Aadhaar News: ನಿಮ್ಮ ಹತ್ತಿರದ ಆಧಾರ್ ಸೆಂಟರ್ ಯಾವುದೆಂದು ತಿಳಿಯಲು ಈ ಸರಳ ವಿಧಾನ ಅನುಸರಿಸಿ

ಆಧಾರ್ ಕಾರ್ಡ್ ಈಗ ಅಗತ್ಯ ದಾಖಲೆಯಾಗಿ ಮಾರ್ಪಟ್ಟಿದೆ. ಏನೇ ಕೆಲಸ ಮಾಡುವುದಿದ್ದರೂ ಆಧಾರ್ ಬೆಕೇ ಬೇಕು. ಕಾಲಕಾಲಕ್ಕೆ, ಅದರಲ್ಲಿ ಅನೇಕ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. 

ನವದೆಹಲಿ : Aadhaar Card Enrollment Center : ಆಧಾರ್ ಕಾರ್ಡ್ ಈಗ ಅಗತ್ಯ ದಾಖಲೆಯಾಗಿ ಮಾರ್ಪಟ್ಟಿದೆ. ಏನೇ ಕೆಲಸ ಮಾಡುವುದಿದ್ದರೂ ಆಧಾರ್ ಬೆಕೇ ಬೇಕು. ಕಾಲಕಾಲಕ್ಕೆ, ಅದರಲ್ಲಿ ಅನೇಕ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಈ ಕೆಲಸಗಳನ್ನೂ ಆನ್‌ಲೈನ್ ನಲ್ಲಿಯೂ ಮಾಡಬಹುದು. ಆದರೆ, ಕೆಲವೊಂದು ಕೆಲಸಗಳಿಗಾಗಿ ಆಧಾರ್ ಕೇಂದ್ರಕ್ಕೇ ಭೇಟಿ ನೀಡಬೇಕಾಗುತ್ತದೆ.  ಒಂದು ವೇಳೆ ನಿಮಗೂ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಅನಿವಾರ್ಯತೆ ಎದುರಾದರೆ,  ನಿಮ್ಮ ಹತ್ತಿರದ ಆಧಾರ್ ಕೇಂದ್ರದ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಪಡೆಯಬಹುದು. ಅದರ ಸರಳ ವಿಧಾನ ಇಲ್ಲಿದೆ..
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /3

1. ಮೊದಲಿಗೆ ಯುಐಡಿಎಐಯ (UIDAI) ಅಧಿಕೃತ ವೆಬ್‌ಸೈಟ್‌  https://uidai.gov.in/. ಲಾಗಿನ್ ಮಾಡಿ 2.  ಇದರ ನಂತರ, My Aadhaar ಗೆ ಹೋಗಿ,  Get Aadhaar  ಮೂಲಕ Locate an Enrollment Center ಮೇಲೆ ಕ್ಲಿಕ್ ಮಾಡಿ 3. ಇಲ್ಲಿ ಇಂದು ವಿಂಡೋ ತೆರೆಯುತ್ತದೆ. ಅದರಲ್ಲಿ ನೀವು ರಾಜ್ಯ, ಪಿನ್ ಕೋಡ್ ಮತ್ತು ಸರ್ಚ್ ಬಾಕ್ಸ್ ನ ಾಪ್ಶನ್ ಇರುತ್ತದೆ. 4. ಇಲ್ಲಿ ಮೂರು ವಿಧಾನಗಳಲ್ಲಿ ಆಧಾರ್ ಕೇಂದ್ರವನ್ನು ಸರ್ಚ್ ಮಾಡಬಹುದು.  5. ರಾಜ್ಯದ ಮೇಲೆ ಕ್ಲಿಕ್ ಮಾಡಿದರೆ, ಮುಂದಿನ ಪುಟದಲ್ಲಿ ರಾಜ್ಯ, ಜಿಲ್ಲೆ, ಗ್ರಾಮದ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಕ್ಯಾಪ್ಚಾವನ್ನು ಹಾಕಿ,  Locate a Centre ಮೇಲೆ ಕ್ಲಿಕ್ ಮಾಡಿ.  6. ಇಲ್ಲಿ Show Only permanent centresನ  ಚೆಕ್ ಬಾಕ್ಸ್ ಕಾಣಿಸುತ್ತದೆ. ಇಲ್ಲಿ ಸರ್ಚ್ ಮಾಡಿದರೆ, ಶಾಶ್ವತ ಕೇಂದ್ರಗಳ ಪಟ್ಟಿ ಸಿಗುತ್ತದೆ.   

2 /3

ನೀವು ಹತ್ತಿರದ ಆಧಾರ್ ಕೇಂದ್ರದ ಸರ್ಚ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದ್ದರೆ, ಮುಂದಿನ ಪುಟದಲ್ಲಿ, ಲೊಕ್ಯಾಲಿಟಿ ನೇಮ್, ನಗರ ಅಥವಾ ಜಿಲ್ಲೆಯ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಕ್ಯಾಪ್ಚಾವನ್ನು ನಮೂದಿಸಿ Locate a Centre ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕೂಡಾ ಶಾಶ್ವತ ಕೇಂದ್ರಗಳ ಮಾಹಿತಿಗಾಗಿ ಚೆಕ್ ಬಾಕ್ಸ್ ಅನ್ನು ಪರಿಶೀಲಿಸುವ ಆಯ್ಕೆ ಸಿಗುತ್ತದೆ. ಪೋಸ್ಟಲ್ ಪಿನ್ ಕೋಡ್ ಮೇಲೆ ಕ್ಲಿಕ್ ಮಾಡಿದ್ದರೆ, ಮುಂದಿನ ಪುಟದಲ್ಲಿ ಪಿನ್ ಕೋಡ್ ನಮೂದಿಸಿ ಮತ್ತು ಕ್ಯಾಪ್ಚಾ ಹಾಕಿ Locate a Centre  ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕೂಡಾ Show only permanent centres ನಲ್ಲಿ ಚೆಕ್ ಮಾಡಿದರೆ, ನಿಮ್ಮ ಹತ್ತಿರವಿರುವ ಶಾಶ್ವತ ಕೇಂದ್ರಗಳ ಸಂಪೂರ್ಣ  ಮಾಹಿತಿ ಸಿಗುತ್ತದೆ. 

3 /3

ಈಗ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಇದೋಮದು ಕೇವಲ ಗುರುತು ಚೀಟಿ ಮಾತ್ರವಲ್ಲ, ಅನೇಕ ಸರ್ಕಾರಿ ಸೇವೆಗಳನ್ನು ಪಡೆಯಲು ಆಧಾರ್ ಅಗತ್ಯವಾಗಿದೆ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಕೆಲವು ತಪ್ಪುಗಳು ಅಥವಾ ಅಪ್ ಡೇಟ್ ಮಾಡಿರದಿದ್ದರೆ, ನಿಮ್ಮ ಗುರುತನ್ನು ದೃಢೀಕರಿಸಲು ಇದನ್ನು ಬಳಸಲು ಸಾಧ್ಯವಾಗುವುದಿಲ್ಲ.  ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ಆಧಾರ್‌ನಲ್ಲಿ ನವೀಕರಿಸಬೇಕು. ಇದಲ್ಲದೆ, ಮಗುವಿನ ಬಯೋಮೆಟ್ರಿಕ್ ವಿವರಗಳನ್ನು 5 ವರ್ಷ ಮತ್ತು 15 ವರ್ಷ ವಯಸ್ಸಿನಲ್ಲಿ ಅಪ್ ಡೇಟ್ ಮಾಡಬೇಕು.