30 ವರ್ಷಗಳ ಬಳಿಕ ಶ್ರಾವಣದಲ್ಲಿ ಅಪರೂಪದ ಯೋಗ ! ಶಿವ ಮತ್ತು ಶನಿಯ ದಯೆಯಿಂದ ಈ ರಾಶಿಯವರದ್ದೇ ಮೇಲುಗೈ

ಶನಿಯು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಪ್ರಮುಖ ಮತ್ತು ಶಕ್ತಿಯುತ ಗ್ರಹವಾಗಿದೆ. ಸನಿ ಗ್ರಹವನ್ನು ಶುವನ ಅಂಶ ಎಂದು ಕರೆಯಲಾಗುತ್ತದೆ. ಹಾಗಾಗಿಯೇ ಈತನನ್ನು ಶನೀಶ್ವರ ಎಂದು ಕರೆಯಲಾಗುತ್ತದೆ.

ಬೆಂಗಳೂರು : ಕರ್ನಾಟಕ ಮತ್ತು ದಕ್ಷಿಣದ ರಾಜ್ಯಗಳ ಪಂಚಾಗ ಪ್ರಕಾರ ಶ್ರಾವಣ ಮಾಸವು ಜುಲೈ 18 ರ ಮಂಗಳವಾರ ಪ್ರಾರಂಭವಾಗಿ ಆಗಸ್ಟ್ 16 ರ ಬುಧವಾರದವರೆಗೆ ಇರುತ್ತದೆ.  ಉತ್ತರಭಾರತದಲ್ಲಿ ಜುಲೈ 4 ರಿಂದ ಆರಂಭವಾದ ಶ್ರಾವಣ ಆಗಸ್ಟ್ 31ರವರೆಗೆ ಇರುತ್ತದೆ. ಶ್ರಾವಣದಲ್ಲಿ ಅಂದರೆ ಜುಲೈ 18 ಮಂಗಳವಾರದಿಂದ ಆಗಸ್ಟ್ 16 ರ ಬುಧವಾರದವರೆಗೆ ಅಧಿಕ ಮಾಸ ಇರುತ್ತದೆ. ಹಾಗಾಗಿ ಇದನ್ನು ಅಧಿಕ ಶ್ರವಣ ಮಾಸ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಶಿವ ಮತ್ತು ಶನಿದೇವರ ಅನುಗ್ರಹ ಕೂಡಿ ಬರಲಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಅಪರೂಪದ ಯೋಗ :  ಶ್ರಾವಣ ಮಾಸವನ್ನು ಮಂಗಳಕರ ಮತ್ತು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಈ ಬಾರಿ ಶ್ರಾವಣದಲ್ಲಿ ಅಧಿಕ ದಿನಗಳು ಬರಲಿವೆ. ಹಾಗಾಗಿ ಇದನ್ನು ಅಧಿಕ ಶ್ರಾವಣ ಎನ್ನಲಾಗುವುದು. ಶ್ರಾವಣದಲ್ಲಿ ಅಧಿಕ ದಿನಗಳನ್ನು ಹೊಂದಿರುವ ಘಟನೆ 19 ವರ್ಷಗಳ ನಂತರ ಮರುಕಳಿಸಿದೆ. 

2 /7

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 30 ವರ್ಷಗಳ ನಂತರ ಶನಿಯು ಈ ಮಂಗಳಕರ ಅವಧಿಯಲ್ಲಿ ತನ್ನದೇ ಆದ ಕುಂಭ ರಾಶಿಯಲ್ಲಿರುತ್ತಾನೆ. ಇದರಿಂದಾಗಿ ಈ ಅವಧಿಯಲ್ಲಿ ಶಿವ ಮತ್ತು ಶನಿದೇವರ ವಿಶೇಷ ಕೃಪೆ ಒಟ್ಟಿಗೆ ದೊರೆಯಲಿದೆ. 

3 /7

ಈ ಅಪರೂಪದ ಪದ್ಧತಿಯ ಲಾಭವು ಎಲ್ಲಾ ರಾಶಿಯವರ ಜಾತಕದಲ್ಲಿಯೂ ಕಂಡು ಬರುತ್ತದೆ. ಅದರಲ್ಲಿಯೂ 4 ರಾಶಿಯವರಿಗೆ ಶನಿಯು 59 ದಿನಗಳವರೆಗೆ ವಿಶೇಷವಾಗಿ ಹರಸುತ್ತಾನೆ. 

4 /7

ಮೇಷ: ಮೇಷ ರಾಶಿಯವರಿಗೆ ಈ 59 ದಿನಗಳು ಅದ್ಭುತವಾಗಿರಲಿವೆ. ಅವರುಮಾಡುವ  ಕೆಲಸ ಮತ್ತು ವ್ಯವಹಾರದಲ್ಲಿ ಬಲವಾದ ಯಶಸ್ಸನ್ನು ಪಡೆಯಬಹುದು. ಬಡ್ತಿ ಸಿಕ್ಕಿ ವೇತನ ಹೆಚ್ಚಳವಾಗಲಿದೆ. ಆಗಸ್ಟ್ 31 ರವರೆಗಿನ ಅವಧಿಯು ಗೌರವ ಮತ್ತು ಪ್ರಗತಿಯಿಂದ ತುಂಬಿರುತ್ತದೆ. ಅವಿವಾಹಿತರ ವಿವಾಹ ನಿಶ್ಚಯವಾಗಲಿದೆ. 

5 /7

ಮಿಥುನ: ಈ ಅವಧಿಯು ಮಿಥುನ ರಾಶಿಯವರಿಗೆ ಅನೇಕ ಲಾಭಗಳನ್ನು ತರುತ್ತದೆ. ವೃತ್ತಿಯಲ್ಲಿ ಸುಧಾರಣೆ ಕಂಡುಬರಲಿದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ. ಲಾಭ ಹೆಚ್ಚಾಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಮಕ್ಕಳು ಪ್ರಗತಿ ಹೊಂದುತ್ತಾರೆ. ಅವಿವಾಹಿತರ ವಿವಾಹ ನಿಶ್ಚಯವಾಗಲಿದೆ.  

6 /7

ಸಿಂಹ: ಸಿಂಹ ರಾಶಿಯವರಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ನೀವು ಶನಿ ಮತ್ತು ಶಿವನ ಪರಿಪೂರ್ಣ ಅನುಗ್ರಹವನ್ನು ಪಡೆಯುತ್ತೀರಿ. ಜೀವನದಲ್ಲಿ ಸಂತೋಷಗಳು ಹೆಚ್ಚಾಗುತ್ತವೆ. ಹೊಸ ಉದ್ಯೋಗಗಳನ್ನು ಪ್ರಾರಂಭಿಸಿ. ವೈವಾಹಿಕ ಜೀವನದಲ್ಲಿನ ಒತ್ತಡ ದೂರವಾಗುತ್ತದೆ.  

7 /7

ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಶನಿದೇವನ ಆಶೀರ್ವಾದ ತುಸು ಹೆಚ್ಚೇ ಇರಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೊಸ ಕೆಲಸ ಸಿಗುತ್ತದೆ. ಅಪೇಕ್ಷಿತ ವರ್ಗಾವಣೆ, ಬಡ್ತಿ ಲಭ್ಯ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಬಹುದು.