ವಾಟ್ಸಾಪ್ ಬಿಸಿನೆಸ್ನಲ್ಲಿ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಲಾಗಿದೆ. ಈ ಫೀಚರ್ ಗಾಗಿ ಬಹಳ ಸಮಯಗಳಿಂದ ಬೇಡಿಕೆ ಇಡಲಾಗಿತ್ತು.
ನವದೆಹಲಿ : ವಾಟ್ಸಾಪ್ ಈ ದಿನಗಳಲ್ಲಿ ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇದೀಗ ಚಾಟಿಂಗ್ ಅಪ್ಲಿಕೇಶನ್ ತನ್ನ ಹೊಸ ಬಿಸಿನೆಸ್ ವಾಟ್ಸಾಪ್ (Business WhatsApp) ಅನ್ನು ಅಪ್ಡೇಟ್ ಮಾಡಿದೆ. ಬಹಳ ದಿನಗಳಿಂದ ಬಳಕೆದಾರರು ಇಟ್ಟಿದ ಬೇಡಿಕೆಯನ್ನು ಇದೀಗ ಈಡೇರಿಸಲಾಗಿದೆ. ಹೊಸ ವೈಶಿಷ್ಟ್ಯವನ್ನು WhatsApp Businessನಲ್ಲಿ ಲಾಂಚ್ ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಟೆಕ್ ಸೈಟ್ ಟೆಲಿಕಾಂಟಾಕ್ ಪ್ರಕಾರ, ವಾಟ್ಸಾಪ್ ಇತ್ತೀಚೆಗೆ ಬಿಸಿನೆಸ್ ವಾಟ್ಸಾಪ್ನ ವೆಬ್ ಆವೃತ್ತಿಯನ್ನು (Desktop Version) ಬಿಡುಗಡೆ ಮಾಡಿದೆ.
ಇದಕ್ಕೂ ಮೊದಲು Business WhatsApp ಅನ್ನು ಮೊಬೈಲ್ನಿಂದ ಮಾತ್ರ ಆಕ್ಸೆಸ್ಸ್ ಮಾಡಬಹುದಾಗಿತ್ತು.
ಬಿಸಿನೆಸ್ ವಾಟ್ಸಾಪ್ ನ ಡೆಸ್ಕ್ಟಾಪ್ ಆವೃತ್ತಿಯೊಂದಿಗೆ ಅನೇಕ ಕೆಲಸಗಳನ್ನು ಸುಲಭವಾಗಿ ಮಾಡುವುದು ಸಾಧ್ಯವಾಗುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಉದಾಹರಣೆಗೆ, ಹೊಸ ಸೇವೆಗಳನ್ನು ಸೇರಿಸುವುದು ಅಥವಾ ಹಳೆಯ ಸೇವೆಗಳನ್ನು ತೆಗೆದುಹಾಕುವುದನ್ನು ಸುಲಭವಾಗಿ ಮಾಡಬಹುದು.
ಮಾಹಿತಿಯ ಪ್ರಕಾರ, ಹೊಸ ಬಿಸಿನೆಸ್ ವಾಟ್ಸಾಪ್ನ ಡೆಸ್ಕ್ಟಾಪ್ ಆವೃತ್ತಿಯನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡಲಾಗಿದೆ.
ವಾಟ್ಸಾಪ್ನ ಚಾಟ್ ಹಿಸ್ಟರಿಯನ್ನು Androidನಿಂದ iOSಗೆ ಸುಲಭವಾಗಿ ಟ್ರಾನ್ಸ್ಫರ್ ಮಾಡುವುದು ಸಾಧ್ಯವಾಗುತ್ತದೆ.