ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಮರಗಳು ಮತ್ತು ಸಸ್ಯಗಳು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ.
ನವದೆಹಲಿ : ಮರಗಳು ಮತ್ತು ಸಸ್ಯಗಳು ಮಾನವ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಅವು ಪರಿಸರವನ್ನು ಪರಿಶುದ್ಧವಾಗಿಡುವುದಲ್ಲದೆ ಧನಾತ್ಮಕ ಪರಿಣಾಮವನ್ನೂ ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಮರಗಳು ಮತ್ತು ಸಸ್ಯಗಳು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ಇದಲ್ಲದೆ, ಇದು ರೋಗ ರುಜಿನಗಳನ್ನು ಕೂಡಾ ದೂರ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವಾಸ್ತು ಪ್ರಕಾರ, ಅಶೋಕ ಸಸ್ಯವು ತುಂಬಾ ಮಂಗಳಕರವಾಗಿದೆ. ಈ ಸಸ್ಯ ದುಃಖವನ್ನು ಕೊನೆಗೊಳಿಸುತ್ತದೆ. ಇದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಸಹ ತರುತ್ತದೆ. ಹೀಗಿರುವಾಗ ಈ ಸಸ್ಯವನ್ನು ಮನೆಯಲ್ಲಿ ನೆಡಬೇಕು.
ಉದ್ಯಾನದಲ್ಲಿ ಅಶೋಕ ಗಿಡವನ್ನು ನೆಡಬಹುದು. ಈ ಸಸ್ಯವು ಮನೆಯ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ. ಇದರೊಂದಿಗೆ, ಮನೆಗೆ ಅಂಟಿ ಕೊಳ್ಳ ಬಹುದಾದ ದುಃಖ ದೂರವಾಗುತ್ತದೆ.
ವ್ಯಾಪಾರದಲ್ಲಿ ಆರ್ಥಿಕ ಪ್ರಗತಿಗೆ ಅಶೋಕ ಮರವು ಸಹಾಯ ಮಾಡುತ್ತದೆ. ಈ ಸಸ್ಯದ ಬೀಜಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ವ್ಯಾಪಾರದ ಸ್ಥಳದಲ್ಲಿ ಇರಿಸಿದರೆ ಪ್ರಯೋಜನಕಾರಿಯಾಗಲಿದೆ ಎನ್ನಲಾಗುತ್ತದೆ.
ನೆಲ್ಲಿಕಾಯಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಸಂತೋಷ ಮತ್ತು ಸಂಪತ್ತು ಹೆಚ್ಚುತ್ತದೆ. ನೆಲ್ಲಿಕಾಯಿ ಗಿಡ ಬೆಳೆದಂತೆ ಮನೆಯಲ್ಲಿ ಸಮೃದ್ಧಿಯಾಗುತ್ತಲೇ ಇರುತ್ತದೆ ಎನ್ನುವುದು ನಂಬಿಕೆ. ಇದಲ್ಲದೆ ವಿಷ್ಣುವಿನ ಜೊತೆಗೆ ಲಕ್ಷ್ಮಿಯ ಅನುಗ್ರಹವೂ ಸಿಗುತ್ತದೆ.
ನೆಲ್ಲಿಕಾಯಿ ಮತ್ತು ಅಶೋಕ ಗಿಡಗಳ ಬುಡದಲ್ಲಿ ಕಸ ಸಂಗ್ರಹಿಸಲು ಬಿಡಬಾರದು. ಅಲ್ಲದೆ, ಈ ಸಸ್ಯಗಳನ್ನು ಒಂದು ರೀತಿಯ ದೇವಾಲಯವೆಂದು ಪರಿಗಣಿಸಬೇಕು. ಈ ಎರಡೂ ಸಸ್ಯಗಳು ಶುಭಫಲವನ್ನು ಹೆಚ್ಚಿಸುತ್ತವೆ.