Raksha Bandhan ದಿನ ನಿಮ್ಮ ಸಹೋದರಿಗೆ ನೀಡಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್

                   

ದೇಶದಲ್ಲಿ ಜುಲೈ ತಿಂಗಳು ಕಳೆದು ಆಗಸ್ಟ್ ತಿಂಗಳು ಬಂತೆಂದರೆ ಹಬ್ಬವೋ ಹಬ್ಬ.  ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ದಿನವನ್ನು ಮಾತ್ರವಲ್ಲ ಸಹೋದರ-ಸಹೋದರಿಯರ ಬಂಧನ ಬೆಸೆಯುವ ರಕ್ಷಾ ಬಂಧನವನ್ನೂ ಆಚರಿಸಲಾಗುತ್ತದೆ. ಇದೊಂದು ಶುಭ ಹಬ್ಬವಾಗಿದ್ದು, ಸಹೋದರ ಸಹೋದರಿಯರ ಬಾಂಧವ್ಯವನ್ನು ಬಲಪಡಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಸಹೋದರಿಯು ಸಹೋದರನ ಕೈಗೆ ರಾಖಿ ಕಟ್ಟಿ ತನ್ನ ಸಹೋದರನ ಏಳ್ಗೆಗಾಗಿ ಪ್ರಾರ್ಥಿಸುತ್ತಾಳೆ. ಸಹೋದರನು  ತನ್ನ ಸಹೋದರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಆಕೆಯ ರಕ್ಷಣೆ ಮಾಡುವುದಾಗಿ ಭರವಸೆ ನೀಡುತ್ತಾನೆ. 

ರಕ್ಷಾ ಬಂಧನಕ್ಕೆ ಕೆಲವೇ ದಿನಗಳು ಬಾಕಿಯಿದೆ. ನೀವು ಕೂಡ ನಿಮ್ಮ ಸಹೋದರಿಗಾಗಿ ಅತ್ಯುತ್ತಮ ಉಡುಗೊರೆಯನ್ನು ಹುಡುಕಲು ಆರಂಭಿಸಿರಬಹುದು. ಹಾಗಿದ್ದರೆ ಈ ಹಬ್ಬಕ್ಕೆ ಟ್ರೆಂಡಿ ಸ್ಮಾರ್ಟ್‌ಫೋನ್‌ಗಿಂತ ಉತ್ತಮ ಕೊಡುಗೆ ಯಾವುದು? ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ 15 ಸಾವಿರ ರೂಪಾಯಿಗಳಲ್ಲಿ ಹೆಚ್ಚಿನ ಫೀಚರ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ಅಂತಹ ಫೋನ್‌ಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಶಿಯೋಮಿ ರೆಡ್ಮಿ ನೋಟ್ 10 ಬೆಲೆ: ರೂ. 13,499 ಫೋನಿನ ವಿಶೇಷತೆಗಳು: ಫೋನ್ 6.43 ಡಿಸ್ಪ್ಲೇ ಹೊಂದಿದೆ. ಫೋನ್ 4 GB RAM ಮತ್ತು 64 GB ಸ್ಟೋರೇಜ್ ಹೊಂದಿದೆ. ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಫೋನ್ ಅನ್ನು 512 ಜಿಬಿಗೆ ವಿಸ್ತರಿಸಬಹುದು. ಫೋನ್ 48MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ 8MP, 2MP, 2MP ಹಿಂಬದಿಯ ಕ್ಯಾಮೆರಾ ಇದೆ. ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಫೋನ್ 5000mAH ಬ್ಯಾಟರಿಯನ್ನು ಹೊಂದಿದೆ.

2 /5

ರಿಯಲ್ಮೆ 8 (Realme 8)  ಬೆಲೆ: ರೂ. 14,999 ಫೋನಿನ ವಿಶೇಷತೆಗಳು: ಫೋನ್ 6.5 ಇಂಚಿನ ಡಿಸ್ಪ್ಲೇ ಹೊಂದಿದೆ. ಫೋನ್ 128GB ಸ್ಟೋರೇಜ್ ಜೊತೆಗೆ 4GB/6GB/8GB RAM. ಫೋನ್ 64MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಉಳಿದವು 8MP + 2MP + 2MP ಹಿಂಭಾಗದ ಕ್ಯಾಮರಾ. ಇದರೊಂದಿಗೆ 16MP ಸೆಲ್ಫಿ ಕ್ಯಾಮೆರಾ ಇದೆ. ಫೋನ್ 5000mAH ಬ್ಯಾಟರಿಯನ್ನು ಹೊಂದಿದೆ.

3 /5

ಪೊಕೊ ಎಂ 3 (Poco M3) ಬೆಲೆ: ರೂ 12,999 ಫೋನಿನ ವಿಶೇಷತೆಗಳು: ಫೋನ್ 6.53 ಇಂಚಿನ ಡಿಸ್ಪ್ಲೇ ಹೊಂದಿದೆ. ಫೋನ್ 64GB / 128GB ಸ್ಟೋರೇಜ್ ಅನ್ನು 4GB RAM ನೊಂದಿಗೆ ಹೊಂದಿದೆ. ಫೋನ್ 48MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಉಳಿದವು 2MP + 2MP ಹಿಂಬದಿಯ ಕ್ಯಾಮೆರಾ. ಇದರೊಂದಿಗೆ 8MP ಸೆಲ್ಫಿ ಕ್ಯಾಮೆರಾ ಇದೆ. ಫೋನ್ 6000mAH ಬ್ಯಾಟರಿಯನ್ನು ಹೊಂದಿದೆ. ಇದನ್ನೂ ಓದಿ- Oppo: ಶಕ್ತಿಯುತ ಬ್ಯಾಟರಿ, ಉತ್ತಮ ಕ್ಯಾಮೆರಾದೊಂದಿಗೆ ರಹಸ್ಯವಾಗಿ ಜಬರ್ದಸ್ತ್ Smartphone ಬಿಡುಗಡೆ ಮಾಡಿದ ಒಪ್ಪೋ

4 /5

ಒಪ್ಪೋ A54 (Oppo A54) ಬೆಲೆ: ರೂ. 13,490 ಫೋನಿನ ವಿಶೇಷತೆಗಳು: ಫೋನ್ 6.51 ಇಂಚಿನ ಡಿಸ್ಪ್ಲೇ ಹೊಂದಿದೆ. ಫೋನ್ 64GB/128GB ಸ್ಟೋರೇಜ್ ಜೊತೆಗೆ 4GB/6GB RAM ಹೊಂದಿದೆ. ಫೋನ್ 13MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಉಳಿದವು 2MP + 2MP. ಇದರೊಂದಿಗೆ 16MP ಸೆಲ್ಫಿ ಕ್ಯಾಮೆರಾ ಇದೆ. ಫೋನ್ 5000mAH ಬ್ಯಾಟರಿಯನ್ನು ಹೊಂದಿದೆ. ಇದನ್ನೂ ಓದಿ- Redmi 10 ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು ಸೋರಿಕೆ, ಇದರ ವಿಶೇಷತೆ ಇಲ್ಲಿದೆ

5 /5

Samsung Galaxy M32 ಬೆಲೆ: ರೂ 14,999 ಫೋನಿನ ವಿಶೇಷತೆಗಳು: ಫೋನ್ 6.4 ಇಂಚಿನ ಡಿಸ್ಪ್ಲೇ ಹೊಂದಿದೆ. ಫೋನ್ 128GB ಸ್ಟೋರೇಜ್ ಜೊತೆಗೆ 4GB/8GB RAM ಹೊಂದಿದೆ. ಫೋನ್ 64MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಉಳಿದವು 8MP + 2MP + 2MP ಹಿಂಭಾಗದ ಕ್ಯಾಮರಾ. ಇದರೊಂದಿಗೆ 20MP ಸೆಲ್ಫಿ ಕ್ಯಾಮೆರಾ ಇದೆ. ಫೋನ್ 6000mAH ಬ್ಯಾಟರಿಯನ್ನು ಹೊಂದಿದೆ.