ಚಹಾದೊಂದಿಗೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ

ಮಳೆಯಲ್ಲಿ ಚಹಾದೊಂದಿಗೆ ಬಜ್ಜಿ, ಪಕೋಡದಂತಹ ಆಹಾರಗಳನ್ನು ತಿನ್ನಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ, ಇದು ಆರೋಗ್ಯಕ್ಕೆ ಒಳ್ಳೆಯದೇ ಎಂದು ಎಂದಾದರೂ ಯೋಚಿಸಿದ್ದೀರಾ...

ದೇಶಾದ್ಯಂತ ಮುಂಗಾರು ಅಬ್ಬರಿಸುತ್ತಿದೆ. ಮಳೆಗಾಲದಲ್ಲಿ ಚಹಾದೊಂದಿಗೆ ಎಣ್ಣೆಯಿಂದ ಕರಿದ ಪದಾರ್ಥಗಳನ್ನು ತಿನ್ನಲು ಯಾರು ತಾನೇ ಇಷ್ಟಪಡಲ್ಲ. ನೀವೂ ಸಹ ಚಹಾದೊಂದಿಗೆ ಪಕೋಡ ತಿನ್ನಲು ಇಷ್ಟಪಡುವವರಾಗಿದ್ದರೆ, ಈ ಸುದ್ದಿಯನ್ನು ತಪ್ಪದೇ ಓದಿ. ವಾಸ್ತವವಾಗಿ, ಚಹಾದೊಂದಿಗೆ ಕೆಲವು ಆಹಾರಗಳನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಚಹಾದೊಂದಿಗೆ ಪಕೋಡ : ಮಳೆಗಾಲದಲ್ಲಿ ಚಹಾದೊಂದಿಗೆ ಬಜ್ಜಿ, ಪಕೋಡದಂತಹ ಆಹಾರಗಳನ್ನು ತಿನ್ನಲು ಹಲವರು ಇಷ್ಟ ಪ್ಳದುತ್ತಾರೆ. ಆದರೆ, ಕಡಲೆಹಿಟ್ಟಿನಿಂದ ತಯಾರಿಸಿದ ಕರಿದ ಆಹಾರಗಳನ್ನು ಚಹಾದೊಂದಿಗೆ ತಿನ್ನುವುದು ಒಳ್ಳೆಯ ಅಭ್ಯಾಸವಲ್ಲ. ಚಹಾದೊಂದಿಗೆ ಕಡಲೆ ಹಿಟ್ಟನ್ನು ತಿನ್ನುವುದರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ ಮತ್ತು ಜೀರ್ಣಕ್ರಿಯೆಯ ತೊಂದರೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

2 /4

ಇದನ್ನು ಹೊರತುಪಡಿಸಿ, ಯಾವುದೇ ಹಸಿ ತರಕಾರಿಗಳು ಅಥವಾ ಹಣ್ಣುಗಳನ್ನು ಚಹಾದೊಂದಿಗೆ ತೆಗೆದುಕೊಳ್ಳಬಾರದು. ಚಹಾದೊಂದಿಗೆ ಹಸಿ ಪದಾರ್ಥಗಳನ್ನು ತಿನ್ನುವುದರಿಂದ ಆರೋಗ್ಯ ಮತ್ತು ಹೊಟ್ಟೆಗೆ ಹಾನಿಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದ್ದರಿಂದ, ನೀವು ಬಿಸಿ ಚಹಾದೊಂದಿಗೆ ಸಲಾಡ್, ಮೊಳಕೆಯೊಡೆದ ಧಾನ್ಯಗಳು ಅಥವಾ ಬೇಯಿಸಿದ ಮೊಟ್ಟೆಯನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವುದು ಒಳ್ಳೆಯದು.

3 /4

ಚಹಾ ಕುಡಿದು ನೀರು ಕುಡಿಯಬಾರದು : ಸಾಮಾನ್ಯವಾಗಿ ಹಿರಿಯರು ಚಹಾ ಕುಡಿದ ನಂತರ ನೀರು ಕುಡಿಯಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಹೀಗೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ತೀವ್ರವಾದ ಆಮ್ಲೀಯತೆ ಅಥವಾ ಇತರ ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು, ಜೊತೆಗೆ ನಿಮ್ಮ ಹಲ್ಲುಗಳನ್ನು ಹಾನಿಗೊಳಿಸಬಹುದು. ಹಾಗಾಗಿ, ಚಹಾ ಜೊತೆಗೆ ಅಥವಾ ಚಹಾ ಕುಡಿದ ನಂತರ ನೀರು ಕುಡಿಯುವುದನ್ನು ತಪ್ಪಿಸಿ.

4 /4

ಚಹಾದೊಂದಿಗೆ ಅರಿಶಿನದಿಂದ ತಯಾರಿಸಿದ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಿ. ವಾಸ್ತವವಾಗಿ, ಚಹಾ ಮತ್ತು ಅರಿಶಿನದಲ್ಲಿರುವ ರಾಸಾಯನಿಕ ಅಂಶಗಳು ಪರಸ್ಪರ ಸಂವಹನ ನಡೆಸಬಹುದು ಮತ್ತು ಹೊಟ್ಟೆಯಲ್ಲಿನ ರಾಸಾಯನಿಕ ಕ್ರಿಯೆಯಿಂದ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸಬಹುದು. ಇದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.