವಿ ಸರಸ್ವತಿ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಈ ತಪ್ಪುಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
ನವದೆಹಲಿ: Vasant Panchmi 2021 - ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ವಸಂತ ಪಂಚಮಿ ಹಬ್ಬ ಆಚರಿಸಲಾಗುತ್ತದೆ ಹಾಗೂ ಈ ವರ್ಷ ಫೆಬ್ರವರಿ 16, 2021 ರಂದು ಮಂಗಳವಾರ ವಸಂತ ಪಂಚಮಿ (Vasant Panchami) ಆಚರಣೆಯಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಬ್ರಹ್ಮದೇವರು ದೇವಿ ಸರಸ್ವತಿಯನ್ನು ಸೃಷ್ಟಿಸಿದರು ಎನ್ನಲಾಗಿದೆ. ಹೀಗಾಗಿ ವಸಂತ ಪಂಚಮಿಯ ದಿನ ದೇವಿ ಸರಸ್ವತಿಗೆ ಭಕ್ತಿ-ಭಾವ ಹಾಗೂ ವಿಧಿವತ್ತಾಗಿ ಪೂಜೆ ಸಲ್ಲಿಸಲಾಗುತ್ತದೆ. ದೇವಿ ಸರಸ್ವತಿಯನ್ನು ಜ್ಞಾನ ನೀಡುವ ದೇವಿ ಎಂದು ಪರಿಗಣಿಸಲಾಗುತ್ತದೆ ಹೀಗಾಗಿ ಈ ದಿನ ದೇವಿ ಸರಸ್ವತಿಗೆ ಪೂಜೆ ಸಲ್ಲಿಸುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಮತ್ತು ಇಷ್ಟಾರ್ಥಗಳು ಫಲಿಸುತ್ತವೆ. ಇನ್ನೊಂದೆಡೆ ಈ ದಿನವೇ ವಸಂತ ಋತುವೀಣೆ ಆಗಮನ ಕೂಡ ಆಗುತ್ತದೆ ಎಂಬುದು ಇನ್ನೊಂದು ನಂಬಿಕೆ.
ಇದನ್ನು ಓದಿ - Friday Remedies: ಶುಕ್ರವಾರ ಮುಸ್ಸಂಜೆ ವೇಳೆ ಈ ಕೆಲಸ ಮಾಡಿ Lakshmi ಕೃಪೆಗೆ ಪಾತ್ರರಾಗಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ವಸಂತ ಪಂಚಮಿಯ ಶುಭ ಅವಸರದಂದು ಎರಡು ಶುಭ ಯೋಗಗಳು ಸೃಷ್ಟಿಯಾಗುತ್ತಿವೆ. ರವಿ ಯೋಗ ಹಾಗೂ ಅಮೃತ ಸಿದ್ಧಿ ಯೋಗ. - ವಸಂತ ಪಂಚಮಿ ತಿಥಿ ಪ್ರಾರಂಭ: 16 ಫೆಬ್ರುವರಿ ಬೆಳಗ್ಗೆ 3.36 - ವಸಂತ ಪಂಚಮಿ ತಿಥಿ ಮುಕ್ತಾಯ: 17 ಫೆಬ್ರವರಿ ಬೆಳಗ್ಗೆ 5.46 ರವರೆಗೆ. - ವಸಂತ ಪಂಚಮಿಯ ದಿನ ದೇವಿ ಸರಸ್ವತಿಗೆ ಪೂಜೆ ಸಲ್ಲಿಸಲು ಶುಭ ಮುಹೂರ್ತ: ಫೆಬ್ರುವರಿ 16, 2021 ರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30ರವರೆಗೆ.
ವಸಂತ ಪಂಚಮಿಯನ್ನು ನಿಸರ್ಗದ ಉತ್ಸವ ಎಂದೂ ಕೂಡ ಹೇಳಲಾಗುತ್ತದೆ ಹಾಗೂ ಇದೆ ಕಾರಣದಿಂದ ವಸಂತ ಋತುವನ್ನು ಋತುಗಳ ರಾಜ ಎಂದು ಕರೆಯಲಾಗುತ್ತದೆ. ಈ ದಿನ ಹಳದಿ ಬಣ್ಣಕ್ಕೆ ವಿಶೇಷ ಮಹತ್ವವಿದೆ. ಏಕೆಂದರೆ ದೇವಿ ಸರಸ್ವತಿಗೆ ಹಳದಿ ಬಣ್ಣ ತುಂಬಾ ಇಷ್ಟ. ಇಂದಿನ ದಿನ ಸರಸ್ವತಿ ಪೂಜೆ ಮಾಡುವ ವೇಳೆ ದೇವಿಗೆ ಹಳದಿ ಬಣ್ಣದ ವಸ್ತ್ರ ತೊಡಿಸಲಾಗುತ್ತದೆ ಜೊತೆಗೆ ಸಾಧಕರು ಕೂಡ ಹಳದಿ ಬಣ್ಣದ ವಸ್ತ್ರ ಧರಿಸುತ್ತಾರೆ. ಹಳದಿ ಬಣ್ಣ ಉತ್ಸಾಹ ಹಾಗೂ ಉಲಾಸಗಳ ಜೊತೆಗೆ ಮೆದುಳಿನ ಸಕ್ರೀಯತೆಯನ್ನು ಹೆಚ್ಚಿಸುವ ಬಣ್ಣವಾಗಿದೆ.
- ಇಂದಿನ ದಿನ ಹಳದಿ ಬಣ್ಣದ ವಸ್ತ್ರಕ್ಕೆ ವಿಶೇಷ ಮಹತ್ವವಿದೆ. ಹೀಗಾಗಿ ಈ ದಿನ ಬಣ್ಣ ಬಣ್ಣದ ಪೋಷಾಕು ಅದರಲ್ಲೂ ವಿಶೇಷವಾಗಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ಇದರಿಂದ ಸರಸ್ವತಿ ದೇವಿ ಮುನಿಸಿಕೊಳ್ಳುತ್ತಾಳೆ. - ಇಂದಿನ ದಿನ ಮರ ಕಡಿಯುವುದಾಗಲಿ ಅಥವಾ ಫಸಲು ತೆಗೆಯುವುದಾಗಲಿ ಮಾಡಬೇಡಿ. ಏಕೆಂದರೆ ಈ ದಿನ ವಸಂತ ಋತುವಿನ ಆಗಮನದ ದಿನ.
- ಇಂದು ದೇವಿ ಸರಸ್ವತಿ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಈ ದಿನ ಸ್ನಾನ ಮಾಡದೆಯೇ ಭೋಜನ ಮಾಡಬಾರದು. ಇಂದು ಸ್ನಾನ ಮಾಡಿ ವೃತ ಕೈಗೊಂಡು, ದೇವಿ ಸರಸ್ವತಿಗೆ ಪೂಜೆ ಸಲ್ಲಿಸಿದ ಬಳಿಕವೇ ಊಟ ಮಾಡಬೇಕು. - ವಸಂತ ಪಂಚಮಿಯ ದಿನ ಅಪ್ಪಿ-ತಪ್ಪಿಯೂ ಕೂಡ ಕೋಪಿಸಿಕೊಳ್ಳಬೇಡಿ. ಕೋಪದಲ್ಲಿ ಯಾರ ಮೇಲೂ ಕೂಡ ತಪ್ಪಾದ ಭಾಷೆಯ ಬಳಕೆ ಮಾಡಬೇಡಿ. ಮನೆಯಲ್ಲಿ ಜಗಳ ಮಾಡುವುದರಿಂದಲೂ ಕೂಡ ದೂರ ಉಳಿಯಿರಿ. ನಿಮ್ಮ ಕುರಿತಾಗಲಿ ಅಥವಾ ಬೇರೆಯವರ ಕುರಿತಾಗಲಿ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳನ್ನು ತರಬೇಡಿ. ಕೇವಲ ಶುಭ ವಿಚಾರಗಳನ್ನೇ ಮಾಡಿ. - ಅಪ್ಪಿತಪ್ಪಿಯೂ ಕೂಡ ಈ ದಿನ ಮಾಂಸ, ಮದ್ಯಪಾನ ಮಾಡಬೇಡಿ. ಬ್ರಹ್ಮಚರ್ಯ ಪಾಲಿಸಿ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಅಗೌರವಿಸಬೇಡಿ.