ಮುಂಬರುವ IPL 2025 ನಲ್ಲಿ ಕಿಂಗ್‌ ಕೊಹ್ಲಿ ಸಂಭಾವನೆಗಿಂತ ಕಡಿಮೆ ಧೋನಿ ಸಂಬಳ...! ಏಕೆ ಗೊತ್ತೆ..?

IPL 2025 : 43 ವರ್ಷದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ ಮಾಹಿ ಐಪಿಎಲ್ ಸರಣಿಯಲ್ಲಿ ಆಡುವುದನ್ನು ಬಿಟ್ಟಿಲ್ಲ. ಧೋನಿ IPL 2024 ರಲ್ಲಿ ನಾಯಕತ್ವದಿಂದ ಕೆಳಗಿಳಿದರು. CSK ಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಆಡಿದರು. ಇದೀಗ ಮುಂಬರುವ IPL 2025ರಲ್ಲಿ ಕ್ಯಾಪ್ಟನ್‌ ಕೂಲ್‌ ಸಂಭಾವನೆ ವಿಚಾರ ಸದ್ದು ಮಾಡುತ್ತಿದೆ.. 

1 /5

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ 2025 ರಲ್ಲಿ ಆಡಬೇಕು ಎನ್ನುವುದು ಪ್ರತಿಯೊಬ್ಬ ಅಭಿಮಾನಿಯ ಕನಸು. ಆದರೆ ಧೋನಿ ಐಪಿಎಲ್ 2025 ರಲ್ಲಿ ಆಡುತ್ತಾರೋ ಇಲ್ಲವೋ ಎಂಬ ವಿಚಾರ ಇದುವರೆಗು ಸ್ಪಷ್ಟವಾಗಿಲ್ಲ. ಇದರ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ಪರ ಮಹೇಂದ್ರ ಸಿಂಗ್ ಧೋನಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಧೋನಿ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ.   

2 /5

ವರದಿಗಳ ಪ್ರಕಾರ, ಧೋನಿ ಐಪಿಎಲ್ 2025 ರ ಶುಲ್ಕವನ್ನು ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ. ಅದರಂತೆ, ಎಂಎಸ್ ಧೋನಿ ಐಪಿಎಲ್ 2025 ಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಕೇವಲ 6 ಕೋಟಿ ರೂ. ಸಂಭಾವನೆಯಲ್ಲಿ ಆಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಕೊಹ್ಲಿ ಸಂಭಾವನೆಗಿಂತಲೂ ತೀರಾ ಕಡಿಮೆ.. IPL 2024 ರಲ್ಲಿ ವಿರಾಟ್‌ 17 ಕೋಟಿಗೆ ಆರ್‌ಸಿಬಿ ತಂಡ ಸೇರಿದ್ದರು.  

3 /5

ಈ ಮಧ್ಯ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2025 ಕ್ಕೆ ರವೀಂದ್ರ ಜಡೇಜಾ, ರುಧರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ಮದಿಶಾ ಪತ್ರಾನಾ ಅವರನ್ನು ಉಳಿಸಿಕೊಳ್ಳಲು ತಯಾರಿ ನಡೆಸುತ್ತಿದೆ ಎಂದು ಕೆಲವು ವರದಿಗಳು ಬಿತ್ತರಿಸಿವೆ. ಒಂದು ವೇಳೆ ಧೋನಿಯನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಲು ಅವಕಾಶ ನೀಡಿದರೆ, ಅವರು 6 ಕೋಟಿ ಸಂಭಾವನೆಯೊಂದಿಗೆ ಚೆನ್ನೈ ಪರ ಆಡಬಹುದು. ಧೋನಿಯವರನ್ನ ಉಳಿಸಿಕೊಳ್ಳಲು ಅವಕಾಶ ನೀಡದಿದ್ದರೆ, ಚೆನ್ನೈ ತನ್ನ ಯೋಜನೆಗಳನ್ನು ಬದಲಾಯಿಸಬಹುದು ಇಲ್ಲವೆ ಅವರನ್ನು ಮೆಂಟರ್ ಆಗಿ ನೇಮಿಸಿಕೊಳ್ಳಬಹುದು.  

4 /5

ಐಪಿಎಲ್‌ನಲ್ಲಿ ಭಾಗವಹಿಸುವ ಎಲ್ಲಾ 10 ತಂಡಗಳು ನವೆಂಬರ್ 15 ರ ಮೊದಲು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ ಎಂದು ಹೇಳಲಾಗಿದೆ. ಐಪಿಎಲ್‌ನಲ್ಲಿನ ಹಳೆಯ ನಿಯಮಗಳ ಪ್ರಕಾರ, ಮೆಗಾ ಹರಾಜಿನ ಮೊದಲು ಎಲ್ಲಾ ತಂಡಗಳು ಕೇವಲ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಈ ಬಾರಿ ಈ ನಿಯಮಗಳಲ್ಲಿ ಕೆಲವು ಬದಲಾವಣೆಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ.  

5 /5

ಇತ್ತೀಚೆಗೆ ನಡೆದ ಬಿಸಿಸಿಐ-ಐಪಿಎಲ್ ಸಭೆಯಲ್ಲಿ 4 ಆಟಗಾರರ ಬದಲಿಗೆ 5 ಆಟಗಾರರನ್ನು ಉಳಿಸಿಕೊಳ್ಳಲು ಎಲ್ಲಾ ತಂಡಗಳಿಗೆ ಅವಕಾಶ ನೀಡುವಂತೆ ಕೋರಲಾಗಿದೆ ಎನ್ನಲಾಗಿದೆ. ಆದರೆ, ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. 43ರ ಹರೆಯದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರಬಹುದು. ಆದರೆ ಧೋನಿ ಐಪಿಎಲ್ ಸರಣಿಯಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಮಾಹಿ ಮೈದಾನಕ್ಕೀಳಿಯುತ್ತಾರಾ ಇಲ್ಲ ಮೆಂಟರ್‌ ಆಗ್ತಾರಾ ಅಂತ ಕಾಯ್ದು ನೋಡಬೇಕಿದೆ.