Airtel ನೀಡುತ್ತಿದೆ ಫ್ರೀ ಡೇಟಾ ಕೂಪನ್..! ಈ ಆಕರ್ಷಕ ಪ್ಲಾನ್ ಬಗ್ಗೆ ತಿಳಿದುಕೊಳ್ಳಿ

ನೀವು ದಿನವಿಡೀ ಮೊಬೈಲಿನಲ್ಲಿ ಡೇಟಾ ಬಳಕೆ ಮಾಡುವಿರಾದರೆ, ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ.

ಬೆಂಗಳೂರು : ನೀವು ದಿನವಿಡೀ ಮೊಬೈಲಿನಲ್ಲಿ ಡೇಟಾ ಬಳಕೆ ಮಾಡುವಿರಾದರೆ, ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ.  ಭಾರತಿ ಏರ್ ಟೆಲ್ (Airtel) ತನ್ನ ಗ್ರಾಹಕರಿಗೆ ರಿಚಾರ್ಜ್ ಪ್ಲಾನ್ ಜೊತೆ ಫ್ರೀ ಡೇಟಾ ಕೂಪನ್ ನೀಡುತ್ತಿದೆ. ಅತ್ಯಂತ ಕಡಿಮೆ ಮೊತ್ತದಲ್ಲಿ ನೀವು  ಎರಡು ಪಟ್ಟು ಹೆಚ್ಚು ಇಂಟರ್ ನೆಟ್ (Internet)  ಡೇಟಾ ಬಳಸಬಹುದು. ಆ ಪ್ಲಾನ್ ಬಗ್ಗೆ ತಿಳಿದುಕೊಳ್ಳಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆರು ಜಿಬಿ ತನಕ ಫ್ರೀ :  ಟೆಕ್ ಸೈಟ್ ಟೆಲಿಕಾಂಟಾಕ್ ಪ್ರಕಾರ Airtel ತನ್ನ ಗ್ರಾಹಕರಿಗೆ ಉಚಿತ  ಡೇಟಾ ಕೂಪನ್ ಆಫರ್ ನೀಡುತ್ತಿದೆ. ಹೊಸ ಆಫರ್ ಪ್ರಕಾರ Airtel ತನ್ನ ಗ್ರಾಹಕರಿಗೆ 6 ಜಿಬಿ ಡೇಟಾ ಉಚಿತವಾಗಿ (Free Data) ನೀಡುತ್ತಿದೆ. 

2 /5

ಯಾವುದೇ 28 ದಿನಗಳ ವ್ಯಾಲಿಡಿಟಿ ಪ್ಲಾನ್ ಜೊತೆ ಈ ಆಫರ್ :  ಲಭ್ಯ ಮಾಹಿತಿಗಳ ಪ್ರಕಾರ Airtel 28 ದಿನಗಳ ವಾಲಿಡಿಟಿ ಇರುವ  ಎಲ್ಲಾ ರಿಚಾರ್ಜ್ ಪ್ಲಾನ್ ಗಳ  ಜೊತೆ 2 ಜಿಬಿ ಡೇಟಾ ಫ್ರೀಯಾಗಿ ನೀಡುತ್ತಿದೆ. ಒಂದು ಜಿಬಿ ಡೇಟಾ (1 GB Data) ಸಿಗುವ ಎರಡು ಕೂಪನ್ ಗಳು  ನಿಮಗೆ ಸಿಗಲಿವೆ.   

3 /5

 4 ಜಿಬಿ ಡೇಟಾ ಕೂಡಾ ಉಚಿತವಾಗಿ ಸಿಗಬಹುದು:  56 ದಿನಗಳ ಯಾವುದೇ ರಿಚಾರ್ಜ್ ಪ್ಲಾನ್ ಖರೀದಿಸಿದರೆ, 4 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಒಂದು ಜಿಬಿಯ ನಾಲ್ಕು ಕೂಪನ್ಸ್ ಸಿಗಲಿದೆ.   

4 /5

84 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ ನಲ್ಲಿ ಹೆಚ್ಚು ಲಾಭ : ಗ್ರಾಹಕರನ್ನು ಆಕರ್ಷಿಸುವಲ್ಲಿ Airtel ಹಿಂದೆ ಬಿದ್ದಿಲ್ಲ. 84 ದಿನಗಳ ವ್ಯಾಲಿಡಿಟಿಯ ಪ್ಲಾನಿನಲ್ಲಿ ಇನ್ನೂ ಹೆಚ್ಚು ಆಕರ್ಷಕ ಆಫರ್ಗ್ಳಿವೆ. 84 ದಿನಗಳ ವ್ಯಾಲಿಡಿಟಿಯ ಪ್ಲಾನ್ ಖರೀದಿಸಿದರೆ, 6 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಗ್ರಾಹಕರಿಗೆ 1ಜಿಬಿಯ 6 ಕೂಪನ್ ಸಿಗಲಿದೆ. 

5 /5

Airtel ಥ್ಯಾಂಕ್ಸ್ ಆಪ್ ನಿಂದ  ರಿಚಾರ್ಜ್ ಮಾಡಬೇಕು: ಈ ಆಫರ್ ನಿಮಗೆ ಸಿಗಬೇಕಾದರೆ ನೀವು ಈ ಎಲ್ಲಾ ರಿಚಾರ್ಜ್ ಗಳನ್ನು  Airtel Thanks app ಮೂಲಕ ಮಾಡಬೇಕು. ಈ ಆಪ್ ನಲ್ಲಿಯೇ ಈ ಎಲ್ಲಾ offer’s ಲಭ್ಯವಿದೆ.