Visit To Space Station: ಪ್ರವೇಶಿಸಲಿರುವ ಮೊಟ್ಟಮೊದಲ ಖಾಸಗಿ ವ್ಯಕ್ತಿಗಳಿವರು, ಯಾತ್ರೆಗೆ ನೀಡಿದ ಹಣ ಎಷ್ಟು ಗೊತ್ತಾ?

Visit To Space Station: ಮೊಟ್ಟಮೊದಲ ಬಾರಿಗೆ ಮೂವರು ಖಾಸಗಿ ವ್ಯಕ್ತಿಗಳು ಮುಂದಿನ ವರ್ಷ International Space Station ಗೆ ಭೇಟಿ ನೀಡಲಿದ್ದಾರೆ. 

Visit To Space Station: ಮೊಟ್ಟಮೊದಲ ಬಾರಿಗೆ ಮೂವರು ಖಾಸಗಿ ವ್ಯಕ್ತಿಗಳು ಮುಂದಿನ ವರ್ಷ International Space Station ಗೆ ಭೇಟಿ ನೀಡಲಿದ್ದಾರೆ. ಇದಕ್ಕಾಗಿ ಅವರು ಪ್ರತ್ಯೇಕ 400 ಕೋಟಿ ರೂ. ಹಣ ಪಾವತಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಮೊದಲ ಖಾಸಗಿ ಯಾತ್ರೆಯಾಗಿರಲಿದೆ. ಇದು ಈ ಹಿಂದೆ ಎಂದಿಗೂ ಸಂಭವಿಸಿಲ್ಲ.

 

ಇದನ್ನು ಓದಿ - Antarctica ಶ್ವೇತ ಹಿಮಚಾದರದ ಮೇಲೆ ದಿಗ್ಭ್ರಮೆಗೊಳಿಸುವ ವಿಚಿತ್ರ ಆಕೃತಿ.! NASA ಪಂಡಿತರಿಗೂ ಸಿಗುತ್ತಿಲ್ಲ ಉತ್ತರ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೊದಲ ಖಾಸಗಿ ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿಗಳನ್ನು ಮಂಗಳವಾರ ಪರಿಚಯಿಸಲಾಗಿದೆ. ಸ್ಪೇಸ್‌ಎಕ್ಸ್ ರಾಕೆಟ್‌ (SpaceX rocket)ನೊಂದಿಗೆ ಹಾರಲು ಮೂವರು ಖಾಸಗಿ ಜನರನ್ನು ಸಹ ಆಯ್ಕೆ ಮಾಡಲಾಗಿದೆ, ಅಂದರೆ ಮುಂದಿನ ವರ್ಷ ಮೂವರ ಖಾಸಗಿ ಪ್ರಯಾಣಿಕರು ಬಾಹ್ಯಾಕಾಶ ಕೇಂದ್ರಕ್ಕೆ ಹೋಗುತ್ತಾರೆ.

2 /5

ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಭೂಮಿಯಿಂದ ಸುಮಾರು 420 ಕಿ.ಮೀ ದೂರದಲ್ಲಿದೆ. ಈ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡುವುದು ಹಲವರ ಕನಸಾಗಿದೆ ಆದರೆ. ಪ್ರಸ್ತುತ ಈ ಅವಕಾಶ ಕೇವಲ ಮೂರು ಜನರಿಗೆ ಮಾತ್ರ ಸಿಗುತ್ತಿದೆ. ಈ ಯಾತ್ರೆಗಾಗಿ ಜನರು ಭಾರಿ ಪ್ರಮಾಣದಲ್ಲಿ ಹಣ ನೀಡಲು ಸಿದ್ಧರಿದ್ದಾರೆ.

3 /5

ಈ ಸ್ಪೇಸ್ ಯಾತ್ರೆಗೆ ಆಯ್ಕೆಯಾದ ಮೂವರು ಕೋಟ್ಯಾಧಿಪತಿಯಾಗಿದ್ದಾರೆ. ಈ ಯಾತ್ರೆಗಾಗಿ ಅವರು ಪ್ರತ್ಯೇಕ 400 ಕೋಟಿ ರೂ. ಶುಲ್ಕ ಪಾವತಿಸಿದ್ದಾರೆ. 

4 /5

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಲಿರುವ ಮೂವರು ವ್ಯಕ್ತಿಗಳ ಹೆಸರು 1. ಐಟಾನ್ ಸ್ಟಿಬೆ (Eytan Stibbe) 2. ಮಾರ್ಕ್ ಪೈಥಿ (Mark Pathy) ಹಾಗೂ 3. ಲ್ಯಾರಿ ಕಾನರ್ (Larry Connor) ಇದೆ. ಈ ಮೂವರು ಮುಂದಿನ ವರ್ಷ ಸ್ಪೇಸ್ ಸ್ಟೇಷನ್ ಯಾತ್ರಗೆ ತೆರಳಲಿದ್ದಾರೆ.

5 /5

NASA ದ ಓರ್ವ ಮಾಜಿ ಬಾಹ್ಯಾಕಾಶ ಯಾತ್ರಿ ಈ ಮೂವರ ತಂಡದ ನೇತೃತ್ವ ವಹಿಸಲಿದ್ದಾರೆ.  ಸದ್ಯ ಅವರು ಎಕ್ಸಿ ಓಂ ಸ್ಪೇಸ್ ಗಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಪ್ರಸ್ತಾವಿಸಲಾಗಿರುವ ಈ ಯಾತ್ರೆಯ ವ್ಯವಸ್ಥೆಯನ್ನು ಹ್ಯೂಸ್ಟನ್ ಕಂಪನಿ ಮಾಡಿದೆ.