Photo Gallery: 2ನೇ ಮದುವೆಯಾದ ರಾಜಕಾರಣಿಗಳ ಲಿಸ್ಟ್ ಇಲ್ಲಿದೆ ನೋಡಿ

ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನವಾದ 6 ವರ್ಷಗಳ ನಂತರ ಭಗವಂತ್ ಮಾನ್ 2ನೇ ಮದುವೆಯಾಗಿದ್ದಾರೆ.

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (AAP) ನಾಯಕ ಭಗವಂತ್ ಮಾನ್ ಗುರುವಾರ(ಜುಲೈ 7) ಡಾ.ಗುರುಪ್ರೀತ್ ಕೌರ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನವಾದ 6 ವರ್ಷಗಳ ನಂತರ ಮಾನ್ 2ನೇ ಮದುವೆಯಾಗಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗಲೇ ಮದುವೆಯಾದ ಐವರು ರಾಜಕಾರಣಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಎಚ್.ಡಿ.ಕುಮಾರಸ್ವಾಮಿಯವರು 2006ರಿಂದ 2007ರವರೆಗೆ ಕರ್ನಾಟಕದ ಸಿಎಂ ಆಗಿದ್ದರು. ಅವರು ಮೊದಲು 1986ರಲ್ಲಿ ಅನಿತಾ ಅವರೊಂದಿಗೆ ವಿವಾಹವಾಗಿದ್ದರು. 2006ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸ್ಯಾಂಡಲ್‍ವುಡ್ ನಟಿ ರಾಧಿಕಾರನ್ನು 2ನೇ ವಿವಾಹವಾದರು. ಆದರೆ ಎಚ್‍ಡಿಕೆ ಆಗ ಮದುವೆ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. 2010ರಲ್ಲಿ ಸ್ವತಃ ರಾಧಿಕಾ ಅವರೇ ಕುಮಾರಸ್ವಾಮಿ ಜೊತೆ ರಹಸ್ಯವಾಗಿ ಮದುವೆಯಾಗಿದ್ದನ್ನು ಬಹಿರಂಗಪಡಿಸಿದ್ದರು.

2 /6

ಪ್ರಫುಲ್ಲ ಕುಮಾರ್ ಮಹಾಂತ ಅವರು ಡಿಸೆಂಬರ್ 1985ರಲ್ಲಿ ಅಸ್ಸಾಂನ ಮುಖ್ಯಮಂತ್ರಿಯಾದರು ಮತ್ತು  1990ರವರೆಗೆ ಅಧಿಕಾರದಲ್ಲಿದ್ದರು. 1988ರ ವೇಳೆ ತಮ್ಮ ಅಧಿಕಾರಾವಧಿಯಲ್ಲಿಯೇ ಅವರು ಬರಹಗಾರರಾಗಿದ್ದ ಜಯಶ್ರೀ ಗೋಸ್ವಾಮಿಯವರನ್ನು ವಿವಾಹವಾದರು. ನಂತರ 1999 ಮತ್ತು 2001ರ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಅಸ್ಸಾಂನ್ನು ಪ್ರತಿನಿಧಿಸಿದ್ದರು.

3 /6

ಬಾಬುಲ್ ಸುಪ್ರಿಯೊ ಅವರು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವಾಗ ಗಗನಸಖಿ ರಚನಾ ಶರ್ಮಾ ಅವರನ್ನು ವಿವಾಹವಾದರು. ತಮ್ಮ ಮೊದಲ ಪತ್ನಿ ಜೊತೆ 20 ವರ್ಷಗಳ ಕಾಲ ಸಂಸಾರ ನಡೆಸಿದ್ದ ಬಾಬುಲ್ 2015ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ರಚನಾ ಶರ್ಮಾ ಜೊತೆಗೆ ಅವರು 2ನೇ ಮದುವೆಯಾಗಿದ್ದರು. ಮುಂಬೈನಿಂದ ಕೋಲ್ಕತ್ತಾಗೆ ವಿಮಾನದಲ್ಲಿ ಪ್ರಯಾಣಿಸುವಾಗ ಅವರು ರಚನಾರನ್ನು ಮೊದಲು ಭೇಟಿಯಾಗಿದ್ದರು.

4 /6

1962, 1967 ಮತ್ತು 1971ರಲ್ಲಿ ಲೋಕಸಭೆಗೆ ಆಯ್ಕೆಯಾದ ನಂತರ, ವೀರಭದ್ರ ಸಿಂಗ್ ಅವರು 1983ರಲ್ಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾದರು ಮತ್ತು 1990ರವರೆಗೆ ಸೇವೆ ಸಲ್ಲಿಸಿದರು. ಈ ಅವಧಿ ವೇಳೆ 1985ರಲ್ಲಿ ಅವರು ಪ್ರಸ್ತುತ ಮಂಡಿಯಿಂದ ಲೋಕಸಭಾ ಸಂಸದರಾಗಿರುವ ಪ್ರತಿಭಾ ಸಿಂಗ್ ಅವರನ್ನು ಮದುವೆಯಾಗುವ ಮೂಲಕ 2ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

5 /6

ಹರಿಯಾಣದ ಮಾಜಿ ಉಪ ಮುಖ್ಯಮಂತ್ರಿ 2008ರಲ್ಲಿ ಚಂದರ್ ಮೊಹನ್ ತಮ್ಮ ಗೆಳತಿ ಅನುರಾಧಾ ಬಾಲಿಯನ್ನು ಮದುವೆಯಾಗಲು ತಮ್ಮ ಧರ್ಮವನ್ನೇ ತೊರೆದಿದ್ದರು. ಮದುವೆ ಬಳಿಕ ಈ ದಂಪತಿ ತಮ್ಮನ್ನು ಚಂದ್ ಮೊಹಮ್ಮದ್ ಮತ್ತು ಫಿಜಾ ಎಂದು ಮರುನಾಮಕರಣ ಮಾಡಿಕೊಂಡಿತ್ತು. ಧರ್ಮ ಬದಲಾವಣೆ ಮತ್ತು 2ನೇ ಮದುವೆಯಿಂದಾಗಿ ಚಂದ್ರಮೋಹನ್ ಅವರ ರಾಜಕೀಯ ಜೀವನವೇ ಸಾಕಷ್ಟು ಏರುಪೇರು ಕಂಡಿತು. ನಂತರ ಕೆಲವೇ ದಿನಗಳ ಕಾಲ ಜೊತೆಯಾಗಿ ಬಾಳಿದ ಈ ದಂಪತಿ ಪರಸ್ಪರ ದೂರವಾದರು. ಇದಾದ ಕೆಲವು ವರ್ಷಗಳ ನಂತರ ಅನುರಾಧಾ ಬಾಲಿ ನಿಧನ ಹೊಂದಿದರು.      

6 /6

ಸಿಎಂ ಮಾನ್ ತಮ್ಮ ಅಧಿಕೃತ ನಿವಾಸದಲ್ಲಿ ವಿವಾಹವಾಗಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಂಸದ ರಾಘವ್ ಚಡ್ಡಾ ಸೇರಿದಂತೆ ಸಮಾರಂಭದಲ್ಲಿ ಆಪ್ತರು ಹಾಗೂ ಸಂಬಂಧಿಕರು ಮಾತ್ರ ಭಾಗವಹಿಸಿದ್ದರು. ಮಾನ್ 6 ವರ್ಷಗಳ ಹಿಂದೆ ಮೊದಲ ಪತ್ನಿ ಇಂದರ್ ಪ್ರೀತ್ ಕೌರ್ ರಿಂದ ವಿಚ್ಛೇದನ ಪಡೆದಿದ್ದರು. ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಮಕ್ಕಳಿಬ್ಬರು ಹಾಜರಿದ್ದರು. ಮಾನ್ ಅವರ 2ನೇ ಪತ್ನಿ ಡಾ.ಗುರುಪ್ರೀತ್ ಕೌರ್ ಎಂಬಿಬಿಎಸ್ ಮಾಡಿದ್ದಾರೆ.