ಅಬ್ಬಬ್ಬಾ! ಇಲ್ಲಿ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್, ಪತ್ನಿ ಎಲ್ಲರೂ ಬಾಡಿಗೆಗೆ ಸಿಗ್ತಾರಂತೆ

Girlfriend on Rent: ಈ ದೇಶದಲ್ಲಿ ಜನಸಂಖ್ಯೆ ತುಂಬಾ ಕಡಿಮೆ ಆಗುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ಇದೀಗ 3 ಮಕ್ಕಳನ್ನು ಹೊಂದಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆಯಂತೆ. ಈ ನಡುವೆ ಅಲ್ಲಿ ಹೊಸ ಉದ್ಯಮವೊಂದು ಸಖತ್ ಸದ್ದು ಮಾಡುತ್ತಿದೆ. ಅದುವೇ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್, ಪತ್ನಿ ಬಾಡಿಗೆಗೆ... 

Boyfriend-Girlfriend-Wife on Rent: ಯಾವುದೇ ದೇಶದ ಪ್ರಗತಿಗೆ ಅತಿಯಾದ ಜನಸಂಖ್ಯೆ ಮಾರಕವಾಗುತ್ತದೆ. ಈ ಹಿನ್ನಲೆಯಲ್ಲಿ ವಿಶ್ವದಲ್ಲೇ ಜನಸಂಖ್ಯೆಯಲ್ಲಿ ನಂಬರ್ 1 ಆಗಿದ್ದ ಚೀನಾ, ಒಂದು ಮಗು ನೀತಿಯನ್ನು ಅತ್ಯಂತ ಹುರುಪಿನಿಂದ ಜಾರಿಗೊಳಿಸಿತ್ತು. ಆದರೆ, ಚೀನಾದಲ್ಲಿ ಜನಸಂಖ್ಯೆ ತುಂಬಾ ಕಡಿಮೆ ಆಗುತ್ತಿರುವ ಹಿನ್ನಲೆಯಲ್ಲಿ ಚೀನಾ ಸರ್ಕಾರ ಇದೀಗ 3 ಮಕ್ಕಳನ್ನು ಹೊಂದಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆಯಂತೆ. ಈ ಮಧ್ಯೆ, ಚೀನಾದ ಯುವಕರಲ್ಲಿ ಮದುವೆಯ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿದ್ದು ಅವರ ಪೋಷಕರು ಮಕ್ಕಳಲ್ಲಿ ಮದುವೆಯ ಕ್ರೇಜ್ ಹೆಚ್ಚಿಸಲು ಅವರಿಗೆ ಬ್ಲೈಂಡ್ ಡೇಟ್ ಫಿಕ್ಸ್ ಮಾಡುತ್ತಿದ್ದಾರಂತೆ. ಇದೆಲ್ಲದರೆ ನಡುವೆ ಅಲ್ಲಿ ಹೊಸ ಉದ್ಯಮವೊಂದು ಸಖತ್ ಸದ್ದು ಮಾಡುತ್ತಿದೆ. ಅದುವೇ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್, ಪತ್ನಿ ಬಾಡಿಗೆಗೆ... 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಅನೇಕ ವೆಬ್‌ಸೈಟ್‌ಗಳಲ್ಲಿ ಜನರು ಗರ್ಲ್‌ಫ್ರೆಂಡ್, ಪತ್ನಿಯನ್ನು ಬಾಡಿಗೆಗೆ ಪಡೆಯಲು ನೋಂದಾಯಿಸುಟ್ಟಿದ್ದಾರೆ. ಈ ಬ್ಯುಸಿನೆಸ್ ಇದೀಗ ಕೋಟ್ಯಾಂತರ ರೂಪಾಯಿಗಳ ವ್ಯವಹಾರವನ್ನೂ ನಡೆಸುತ್ತಿದೆ ಎಂದು ಹೇಳಲಾಗಿದೆ. 

2 /6

ಚೀನಾದ ಈ ಹೊಸ ಉದ್ಯಮವನ್ನು ಬಹಿರಂತ ಪಡಿಸಿರುವ ನಾನ್ಜಿಂಗ್ ಎಂಬ ವ್ಯಕ್ತಿ ತನ್ನನ್ನು ವರದಿಗಾರ ಎಂದು ಹೇಳಿಕೊಂಡಿದ್ದು, ಆ ವ್ಯಕ್ತಿಯೂ ಅಂತಹ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದಾನೆ ಎಂಬುದನ್ನು ತಿಳಿಸಿದ್ದಾರೆ. ಮಾತ್ರವಲ್ಲ, ಇಲ್ಲಿ ಗರ್ಲ್‌ಫ್ರೆಂಡ್ ಅಷ್ಟೇ ಅಲ್ಲ ಬಾಯ್‌ಫ್ರೆಂಡ್ ಕೂಡ ಬಾಡಿಗೆಗೆ ಸಿಗ್ತಾರೆ  ಎಂದು ಹೇಳಿಕೊಂಡಿದ್ದಾನೆ.

3 /6

ವರದಿಯ ಪ್ರಕಾರ, ಚೀನಾದ ಪ್ರತಿ ಪ್ರಾಂತ್ಯದಲ್ಲೂ ಸಹ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್, ಪತ್ನಿ ಬಾಡಿಗೆಗೆ ಎಂಬ ಬ್ಯುಸಿನೆಸ್ ಪ್ರವರ್ಧಮಾನಕ್ಕೆ ಬರುತ್ತಿದೆ. ಒಂದರ್ಥದಲ್ಲಿ, ವೆಬ್ ಸೈಟ್ ಮೂಲಕ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್, ಪತ್ನಿಯನ್ನು ಬಾಡಿಗೆಗೆ ಪಡೆಯುವ ಈ ದಂಧೆ ಆತಂಕದ ವಿಷಯವಾಗಿಯೂ ಹೊರಹೊಮ್ಮುತ್ತಿದೆ. 

4 /6

ಇದಲ್ಲದೆ, ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್, ಪತ್ನಿಯನ್ನು ಬಾಡಿಗೆ ಪಡೆಯುವ ಪ್ರವೃತ್ತಿ ಯುವ ಜನತೆಯನ್ನು ಬೇರೆಯದ್ದೇ ರೀತಿಯಲ್ಲಿ ಆಕರ್ಷಿಸುತ್ತಿದೆ. ಕೆಲ ಉದ್ಯೋಗಸ್ಥರು ಕೆಲಸ ತೊರೆದು ಇಂತಹ ಪ್ರವೃತ್ತಿಯಲ್ಲಿ ತೊಡಗಿದ್ದರೆ, ಇನ್ನೂ ಕೆಲವರಿಗೆ ಇದು ಅರೆಕಾಲಿಕ ಉದ್ಯೋಗವಾಗಿ ಮಾರ್ಪಟ್ಟಿದೆ. 

5 /6

ಮತ್ತೊಂದು ಗಂಭೀರವಾದ ವಿಷಯವೆಂದರೆ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಪಡೆಯಲು ಇಲ್ಲಿ ಪ್ರೀತಿಗಿಂತ ಹಣವೇ ಮುಖ್ಯ. ಇಲ್ಲಿ ಯಾವುದೇ ಭಾವನೆಗಳು ಅರ್ಥ ಕಳೆದುಕೊಳ್ಳುತ್ತಿರಬಹುದು ಎಂಬುದು ಕೆಲವರ ಆತಂಕವಾಗಿದೆ. ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೀಚಾಟ್‌ನಲ್ಲಿ, ಹುಡುಗಿಯೊಬ್ಬಳು ತನಗೆ 29 ವರ್ಷ ತನ್ನ ಹೆಸರು ಮುಮು, ತಾನು ಪದವೀಧರೆ ಎಂದು ಪರಿಚಯಿಸಿಕೊಂಡಿದ್ದಾರೆ.  ಗರ್ಲ್‌ಫ್ರೆಂಡ್ ಆಗಿ ಈಕೆಯ ಶುಲ್ಕ 1000 ಯುವಾನ್ (12000 ರೂಪಾಯಿ) ಅಂತೆ. ಮಾತನಾಡುವುದಕ್ಕೆ, ಹೆಚ್ಚುವರಿ ಸಮಯಕ್ಕೆ 6,000ರೂ. ಆದರೆ, ಲಾಂಗ್ ಡ್ರೈವ್‌ಗಳಿಗೆ ಹೋಗಲು ಹೆಚ್ಚುವರಿಯಾಗಿ 4,000 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಈಕೆ ತನ್ನ ಬಿಡುವಿನ ವೇಳೆಯಲ್ಲಷ್ಟೇ ಈ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾಳೆ. 

6 /6

ವಾಸ್ತವವಾಗಿ, ಚೀನಾದ ಯುವ ಜನರಲ್ಲಿ ಮದುವೆ ಬಗೆಗಿನ ಆಸಕ್ತಿ ಕಡಿಮೆಯಾಗುತ್ತಿದೆಯಂತೆ. ಇದರಿಂದ ಅವರು, ಹೆಚ್ಚಿನ ಜವಾಬ್ಧಾರಿಯನ್ನು ತೆಗೆದುಕೊಳ್ಳಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಮದುವೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ, ಹಲವು ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಮತ್ತೊಂದೆಡೆ ಪೋಷಕರು ಮಕ್ಕಳನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಾರೆ. ಪೋಷಕರ ಒತ್ತಡಕ್ಕೆ ಮಣಿದು ಕೆಲವು ಯುವಕರು ಪತ್ನಿಯನ್ನು ಬಾಡಿಗೆಗೆ ಪಡೆದು, ಆ ನಕಲಿ ಪತ್ನಿಯನ್ನೇ ತನ್ನ ಹೆಂಡತಿ ಎಂದು ಕುಟುಂಬಕ್ಕೆ ಪರಿಚಯಿಸುತ್ತಾರೆ. ಅಗತ್ಯವಿದ್ದರೆ, ಅದಕ್ಕಾಗಿ ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಕೂಡ ಪಡೆಯುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.  ಕಾರಣ ಏನೇ ಆಗಿರಲಿ, ಭಾವನೆಗಳ ಆಟಕ್ಕೆ ಸಂಬಂಧಿಸಿದ ಈ ವ್ಯವಹಾರ ಯುವ ಜನರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆಗಳ ಮೌಲ್ಯವನ್ನು ಕಸಿಯುತ್ತಿರುವುದಂತೂ ಸುಳ್ಳಲ್ಲ.