Venus retrograde : ಶುಕ್ರನ ಹಿಮ್ಮುಖ ಚಲನೆಯ ಪರಿಣಾಮವಾಗಿ ಈ ಮೂರು ರಾಶಿಯವರ ವೃತ್ತಿ ಬದುಕು ಎತ್ತರಕ್ಕೆ ಏರಲಿದೆ. ಆರ್ಥಿಕ ವಿಷಯಗಳಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ.
ಬೆಂಗಳೂರು : ಒಂದು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜುಲೈ 23ರಿಂದ ಶುಕ್ರನ ಚಲನೆಯಲ್ಲಿ ಬದಲಾಗಲಿದೆ. ಶುಕ್ರ ಈ ದಿನದಿಂದ ಅಂದರೆ ಇನ್ನೊಂದು ವಾರದಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸಂಪತ್ತು-ಐಶ್ವರ್ಯ, ಪ್ರೀತಿ, ಸೌಂದರ್ಯವನ್ನು ನೀಡುವ ಶುಕ್ರನ ಹಿಮ್ಮುಖ ಚಲನೆ ಇನ್ನೊಂದು ವಾರದಲ್ಲಿ ಆರಂಭವಾಗಲಿದೆ. ಇದು ಎಲ್ಲಾ ರಾಶಿಯವರ ಜಾತಕದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಆದರೆ ಮೂರು ರಾಶಿಯವರ ಮೇಲೆ ಶುಕ್ರನ ಚಲನೆಯಲ್ಲಿನ ಬದಲಾವಣೆ ದೊಡ್ಡ ಮಟ್ಟದಲ್ಲಿ ಕಾಣಬಹುದು.
ಶುಕ್ರನ ಹಿಮ್ಮುಖ ಚಲನೆಯ ಪರಿಣಾಮವಾಗಿ ಈ ಮೂರು ರಾಶಿಯವರ ವೃತ್ತಿ ಬದುಕು ಎತ್ತರಕ್ಕೆ ಏರಲಿದೆ. ಆರ್ಥಿಕ ವಿಷಯಗಳಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಅಸಾಧ್ಯ ಎನ್ನುವಂಥ ಕೆಲಸಗಳು ಕೂಡಾ ಬಹಳ ಸರಾಗವಾಗಿ ನೆರವೇರಿ ಬಿಡುತ್ತವೆ.
ವೃಷಭ: ಶುಕ್ರನ ಹಿಮ್ಮುಖ ಚಲನೆಯು ವೃಷಭ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ನಿಮ್ಮ ವ್ಯಕ್ತಿತ್ವ ಬೆಳಗುತ್ತದೆ. ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಕಷ್ಟಗಳು ಸರಿದು ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಆದಾಯ ಹೆಚ್ಚಲಿದೆ. ಹಣ ಪಡೆಯಲು ಹೊಸ ಮಾರ್ಗಗಳು ಹುಟ್ಟಿಕೊಳ್ಳುತ್ತವೆ.
ಕರ್ಕಾಟಕ: ಶುಕ್ರವು ಕರ್ಕಾಟಕದಲ್ಲಿಯೇ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಶುಕ್ರನ ಹಿಮ್ಮುಖ ಚಲನೆಯು ಕರ್ಕಾಟಕ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಈ ರಾಶಿಯವರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಕುಟುಂಬದಲ್ಲಿ ಸಂತೋಷ ನೆಮ್ಮದಿ ಹೆಚ್ಚುತ್ತದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ.
ಮಕರ: ಶುಕ್ರನ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ಕೂಡಾ ಬಹಳ ಶುಭ ಫಲಿತಾಂಶಗಳನ್ನು ನೀಡುತ್ತದೆ. ಪ್ರೇಮ ಜೀವನದಲ್ಲಿ ಯಶಸ್ಸು ಕಾಣುವಿರಿ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರಲಿದೆ. ವೃತ್ತಿಜೀವನಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ಇದು ಉತ್ತಮ ಸಮಯ. ವ್ಯಾಪಾರಸ್ಥರು ಪ್ರಗತಿ ಹೊಂದುವರು. ವಿಶೇಷವಾಗಿ ವಿದೇಶಗಳೊಂದಿಗೆ ಸಂಬಂಧ ಹೊಂದಿರುವ ಜನರು ಬಹಳಷ್ಟು ಪ್ರಗತಿಯನ್ನು ಕಾಣುವರು. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)