ಒಂದು ಮಾವಿನ ಹಣ್ಣಿನ ಬೆಲೆ ಸಾವಿರ ರೂಪಾಯಿ; ಅಂಥದ್ದೇನಿದೆ ಈ ಹಣ್ಣಲ್ಲಿ..?

ಮಾವು ಅಂದರೆ ಹಣ್ಣುಗಳ ರಾಜ. ದೇಶದಲ್ಲಿ ಎಷ್ಟು ಬಗೆಯ ಮಾವಿನಹಣ್ಣುಗಳಿವೆ ಎಂದು ಲೆಕ್ಕ ಹಾಕುವುದು ಕಷ್ಟ. ಆದರೆ ಕೆಲವು ಮಾವಿನಹಣ್ಣುಗಳು ಬಹಳ ವಿಶೇಷವಾಗಿರುತ್ತವೆ.

ನವದೆಹಲಿ : ಮಾವು ಅಂದರೆ ಹಣ್ಣುಗಳ ರಾಜ. ದೇಶದಲ್ಲಿ ಎಷ್ಟು ಬಗೆಯ ಮಾವಿನಹಣ್ಣುಗಳಿವೆ ಎಂದು ಲೆಕ್ಕ ಹಾಕುವುದು ಕಷ್ಟ. ಆದರೆ ಕೆಲವು ಮಾವಿನಹಣ್ಣುಗಳು ಬಹಳ ವಿಶೇಷವಾಗಿರುತ್ತವೆ. ಮಾವಿನಹಣ್ಣಿನ 'ನೂರ್ ಜಹಾನ್' ಪ್ರಭೇದವು ಒಂದು ವಿಶೇಷ ಮಾವಿನಕಾಯಿಯಾಗಿದೆ. ಈ ಮಾವಿನ ವಿಶೇಷತೆ ಎಷ್ಟಿದೆಯೆಂದರೆ ಈ ಹಣ್ಣಿನ ಮರದಲ್ಲಿ ಕಾಯಿ ಬಿಡುವಾಗಲೇ ಮಾವನ್ನು ಬುಕ್ ಮಾಡಲು ಶುರು ಮಾಡಲಾಗುತ್ತದೆ. (photo Social media)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಕಳೆದ ವರ್ಷ 'ನೂರ್ ಜಹಾನ್' ಮಾವು ಅಷ್ಟೊಂದು ಸಂಖ್ಯೆಯಲ್ಲಿ ಫಸಲು ಕೊಟ್ಟಿರಲಿಲ್ಲ. ಆದರೆ ಈ ಬಾರಿಯ ಹವಾಮಾನದಿಂದಾಗಿ ಇದು ಉತ್ತಮ ಬೆಳೆ ಬಂದಿದೆ,. ಮಾವಿನಕಾಯಿ ಹಣ್ಣಾಗುವ ಮೊದಲೇ ಭಾರೀ ಬೆಲೆಗೆ ಬುಕ್ ಆಗಿ ಬಿಟ್ಟಿವೆ. 

2 /4

ಈ ಬಾರಿ 'ನೂರ್ ಜಹಾನ್'  ಮಾವಿನ ಹಣ್ಣುಗಳ ತೂಕವು ಎರಡರಿಂದ ಮೂರುವರೆ ಕಿಲೋಗ್ರಾಂಗಳಷ್ಟಿದೆ. ಮಧ್ಯಪ್ರದೇಶ ಮತ್ತು ಗುಜರಾತ್‌ ನವರು ಈ ಹಣ್ಣನ್ನು ಮೊದಲೇ ಕಾಯ್ದಿರಿಸಿದ್ದಾರೆ. 

3 /4

ಇಂದೋರ್‌ನಿಂದ 250 ಕಿ.ಮೀ ದೂರದಲ್ಲಿರುವ ಕಟ್ಟಿವಾಡಾದ ಮಾವಿನ ಬೆಳೆಗಾರ ಶಿವರಾಜ್ ಸಿಂಗ್ ಜಾಧವ್,  ಎಂಬವರ  ತೋಟದಲ್ಲಿ ಮೂರು ನೂರ್ ಜಹಾನ್  ಮರಗಳಲ್ಲಿ  ಸುಮಾರು  250 ಹಣ್ಣುಗಳು ಬಿಟ್ಟಿವೆ. ಈ ಎಲ್ಲಾ ಹಣ್ಣುಗಳ ಬುಕಿಂಗ್ ಈಗಾಗಲೇ ಮಾಡಲಾಗಿದೆ. ನೂರ್ ಜಹಾನ್‌ನ ಮಾವಿನಕಾಯಿಗ ಬೆಲೆ 500 ರಿಂದ 1,000 ರೂಗಳಷ್ಟಿರುತ್ತದೆ.

4 /4

ನೂರ್ ಜಹಾನ್ ಮರಗಳು ಸಾಮಾನ್ಯವಾಗಿ ಜನವರಿಯಿಂದ ಫೆಬ್ರವರಿ ತಿಂಗಳಲ್ಲಿ ಹೂಬಿಡಲು ಪ್ರಾರಂಭಿಸುತ್ತವೆ. ಜೂನ್ ನಲ್ಲಿ ಹಣ್ಣುಗಳು ಮಾರಾಟಕ್ಕೆ ಸಿದ್ಧವಾಗುತ್ತವೆ. ಈ ಮಾವಿನಹಣ್ಣಿನ ಬೀಜವೇ ಸುಮಾರು 150 ರಿಂದ 200 ಗ್ರಾಂ ತೂಕವಿರುತ್ತವೆ.