ಬೆಂಗಳೂರು : ಜ್ಯೋತಿಷ್ಯದಲ್ಲಿ ಅನೇಕ ರೀತಿಯ ರಾಜ ಯೋಗಗಳ ಬಗ್ಗೆ ಹೇಳಲಾಗಿದೆ. ಗ್ರಹಗಳ ಸಂಚಾರ, ಗ್ರಹಗಳ ಸಂಯೋಗ ಮತ್ತು ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹಲವು ರಾಜಯೋಗಗಳು ರೂಪುಗೊಳ್ಳುತ್ತವೆ. ಈ ರಾಜಯೋಗವು ಬಹಳ ಶುಭ ಫಲವನ್ನು ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮಂಗಳ ಗ್ರಹ ಮಿಥುನ ರಾಶಿಯಲ್ಲಿದ್ದು, ಶನಿಯು ಕುಂಭ ರಾಶಿಯಲ್ಲಿ ಉದಯಿಸಿದ್ದಾನೆ. ಈ ರೀತಿಯಾಗಿ ಶನಿಯ ಉದಯ ಮತ್ತು ಮಂಗಳ ಸಂಕ್ರಮಣ ಒಟ್ಟಿಗೆ ನವಪಂಚಮ ರಾಜಯೋಗವನ್ನು ರೂಪಿಸುತ್ತಿದೆ. ಈ ವೇಳೆ ಶನಿಯಿಂದ ಐದನೇ ಮನೆಯಲ್ಲಿ ಮಂಗಳನಿದ್ದು, ಶನಿಯು ಮಂಗಳನಿಂದ ಒಂಭ ತ್ತನೇ ಮನೆಯಲ್ಲಿದ್ದಾನೆ. ನವಪಂಚಮ ರಾಜಯೋಗವು ಮೂರು ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದೆ.
ಮೇಷ ರಾಶಿ : ನವಪಂಚಮ ರಾಜಯೋಗವು ಮೇಷ ರಾಶಿಯವರಿಗೆ ಅದೃಷ್ಟದಾಯಕವಾಗಿರಲಿದೆ. ಈ ಯೋಗದಿಂದ ಮೇಷ ರಾಶಿಯವರ ಧೈರ್ಯ ಹೆಚ್ಚಾಗುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಬಹಳ ಸುಲಭವಾಗಿ ನೆರವೇರಲಿದೆ. ಹೊಸ ಕೆಲಸ ಆರಂಭಿಸಬೇಕು ಎಂದಿರುವವರಿಗೆ ಇದು ಸೂಕ್ತ ಸಮಯವಾಗಿರಲಿದೆ. ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭವಾಗಲಿದೆ.
ಕನ್ಯಾ ರಾಶಿ : ನವಪಂಚಮ ರಾಜಯೋಗದಿಂದ ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಳಿದೆ. ವೇತನ ಹೆಚ್ಚಾಗುವ ಸಾಧ್ಯತೆ ಇದೆ. ದೊಡ್ಡ ಕಂಪನಿಯಿಂದ ಉನ್ನತ ಹುದ್ದೆಯ ಆಫರ್ ಬರಬಹುದು. ನಿಮ್ಮ ನಿರೀಕ್ಷೆಗೂ ಮೀರಿದ ಜವಾಬ್ದಾರಿ ನಿಮಗೆ ಒದಗಿ ಬರಬಹುದು. ಆದರೆ ಈ ಜವಾಬ್ದಾರಿಯನ್ನು ನೀವು ಸರಾಗವಾಗಿ ನಿಭಾಯಿಸುತ್ತೀರಿ.
ಕುಂಭ ರಾಶಿ : ನವಪಂಚಮ ರಾಜಯೋಗದಿಂದ ಕುಂಭ ರಾಶಿಯವರ ಕೆಲಸದ ಸ್ಥಳದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಅಭಿವೃದ್ದಿಯಾಗಲಿದೆ. ಜೀವನದಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)