ನೀವು ಯಾವುದೇ ಅಪಾಯವನ್ನು ತೆಗೆದುಕೊಳ್ಳದೆ ಒಂದು ವರ್ಷ ಅಥವಾ ಎರಡು ವರ್ಷಗಳಲ್ಲಿ ಸ್ಥಿರ ಆದಾಯವನ್ನು ಬಯಸುವುದಾದರೆ, ಬ್ಯಾಂಕುಗಳ ಎಫ್‌ಡಿಗಳು ಉತ್ತಮ ಆಯ್ಕೆಯಾಗಿರಬಹುದು.
ನವದೆಹಲಿ : ನೀವು ಯಾವುದೇ ಅಪಾಯವನ್ನು ತೆಗೆದುಕೊಳ್ಳದೆ ಒಂದು ವರ್ಷ ಅಥವಾ ಎರಡು ವರ್ಷಗಳಲ್ಲಿ ಸ್ಥಿರ ಆದಾಯವನ್ನು ಬಯಸುವುದಾದರೆ, ಬ್ಯಾಂಕುಗಳ ಎಫ್‌ಡಿಗಳು ಉತ್ತಮ ಆಯ್ಕೆಯಾಗಿರಬಹುದು. ಸಾರ್ವಜನಿಕ ಮತ್ತು ಖಾಸಗಿ ವಲಯದ ದೊಡ್ಡ ವಾಣಿಜ್ಯ ಬ್ಯಾಂಕುಗಳಾದ ಎಸ್‌ಬಿಐ, ಪಿಎನ್‌ಬಿ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನ 2-ವರ್ಷದ ಎಫ್‌ಡಿಗಳ ಮೇಲೆ ಲಭ್ಯವಿರುವ ವಾರ್ಷಿಕ ಬಡ್ಡಿಯ ಕುರಿತು ಹೇಳುವುದಾದರೆ, ಇದು ಸಾಮಾನ್ಯ ಗ್ರಾಹಕರಿಗೆ 5.10 ಶೇಕಡಾ ಮತ್ತು ಹಿರಿಯ ನಾಗರಿಕರಿಗೆ 5.60 ಶೇಕಡಾ ಬಡ್ಡಿ ನೀಡುತ್ತದೆ. ವೇತನ ಪಡೆಯುವ ಉದ್ಯೋಗಿಗಳಿಗೆ ಇದು ಸುರಕ್ಷಿತ ಆಯ್ಕೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
2 ವರ್ಷದ ಎಫ್‌ಡಿಗಳ ಮೇಲೆ ಎಸ್‌ಬಿಐ ವಾರ್ಷಿಕವಾಗಿ 5.10 ಶೇಕಡಾ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ, ಈ ದರಗಳು 5.60 ಶೇಕಡಾ. ಈ ಬಡ್ಡಿ ದರಗಳು ಜನವರಿ 8, 2021 ರಿಂದ ಅನ್ವಯವಾಗುವಂತೆ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯಿಸುತ್ತವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 2-ವರ್ಷದ FD ಗಳ ಮೇಲೆ ವಾರ್ಷಿಕ ಶೇ .5.00 ಬಡ್ಡಿದರವನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ, ಈ ದರಗಳು 5.50 ಶೇಕಡಾವಾಗಿರುತ್ತದೆ . ಈ ಬಡ್ಡಿದರಗಳು ಆಗಸ್ಟ್ ಒಂದರಿಂದ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ.
HDFC ಬ್ಯಾಂಕ್ 2-ವರ್ಷದ FD ಗಳ ಮೇಲೆ 4.90 ಶೇಕಡಾ ವಾರ್ಷಿಕ ಬಡ್ಡಿಯನ್ನು ಪಾವತಿಸುತ್ತಿದೆ. ಹಿರಿಯ ನಾಗರಿಕರಿಗೆ ಬಡ್ಡಿದರಗಳು 5.40ಶೇಕಡಾವಾಗಿರುತ್ತದೆ. ಈ ಬಡ್ಡಿ ದರಗಳು 21 ಮೇ 2021 ರಿಂದ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ.
ಐಸಿಐಸಿಐ ಬ್ಯಾಂಕ್ 2-ವರ್ಷದ ಎಫ್‌ಡಿಗಳಿಗೆ ವರ್ಷಕ್ಕೆ 5.00 ಶೇಕಡಾ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ, ಈ ಬಡ್ಡಿ ದರವು 5.50 ಶೇಕಡಾವಾಗಿರುತ್ತದೆ. ಈ ದರಗಳು 21 ಅಕ್ಟೋಬರ್ 2020 ರಿಂದ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ.
ನೀವು ಯಾವುದೇ ಬ್ಯಾಂಕಿನಲ್ಲಿ 5 ವರ್ಷಗಳವರೆಗೆ ಎಫ್‌ಡಿ ಮಾಡಿದರೆ, ನೀವು ಸೆಕ್ಷನ್ 80 ಸಿ ಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದು. ಆದಾಗ್ಯೂ, ಎಫ್‌ಡಿಯಿಂದ ಪಡೆದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಇದರಲ್ಲಿ, ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆಯ ಮೇಲೆ ತೆರಿಗೆ ಉಳಿಸಬಹುದು.