Driving License - ವಾಹನ ಚಾಲನಾ ಪರವಾನಗಿ ಪಡೆಯುವುದು ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ. ನಿಯಮಗಳನ್ನು ಬದಲಾಯಿಸುವ ಮೂಲಕ ಚಾಲನಾ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಗೊಳಿಸುವ ಬಗ್ಗೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ಚಿಂತಿಸುತ್ತಿದೆ.
ನವದೆಹಲಿ: Driving License - ವಾಹನ ಚಾಲನಾ ಪರವಾನಗಿ ಪಡೆಯುವುದು ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ. ನಿಯಮಗಳನ್ನು ಬದಲಾಯಿಸುವ ಮೂಲಕ ಚಾಲನಾ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಗೊಳಿಸುವ ಬಗ್ಗೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ (Mininistry Of Road Transport And Highways) ಚಿಂತಿಸುತ್ತಿದೆ. ಇದಕ್ಕಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಸಹ ಕೋರಲಾಗಿದೆ. ಫಲಿತಾಂಶವು ಸಕಾರಾತ್ಮಕವಾಗಿ ಬಂದರೆ ಪರವಾನಗಿ ಪಡೆಯುವುದು ತುಂಬಾ ಸುಲಭ.
ಇದನ್ನು ಓದಿ- Accident ಸಂಭವಿಸುತ್ತಲೇ Ambulenceಗೆ ಮಾಹಿತಿ ಸಿಗಲಿದೆ, Hi-Tech ಸಿಸ್ಟಂ ಸಿದ್ಧತೆಯಲ್ಲಿ ಕೇಂದ್ರ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಪ್ರಸ್ತುತ ನಿಯಮದ ಪ್ರಕಾರ, ಚಾಲನಾ ಪರವಾನಗಿ ಪಡೆಯಲು, ನೀವು ಆರ್‌ಟಿಒ ಕಚೇರಿಗೆ ಹೋಗಿ ಚಾಲನಾ ಪರೀಕ್ಷೆಯನ್ನು ನೀಡಬೇಕು. ನೀವು ಈ ಪರೀಕ್ಷೆಯಲ್ಲಿ ವಿಫಲವಾದರೆ, ನೀವು ಯಾವುದೇ ಸಂದರ್ಭದಲ್ಲಿ ಚಾಲನಾ ಪರವಾನಗಿ ಪಡೆಯುವುದಿಲ್ಲ ಮತ್ತು ನಿಮ್ಮ ಅರ್ಜಿಯನ್ನು ರದ್ದುಗೊಳಿಸಲಾಗುತ್ತದೆ. ಇದೇ ವೇಳೆ, ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ನಿಮಗೆ ಮೊದಲು ಲರ್ನಿಂಗ್ ಲೈಸನ್ಸ್ ಸಿಗಲಿದೆ. ನಂತರ 6 ತಿಂಗಳೊಳಗೆ ಶಾಶ್ವತ ಪರವಾನಗಿ ಸಿಗುತ್ತದೆ.
ಅಧಿಕಾರಿಗಳ ಪ್ರಕಾರ, ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ಅನುತ್ತೀರ್ಣ ಮಾಡಲು ಚಾಲನಾ ತರಬೇತಿ ಕೇಂದ್ರಗಳಿಗೆ ಮಾನ್ಯತೆ ನೀಡಲು ಸರ್ಕಾರ ಚಿಂತಿಸುತ್ತಿದೆ. ಅಂದರೆ, ಈ ಚಾಲನಾ ತರಬೇತಿ ಶಾಲೆಗಳಲ್ಲಿ ಚಾಲನೆ ಕಲಿಯುವವರು, ಯಾವುದೇ ಪರೀಕ್ಷೆಯಿಲ್ಲದೆ ಡ್ರೈವಿಂಗ್ ಲೈಸನ್ಸ್ ನೀಡಲಾಗುವುದು.
ಪ್ರಸ್ತುತ, ಸಾರಿಗೆ ಸಚಿವಾಲಯವು ಸಾಮಾನ್ಯ ಜನರ ಸಲಹೆಗಳನ್ನು ಕೋರಿ ಅಧಿಸೂಚನೆ ಹೊರಡಿಸಿದೆ. ನೀವು ಸಹ ನಿಮ್ಮ ಸಲಹೆಯನ್ನು ನೀಡಲು ಬಯಸುತ್ತಿದ್ದರೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್‌ಸೈಟ್ https://morth.nic.in/en ಗೆ ಭೇಟಿ ನೀಡಿ ನಿಮ್ಮ ಸಲಹೆಯನ್ನು ನೀಡಬಹುದು
ಒಂದು ವೇಳೆ ಡ್ರೈವಿಂಗ್ ಟೆಸ್ಟ್ ತೆಗೆದುಹಾಕಲು ಸಾರ್ವಜನಿಕರಿಂದ ಒಮ್ಮತದಿಂದ ಸಲಹೆಗಳು ಬಂದರೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನಿಯಮವನ್ನು ರೂಪಿಸಲಿದೆ. ಇದರ ಅಡಿಯಲ್ಲಿ, ಚಾಲನಾ ಕೋಚಿಂಗ್ ಕೇಂದ್ರಗಳು ಪರೀಕ್ಷೆಯಲ್ಲಿ ಯಾವುದೇ ವ್ಯಕ್ತಿಯನ್ನು ಉತ್ತೀರ್ಣ ಹಾಗೂ ಅನುತ್ತೀರ್ಣಗೊಳಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಡ್ರೈವಿಂಗ್ ಶಾಲೆಗಳಿಗೆ ಮಾತ್ರ ಅನುಮತಿ ನೀಡಲಾಗುವುದು.