ಏನೇ ತಿಂದರೂ, ಕುಡಿದರೂ ಅದರ ಕಣಗಳು ಹಲ್ಲು ಮತ್ತು ವಸಡುಗಳಿಗೆ ಅಂಟಿಕೊಳ್ಳುತ್ತವೆ. ಅವುಗಳನ್ನು ಸ್ವಚ್ಛಗೊಳಿಸದಿದ್ದರೆ ಅವು ಫ್ಲೆಕ್ ರೂಪವನ್ನು ಪಡೆಯುತ್ತವೆ.
ಬೆಂಗಳೂರು : ಹಲ್ಲುಗಳ ಬೇರುಗಳಲ್ಲಿ ಪ್ಲೇಕ್ ಪ್ರಮಾಣ ಹೆಚ್ಚಾಗಿದ್ದರೆ ಹಲ್ಲುಗಳು ಮತ್ತು ಒಸಡುಗಳಲ್ಲಿ ರಕ್ತಸ್ರಾವವಾಗುತ್ತದೆ. ಎಷ್ಟೇ ಚೆನ್ನಾಗಿ ಹಲ್ಲುಜ್ಜಿದ ನಂತರವೂ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ. ಪ್ಲೇಕ್ ಬ್ಯಾಕ್ಟೀರಿಯಾದ ಪದರವಾಗಿದ್ದು ಅದು ಹೆಚ್ಚಿನ ಜನರ ಹಲ್ಲುಗಳು ಮತ್ತು ಒಸಡುಗಳ ಮೇಲೆ ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ ಹಲ್ಲುಗಳು ಹಳದಿಯಾಗುವುದು, ದಂತಕ್ಷಯ, ವಸಡು ಕಾಯಿಲೆ ಕಾಣಿಸಿಕೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹಳದಿ ಕಲೆಗಳು ಹಲ್ಲುಗಳ ಮೇಲೆ ಜಮೆಯಾಗುತ್ತಾ ಹೋದ ಹಾಗೆ ಆಸಿಡ್ ರಚನೆಗೂ ಕಾರಣವಾಗುತ್ತದೆ.ಇದು ಹಲ್ಲಿನ ದಂತಕವಚವನ್ನು ನಾಶಪಡಿಸುತ್ತದೆ. ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಮತ್ತು ಅವುಗಳನ್ನು ಬಿಳುಪುಗೊಳಿಸಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ಅಡಿಗೆ ಸೋಡಾ ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬೇಕಿಂಗ್ ಸೋಡಾವನ್ನು ನೀರಿಗೆ ಸೇರಿಸಿ ಪೇಸ್ಟ್ ಮಾಡಿ ವಾರಕ್ಕೆ ನಾಲ್ಕು ಬಾರಿ ಈ ಪೇಸ್ಟ್ನಿಂದ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ. ಇದು ಹಲ್ಲಿನ ಹಳದಿ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಅಲೋವೆರಾ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಪ್ಲೇಕ್ ಅನ್ನು ಕಡಿಮೆ ಮಾಡಲು ಒಸಡಿನ ಸಮಸ್ಯೆ ನಿವಾರಿಸಲು ಅಲೋವೆರಾ ಜೆಲ್ ಅನ್ನು ನೈಸರ್ಗಿಕ ಟೂತ್ ಪೇಸ್ಟ್ ಅಥವಾ ಮೌತ್ವಾಶ್ ಆಗಿ ಬಳಸಬಹುದು .
ಎಳ್ಳು ನೈಸರ್ಗಿಕ ಹಲ್ಲಿನ ಪುಡಿಯಾಗಿ ಕಾರ್ಯನಿರ್ವಹಿಸುತ್ತದೆ.ಅದು ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಲ್ಲುಜ್ಜಿದ ನಂತರ, ಒಂದು ಚಮಚ ಎಳ್ಳನ್ನು ತೆಗೆದುಕೊಂಡು ನಿಮ್ಮ ಬ್ರಷ್ನಿಂದ ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ.
ಆಪಲ್ ಸೈಡರ್ ವಿನೆಗರ್ : ಆಪಲ್ ಸೈಡರ್ ವಿನೆಗರ್ ನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಬಾಯಿಯಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.ಆದರೆ ಅದರ ಆಮ್ಲೀಯತೆಯಿಂದಾಗಿ, ನೀರಿನಲ್ಲಿ ಬೆರೆಸಿಯೇ ಇದನ್ನು ಬಳಸಬೇಕು.
ಲವಂಗ ಎಣ್ಣೆ: ಲವಂಗದ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬ್ಯಾಕ್ಟೀರಿಯಾ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ವಚ್ಛವಾದ ಹತ್ತಿ ಉಂಡೆಯಿಂದ ಲವಂಗದ ಎಣ್ಣೆಯನ್ನು ಒಸಡುಗಳ ಮೇಲೆ ಹಚ್ಚಿದರೆ ಹಲ್ಲಿನ ಹಲಸಿಕಲೆ ಕಡಿಮೆಯಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.