Rishi Sunak: ಬಿಟ್ರನ್ ಪ್ರಧಾನಿ ರೇಸ್‌ನಲ್ಲಿರುವ ರಿಷಿ ಸುನಕ್ ಯಾರು..?

ರಾಜಕೀಯಕ್ಕೆ ಸೇರುವ ಮೊದಲು ರಿಷಿ ಸುನಕ್ ತಮ್ಮ ತಾಯಿಯವರ Pharmacy ವ್ಯವಹಾರಕ್ಕೆ ಸಹಾಯ ಮಾಡುತ್ತಿದ್ದರು.

ನವದೆಹಲಿ: ಬ್ರಿಟನ್ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿರುವ ಹಿನ್ನೆಲೆ ಮುಂದಿನ ಪ್ರಧಾನಿ ಯಾರಾಗ್ತಾರೆ ಅನ್ನೋದರ ಬಗ್ಗೆ ತೀವ್ರ ಕುತೂಹಲ ಶುರುವಾಗಿದೆ. ಇದರ ಬೆನ್ನಲ್ಲೇ ಭಾರತ ಮೂಲದ ರಿಷಿ ಸುನಕ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅಳಿಯರಾಗಿರವು ಈ ರಿಷಿ ಸುನಕ್ ಯಾರು? ಅವರ ಹಿನ್ನೆಲೆ ಏನು? ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಸರಣಿ ವಿವಾದಗಳ ಹಿನ್ನೆಲೆ ಅಂತಿಮವಾಗಿ ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ ಹುದ್ದೆ ತೊರೆದಿದ್ದಾರೆ. ಬೋರಿಸ್ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ 40ಕ್ಕೂ ಹೆಚ್ಚು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ಫೋಸಿಸ್ ನಾರಾಯಣ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿ ವಿರುದ್ಧ ಪ್ರತಿಭಟನೆ ನಡೆಸಿ ಎಲ್ಲರಿಗಿಂತ ಮೊದಲು ತಮ್ಮ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಇತರ ಸಚಿವರೂ ಸುನಕ್ ಅವರ ಹಾದಿಯನ್ನೇ ಹಿಡಿದ್ದರು.

2 /5

ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಿಷಿ ಸುನಕ್, ರಿಚ್ಮಂಡ್ (ಯಾರ್ಕ್ಸ್) ಯುಕೆ ಸಂಸತ್ತಿನ ಸದಸ್ಯರಾಗಿದ್ದಾರೆ. ಅವರು ಕನ್ಸರ್ವೇಟಿವ್ ಪಕ್ಷದ ಸದಸ್ಯರಾಗಿದ್ದಾರೆ. ಇನ್ಫೋಸಿಸ್ ಸಹ-ಸಂಸ್ಥಾಪಕ, ಖ್ಯಾತ ಉದ್ಯಮಿ ಎನ್.ಆಆರ್.ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ರಿಷಿ ವಿವಾಹವಾಗಿದ್ದಾರೆ. ಬ್ರಿಟನ್‌ನ ಮುಂದಿನ ಪ್ರಧಾನಿಯಾಗುವ ರೇಸ್‌ಗೆ ರಿಷಿ ಧುಮುಕಿದ್ದಾರೆ. ‘ನಾನು ಕನ್ಸರ್ವೇಟಿವ್ ಪಕ್ಷದ ಮುಂದಿನ ನಾಯಕ ಮತ್ತು ನಿಮ್ಮ ಪ್ರಧಾನಿಯಾಗಲು ನಿಂತಿದ್ದೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

3 /5

ಸುನಕ್ ಅವರ ತಾಯಿ Pharmacist ಆಗಿದ್ದರೆ, ಅವರ ತಂದೆ ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ಪದವೀಧರರು. ಇಂಗ್ಲೆಂಡನ ಆರೋಗ್ಯ ಸಂಸ್ಥೆ National Health Service (NHS)ನೊಂದಿಗೆ ಸಾಮಾನ್ಯ ವೈದ್ಯ(GP)ರಾಗಿದ್ದಾರೆ. ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿಗೆ ಕೃಷ್ಣಾ ಮತ್ತು ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

4 /5

ರಿಷಿ ಸುನಕ್ ಅವರು ತಮ್ಮ ಬಾಲ್ಯವನ್ನು ಇಂಗ್ಲೆಂಡಿನಲ್ಲಿ ಕಳೆದಿದ್ದರು. ವಿಂಚೆಸ್ಟರ್ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದರು. ನಂತರ ಆಕ್ಸ್‌ಫರ್ಡ್‌ನ ಲಿಂಕನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಬಳಿಕ ಎಂಬಿಎಗಾಗಿ ಕ್ಯಾಲಿಫೋರ್ನಿಯಾ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಸೇರಿದರು. ಇಲ್ಲಿಯೇ ಅವರಿಗೆ ಅಕ್ಷತಾ ಮೂರ್ತಿ ಪರಿಚಯವಾಗಿತ್ತು. ಬಳಿಕ ಇವರಿಬ್ಬರು ಪ್ರೀತಿಸಿ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

5 /5

ರಾಜಕೀಯಕ್ಕೆ ಸೇರುವ ಮೊದಲು ರಿಷಿ ಸುನಕ್ ತಮ್ಮ ತಾಯಿಯ pharmacy ವ್ಯವಹಾರಕ್ಕೆ ಸಹಾಯ ಮಾಡುತ್ತಿದ್ದರು. ಬಳಿಕ ದೊಡ್ಡ ಉದ್ಯಮಗಳನ್ನು ರೂಪಿಸುವ ಮಟ್ಟಕ್ಕೆ ಅವರು ಬೆಳೆದರು. ರಿಷಿ ಶತಕೋಟಿ-ಪೌಂಡ್ ಜಾಗತಿಕ ಹೂಡಿಕೆ ಸಂಸ್ಥೆಯ ಸಹ-ಸಂಸ್ಥಾಪಕರಾಗಿದ್ದಾರೆ. ರಿಷಿ ಮತ್ತು ಅಕ್ಷತಾ ದಂಪತಿ ತಮ್ಮ ಅಗಾಧ ಸಂಪತ್ತಿನಿಂದಲೇ ಸುದ್ದಿಯಾಗಿದ್ದರು. ಕಳೆದ ವರ್ಷದ ಬಜೆಟ್‌ಗಿಂತ ಮುಂಚಿತವಾಗಿ 95 ಪೌಂಡ್ ಬೆಲೆಯ ಚಪ್ಪಲಿಗಳು ಮತ್ತು 180 ಪೌಂಡ್ ಬೆಲೆಯ ‘ಸ್ಮಾರ್ಟ್ ಮಗ್’ನಂತಹ ಖರೀದಿಗಳಿಂದ ಈ ದಂಪತಿ ಕೆಲವೊಮ್ಮೆ ಗಮನ ಸೆಳೆದಿದ್ದಾರೆ. ಸುನಕ್ 2015ರಲ್ಲಿ ತಮ್ಮ ಸಂಸತ್ ಸದ್ಯರಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಬ್ರೆಕ್ಸಿಟ್ ಪರ ಧ್ವನಿ ಎತ್ತಿದವರಲ್ಲಿ ಇವರೇ ಅಗ್ರಗಣ್ಯರು. 2019ರಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಚುನಾವಣೆಯಲ್ಲಿ ರಿಷಿ ಬೋರಿಸ್‍ರನ್ನು ಬೆಂಬಲಿಸಿದ್ದರು. ಬೋರಿಸ್ ಜಾನ್ಸನ್ ಪ್ರಧಾನಿಯಾಗಿ ಆಯ್ಕೆಯಾದ ನಂತರ ರಿಷಿಗೆ ಹಣಕಾಸು ಇಲಾಖೆ ಮುಖ್ಯ ಕಾರ್ಯದರ್ಶಿಯ ಜವಾಬ್ದಾರಿ ನೀಡಲಾಯಿತು. ಸುನಕ್ ಕಾರ್ಯಕ್ಷಮತೆ ಶ್ಲಾಘಿಸಿದ ಜಾನ್ಸನ್ ಸಂಪುಟ ವಿಸ್ತರಣೆ ವೇಳೆ 2020ರ ಫೆಬ್ರವರಿಯಲ್ಲಿ ಪೂರ್ಣ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ನೇಮಕ ಮಾಡಿದರು. ರಿಷಿ ಬ್ರಿಟನ್‌ನ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ರಿಟನ್‌ನಲ್ಲಿ ರಿಷಿ ಜನಪ್ರಿಯತೆ ಹೆಚ್ಚಾಯ್ತು.