Photo Gallery: ಆನೆಗೊಂದಿ ಉತ್ಸವದಲ್ಲಿ ಜನರ ಗಮನ ಸೆಳೆದ ವಸ್ತು ಪ್ರದರ್ಶನ ಮಳಿಗೆಗಳು..!

Anegondi Utsav ನೆಗೊಂದಿ ಉತ್ಸವ-2024ರ ಪ್ರಯುಕ್ತ ಶ್ರೀ ರಂಗದೇವರಾಯಲು ವೇದಿಕೆ ಮುಂಭಾಗದಲ್ಲಿ ಆಯೋಜಿಸಿದ್ದ ವಿವಿಧ ವಸ್ತುಗಳ ಪ್ರದರ್ಶನ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು.

ಈ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ದಿ ಕಿಷ್ಕಿಂದ ಟ್ರಸ್ಟ ವತಿಯಿಂದ ಮೆಕ್ಕೆಜೋಳ, ಬಾಳೆ ಮತ್ತು ಇತರೆ ಒಣಗಿದ ಎಲೆಗಳಿಂದ ಮಾಡಿದ ಗೃಹಲಂಕಾರ ವಸ್ತುಗಳ ಪ್ರದರ್ಶನ,

 

1 /5

ಧಾತ್ರಿ ಸ್ವ-ಸಹಾಯ ಸಂಘ ವತಿಯಿಂದ ಮುಂಬತ್ತಿ ಮತ್ತು ಕೈಚೀಲಗಳ ಪ್ರದರ್ಶನ ಮತ್ತು ಮಾರಾಟ, ಆರೋಗ್ಯ ಇಲಾಖೆಯಿಂದ ರಾಷ್ಟೀಯ ಆರೋಗ್ಯ ಕಾರ್ಯಕ್ರಮಗಳ ಅರಿವು ಮತ್ತು ಪ್ರದರ್ಶನ ಮಳಿಗೆ ಹಾಗೂ ಸ್ವ-ಸಹಾಯ ಗುಂಪುಗಳ ಸದಸ್ಯರು ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸೇರಿದಂತೆ ಒಟ್ಟು 24 ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

2 /5

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರಿನ ಸೇವೆಗಳು, ಪಂಪಾವಿರೂಪಾಕ್ಷೇಶ್ವರ ಸ್ವ-ಸಹಾಯ ಸಂಘದಿಂದ ವಿವಿಧ ಅಡುಗೆ ಪದಾರ್ಥ ಪದರ್ಶನ ಮತ್ತು ಮಾರಾಟ, 

3 /5

ಗಂಗಾವತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಲಯದಿಂದ ಅಂಗನವಾಡಿಯ ಮಕ್ಕಳ ಆಟಿಕೆ ವಸ್ತು ಹಾಗೂ ಇತರೆ ವಸ್ತುಗಳ ಪ್ರದರ್ಶನ, 

4 /5

ಗಂಗಾವತಿಯ ಪ್ರಜಾಪಿತ ಬ್ರಹ್ಮಕುಮಾರಿ ವತಿಯಿಂದ ಆದ್ಯಾತ್ಮ ಚಿತ್ರದ ಪ್ರದರ್ಶನ ಮತ್ತು ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ, 

5 /5

ಬಂಗಾಲಿ ಟ್ರಸ್ಟ್ ವತಿಯಿಂದ ವಿವಿಧ ಖಾಧ್ಯಗಳ ಪ್ರದರ್ಶನ ಮತ್ತು ಮಾರಾಟ,