Gold Price Today: ನೀವೂ ಕೂಡ ಇಂದು ಮಾರುಕಟ್ಟೆಗೆ ಹೋಗಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಕಾದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನೀವೂ ಕೂಡ ಇಂದು ಮಾರುಕಟ್ಟೆಗೆ ಹೋಗಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಕಾದಿದೆ. ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. Goodreturns ವರದಿಯ ಪ್ರಕಾರ, ಇಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 60000 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 55,000 ರೂ. ಇದೆ.
ಸ್ಥಿರತೆ ಕಂಡುಬಂದರೂ ಸಹ, ಮೇ ತಿಂಗಳಿನಿಂದ ಇಲ್ಲಿಯವರೆಗಿನ ಲೆಕ್ಕಾಚಾರವನ್ನು ನೋಡುವುದಾದರೆ ಚಿನ್ನದ ಬೆಲೆಯಲ್ಲಿ ರೂ.2400 ಇಳಿಕೆ ಕಂಡಿದೆ.
ಮೇ 5ರಂದು 22 ಕ್ಯಾರೆಟ್ ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಕಂಡು ರೂ.57,200ರಲ್ಲಿ ವಹಿವಾಟು ನಡೆಸುತ್ತಿತ್ತು. ಆದರೆ ಇದೀಗ 55 ಸಾವಿರಕ್ಕೆ ಇಳಿಕೆ ಕಂಡಿದೆ.
ಮತ್ತೊಂದೆಡೆ 24 ಕ್ಯಾರೆಟ್ ಬಂಗಾರದ ಬೆಲೆಯೂ ಮೇ 5ರಂದು 62,400 ರೂ, ಇತ್ತು. ಇದೀಗ 60 ಸಾವಿರಕ್ಕೆ ಇಳಿಕೆ ಕಂಡಿದೆ.
ಇನ್ನು ಬೆಳ್ಳಿ ಬಗ್ಗೆ ನೋಡುವುದಾದರೆ ಇಂದು ಯಾವುದೇ ದರ ಬದಲಾವಣೆಯಾಗಿಲ್ಲ. ಭಾನುವಾರ ಬೆಳ್ಳಿಯ ಬೆಲೆ 500 ರೂ.ಗಳ ಜಿಗಿತವಿತ್ತು, ಈ ಮೂಲಕ ಪ್ರತಿ ಕೆಜಿಗೆ 81,800 ರೂ.ಗೆ ಏರಿದೆ.
ಇನ್ನು ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್ ಮೂಲಕ ಹಾಲ್ ಮಾರ್ಕ್‌ಗಳನ್ನು ನೀಡಲಾಗುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 99.9 ಗ್ರಾಂ ಶುದ್ಧತೆ, 23 ಕ್ಯಾರೆಟ್ ನಲ್ಲಿ 95.8, 22 ಕ್ಯಾರೆಟ್ ನಲ್ಲಿ 91.6, 21 ಕ್ಯಾರೆಟ್ ನಲ್ಲಿ 87.5 ಮತ್ತು 18 ಕ್ಯಾರೆಟ್ ನಲ್ಲಿ 75.0 ಗ್ರಾಂ ಶುದ್ಧತೆ ಎಂದು ಬರೆಯಲಾಗಿದೆ. ಹೆಚ್ಚಾಗಿ ಚಿನ್ನವನ್ನು 22 ಕ್ಯಾರೆಟ್ ನಲ್ಲಿ ಮಾರಾಟ ಮಾಡಲಾಗುತ್ತದೆ, ಆದರೆ ಕೆಲವರು 18 ಕ್ಯಾರೆಟ್ ಗಳನ್ನು ಸಹ ಬಳಸುತ್ತಾರೆ.