ಖಾಸಗಿ ಆಸ್ಪತ್ರೆಗಳಲ್ಲಿ Sputnik-V ಲಸಿಕೆ ಲಭ್ಯ, CoWIN ಪೋರ್ಟಲ್ ನಲ್ಲಿ ಬುಕ್ ಮಾಡುವುದು ಹೇಗೆ ತಿಳಿಯಿರಿ

ಕರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತ ತನ್ನ ವ್ಯಾಕ್ಸಿನೇಷನ್ ಅಭಿಯಾನವನ್ನು ತೀವ್ರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ವಿದೇಶಗಳಿಂದಲೂ ಲಸಿಕೆಗಳನ್ನು ತರಿಸಿಕೊಳ್ಳಲಾಗುತ್ತಿದೆ.

ನವದೆಹಲಿ : ಇಲ್ಲಿಯವರೆಗೆ, ತಮ್ಮ ಎರಡು ಸ್ವದೇಶಿ ಲಸಿಕೆಗಳೊಂದಿಗೆ ಕೊರೊನಾವೈರಸ್ ವಿರುದ್ಧ ಸೆಣೆಸಾಟ ನಡೆಸಲಾಗುತ್ತಿತ್ತು. ಇದೀಗ  ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಕೂಡಾ ಭಾರತದಲ್ಲಿ ಲಭ್ಯವಿದೆ. ರಷ್ಯಾದೊಂದಿಗಿನ ಒಪ್ಪಂದದ ನಂತರ, ಈ ಲಸಿಕೆಯನ್ನು ಭಾರತಕ್ಕೆ ತರಿಸಲಾಗಿದೆ. ಈ ಲಸಿಕೆಯನ್ನು ಈಗ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

 ರಷ್ಯಾದಲ್ಲಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆ ಕರೋನಾ ವೈರಸ್ ವಿರುದ್ಧ ಶೇಕಡಾ 91 ರಷ್ಟು ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ.  ಈ ಲಸಿಕೆ ಈಗ ಭಾರತದಲ್ಲಿಯೂ ಲಭ್ಯವಿದೆ. ಈ ಲಸಿಕೆ ಯಾವ ಆಸ್ಪತ್ರೆಗಳಲ್ಲಿ ಹಾಕಿಸಲಾಗುತ್ತಿದೆ ಎಂಬ ಮಾಹಿತಿ ಕೋವಿನ್ ಪೋರ್ಟಲ್‌ನಲ್ಲಿ ಸಿಗಲಿದೆ. 

2 /4

ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನು ಭಾರತದಲ್ಲಿ ಡಾ. ರೆಡ್ಡಿ ಲ್ಯಾಬ್ಸ್ ಮೂಲಕ ನೀಡಲಾಗುತ್ತಿದೆ. ಒಪ್ಪಂದದ ಪ್ರಕಾರ, ರಷ್ಯಾದಲ್ಲಿ ತಯಾರಿಸಿದ ಈ ಲಸಿಕೆಯನ್ನು ಪ್ರಸ್ತುತ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರ ನಂತರ ಈ ಲಸಿಕೆಗಳನ್ನು ಡಾ. ರೆಡ್ಡಿ ಲ್ಯಾಬ್ಸ್‌ನಲ್ಲಿ ಉತ್ಪಾದಿಸಲಾಗುತ್ತದೆ. ಈ ಲಸಿಕೆಯ ಒಂದು ಡೋಸ್‌ 995 ರೂಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರಲಿದೆ. 

3 /4

ಕರೋನಾ ವಿರುದ್ಧ ವಿಶ್ವದ ಅತ್ಯಂತ ಪರಿಣಾಮಕಾರಿ ಎಂದು ಹೇಳಲಾದ ಸ್ಪುಟ್ನಿಕ್-ವಿ ಯ ಮೊದಲ ಬ್ಯಾಚ್ ಮೇ 1 ರಂದು ಭಾರತ ತಲುಪಿತ್ತು. ಇದರ ನಂತರ, ಈ ಲಸಿಕೆಯ ಎರಡನೇ ಬ್ಯಾಚ್ ಮೇ14 ರಂದು ಭಾರತ ತಲುಪಿದೆ. ಈಗ ಈ ವಾರದಿಂದ ಈ ಲಸಿಕೆಯ ಬಳಕೆ ದೇಶದ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾರಂಭವಾಗಿದೆ. 

4 /4

ನೀವು ಸಹ ಸ್ಪುಟ್ನಿಕ್-ವಿ ಲಸಿಕೆ ಪಡೆಯಲು ಬಯಸುವುದಾದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ಕೋವಿನ್ ಪೋರ್ಟಲ್‌ನಲ್ಲಿ  ನೋಂದಾಯಿಸಿಕೊಳ್ಳಬೇಕು. ಇದರ ನಂತರ, ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಜೊತೆಗೆ ಸ್ಪುಟ್ನಿಕ್-ವಿ ಆಯ್ಕೆಯನ್ನು ಕೂಡಾ ನಿಮಗೆ ಕಾಣಲಿದೆ. ಇಲ್ಲಿ ಸ್ಪುಟ್ನಿಕ್-ವಿ ಕ್ಲಿಕ್ ಮಾಡಿದರೆ, ಪಿನ್‌ಕೋಡ್‌ನ ಆಯ್ಕೆ ಬರುತ್ತದೆ. ನಿಮ್ಮ ಪ್ರದೇಶದ  ಪಿನ್ ಕೋಡ್ ಎಂಟರ್ ಮಾಡಿ. ಈಗ, ನಿಮ್ಮ ಸಮೀಪದ ಯಾವ ಆಸ್ಪತ್ರೆಗಳಲ್ಲಿ ಈ ಲಸಿಕೆ ಹಾಕಿಸುತ್ತಾರೆ ಎಂಬ  ಮಾಹಿತಿ ಪಡೆಯಬಹುದು.