iPhone 12 ಖರೀದಿಯ ಮೇಲೆ 13,900 ರೂಗಳಷ್ಟು ಲಾಭವಾಗಬಹುದು..!

ಭಾರತದಲ್ಲಿ ಅಸೆಂಬಲ್ ಮಾಡಲಾಗುವ iPhone 12 ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. 
 

ನವದೆಹಲಿ : ಕಡಿಮೆ ಬೆಲೆಗೆ  iPhone 12 ಖರೀದಿಸಬೇಕು ಎನ್ನುವುದು ಎಲ್ಲರ ಕನಸು. iPhone 12 ಖರೀದಿಸಲು ಬಯಸುವವರಿಗೆ ಅಗತ್ಯ ಮಾಹಿತಿ ಇಲ್ಲಿದೆ. ಕಡಿಮೆ ಬೆಲೆಗೆ iPhone 12  ಅನ್ನು  ಖರೀದಿ ಮಾಡುವುದು ಇನ್ನು ಸಾಧ್ಯವಾಗಬಹುದು. ಟೆಕ್ ದೈತ್ಯ Apple ಭಾರತದಲ್ಲಿಯೇ iPhone 12 ಅನ್ನು ಅಸೆಂಬಲ್ ಮಾಡುವ ಕಾರ್ಯ ಶುರು ಮಾಡಿದೆ . ಭಾರತದಲ್ಲೇ ಐ ಫೋನ್ ಅಸೆಂಬ್ಲಿಂಗ್ ಕಾರ್ಯ ಆರಂಭವಾದ ಕಾರಣ, ಫೋನಿನ ಬೆಲೆಯೂ ಕಡಿಮೆಯಾಗುವ ಸಾಧ್ಯತೆ ಇದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ತನ್ನ ಹೊಸ ಸ್ಮಾರ್ಟ್‌ಫೋನ್ iPhone 12 ಅನ್ನು ಅಸೆಂಬಲ್ ಮಾಡುವ ಕಾರ್ಯವನ್ನು ಭಾರತದಲ್ಲಿ ಆರಂಭ ಮಾಡಿದೆ ಎಂದು Apple ಕಂಪನಿಯು ಗುರುವಾರ ಪ್ರಕಟಿಸಿದೆ. ಆದರೆ, ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ನ ಸಪ್ಲಯರ್ ಯಾರು ಎನ್ನುವ ಮಾಹಿತಿಯನ್ನು ಕಂಪನಿ ಬಿಟ್ಟು ಕೊಟ್ಟಿಲ್ಲ.   

2 /5

ಭಾರತದಲ್ಲಿ ಅಸೆಂಬಲ್ ಮಾಡಲಾಗುವ iPhone 12 ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ ಎನ್ನುವುದನ್ನು ಕಂಪನಿ ಸ್ಪಷ್ಟಪಡಿಸಿದೆ.   

3 /5

Apple ಈಗಾಗಲೇ ಭಾರತದಲ್ಲಿ ಅನೇಕ ಐಫೋನ್ ಗಳನ್ನು ಅಸೆಂಬಲ್ ಮಾಡುತ್ತಿದೆ.  iPhone 12 ಭಾರತದಲ್ಲಿ ಅಸೆಂಬಲ್ ಮಾಡಲಾಗುವ ಆರನೇ ಫೋನ್ ಆಗಿದೆ. ಇದಕ್ಕೂ ಮೊದಲು iPhone SE, iPhone 6s, iPhone 7, iPhone XR ಮತ್ತು  iPhone 11ಗಳ ಅಸೆಂಬ್ಲಿಂಗ್ ಅನ್ನು ಭಾರತದಲ್ಲಿ ಮಾಡಲಾಗಿದೆ.    

4 /5

ಮಾಹಿತಿಯ ಪ್ರಕಾರ, iPhone 11 ಅನ್ನು ಭಾರತದಲ್ಲಿ ಅಸೆಂಬಲ್ ಮಾಡಲು ಶುರು ಮಾಡಿದ ನಂತರ ಗ್ರಾಹಕರಿಗೆ ಬಹಳಷ್ಟು ಲಾಭವಾಗಿದೆ. ಇದೀಗ iPhone 12ನಲ್ಲಿಯೂ  ಲಾಭ ಸಿಗಬಹುದು. ಇದು ರಿಯಾಯಿತಿಗಳು ಮತ್ತು ಕೊಡುಗೆಗಳ ರೂಪದಲ್ಲಿರಬಹುದು.

5 /5

ಭಾರತದಲ್ಲಿ ಅಸೆಂಬಲ್ ಮಾಡಲಾದ  iPhone 12ರ ಬೆಲೆಯಲ್ಲಿ 13,900 ರೂ.ಗಳಷ್ಟು ಕಡಿತವಾಗಬಹುದು. Gadgetnow ವರದಿಯ ಪ್ರಕಾರ, ಯುಎಸ್ ನಲ್ಲಿ ಸಿಗುವ  iPhone (64GB)ಯ ಬೆಲೆ  904 ಡಾಲರ್ ಅಂದರೆ ಸುಮಾರು 66,000 ರೂ. ಆದರೆ  ಕಸ್ಟಮ್ಸ್ ಮತ್ತು ಇತರ ತೆರಿಗೆಗಳನ್ನು ವಿಧಿಸಿದ ನಂತರ ಈ ಫೋನ್ ಭಾರತದಲ್ಲಿ 79,900 ರೂಪಾಯಿಗಳಿಗೆ ಮಾರಾಟವಾಗುತ್ತದೆ. ಅಂದರೆ, ಭಾರತದಲ್ಲೇ ಅಸೆಂಬಲ್ ಮಾಡುವ ಕಾರಣದಿಂದಾಗಿ ಈ ಫೋನ್ ಖರೀದಿಯ ಮೇಲೆ 13,900 ರೂ.ಗಳಷ್ಟು  ಲಾಭ ಪಡೆಯಬಹುದು.