2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ಧೋನಿ ಈಗಲೂ ವಾರ್ಷಿಕ ಸುಮಾರು 74 ಕೋಟಿ ರೂ ಸಂಪಾದಿಸುತ್ತಾರೆ.
ನವದೆಹಲಿ : ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರಬಹುದು. ಆದರೆ ಇಂದಿಗೂ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿಗೆ ಹಣದ ಜೊತೆಗೆ ಕೀರ್ತಿಗೂ ಕೊರತೆಯಿಲ್ಲ. ಅವರು ಸಚಿನ್ ತೆಂಡೂಲ್ಕರ್ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಸಂಪಾದನೆ ಮಾಡುವ ಕ್ರಿಕೆಟಿಗ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನಂತರವೂ ಧೋನಿ ಇಷ್ಟು ಹಣ ಹೇಗೆ ಗಳಿಸುತ್ತಾರೆ ಎಂಬ ಪ್ರಶ್ನೆ ಉದ್ಬವಿಸಬಹುದು. ಹಾಗಿದ್ದರೆ ಅವರ ಆದಾಯದ ಮೂಲಗಳನ್ನು ನೋಡೋಣ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ಧೋನಿ ಈಗಲೂ ವಾರ್ಷಿಕ ಸುಮಾರು 74 ಕೋಟಿ ರೂ ಸಂಪಾದಿಸುತ್ತಾರೆ. ಧೋನಿ ಐಪಿಎಲ್ ಹೊರತುಪಡಿಸಿ ಹೆಚ್ಚು ಸ್ಪರ್ಧಾತ್ಮಕ ಕ್ರಿಕೆಟ್ ಆಡುವುದಿಲ್ಲ. ಆದರೆ, ಐಪಿಎಲ್ ತಂಡ ಸಿಎಸ್ಕೆ ಮತ್ತು ಅನೇಕ ಬ್ರಾಂಡ್ ಗಳಿಂದ ಸಾಕಷ್ಟು ಹಣವನ್ನು ಪಡೆಯುತ್ತಾರೆ.
ಐಪಿಎಲ್ ಆರಂಭದಿಂದಲೂ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಜೊತೆ ಸಂಬಂಧ ಹೊಂದಿದ್ದಾರೆ. CSK ಧೋನಿಗೆ 15 ಕೋಟಿ ವೇತನ ನೀಡುತ್ತದೆ. ಸಿಎಸ್ಕೆಯ ಯಾವುದೇ ಆಟಗಾರನು ಧೋನಿಗಿಂತ ಹೆಚ್ಚು ವೇತನ ಪಡೆಯುವುದಿಲ್ಲ.
ಡೊಮೇನ್ ವೆಬ್ಸೈಟ್ಗಳಿಂದ ಹಿಡಿದು ವೈವಾಹಿಕ ವೆಬ್ಸೈಟ್ಗಳವರೆಗೆ, ಪ್ರಪಂಚದಾದ್ಯಂತದ ಕಂಪನಿಗಳಿಗೆ ಧೋನಿ ಇನ್ನೂ ಅತ್ಯಂತ ವಿಶ್ವಾಸಾರ್ಹ ಮುಖಗಳಲ್ಲಿ ಒಬ್ಬರು. ದೊಡ್ಡ ಕಂಪನಿಗಳು ತಮ್ಮ ಪ್ರಚಾರಕ್ಕಾಗಿ ಧೋನಿಯನ್ನು ಸಹಿ ಹಾಕಿಸಿಕೊಳ್ಳುತ್ತವೆ.
ಧೋನಿ ರಾಂಚಿಯಲ್ಲಿ ದೊಡ್ಡ ಫಾರ್ಮ್ ಹೌಸ್ ಅನ್ನು ಹೊಂದಿದ್ದಾರೆ. ಇಲ್ಲಿ ಸುಮಾರು 80 ಬೈಕ್ಗಳಿವೆ.ಇದಲ್ಲದೇ, ಈ ಫಾರ್ಮ್ ಹೌಸ್ ನಲ್ಲಿ ಹಲವು ದುಬಾರಿ ಕಾರುಗಳಿವೆ. ಈ ಎಲ್ಲಾ ಕಾರುಗಳು ಮತ್ತು ಬೈಕುಗಳ ಬೆಲೆ ಕೋಟಿಗಳಲ್ಲಿವೆ.
ಗಳಿಕೆಯ ವಿಚಾರದಲ್ಲಿ, ಧೋನಿ ಲೆಜೆಂಡರಿ ಸಚಿನ್ ತೆಂಡೂಲ್ಕರ್ ಹಿಂದೆ ಇದ್ದಾರೆ. ಧೋನಿಯಂತೆ, ಸಚಿನ್ ಕೂಡ ಎಲೆಕ್ಟ್ರಿಕಲ್ ಕಂಪನಿ, ಮ್ಯೂಚುವಲ್ ಫಂಡ್ಗಳು ಮತ್ತು ಇತರ ಹಲವು ಬ್ರಾಂಡ್ಗಳೊಂದಿಗೆ ಸಂಬಂಧ ಹೊಂದಿದ್ದಾರೆ.