2 ಮಕ್ಕಳಿದ್ದರೂ ನಟಿ ಜೊತೆ ಅಫೇರ್! 2 ಮದುವೆಯಾದ್ರೂ ಸಿಗದ ನೆಮ್ಮದಿ! ಕಡೆಗೆ ಇಬ್ಬರಿಗೂ ಡಿವೋರ್ಸ್ ನೀಡಿ ಒಬ್ಬಂಟಿಯಾದ ಭಾರತದ ಸ್ಟಾರ್ ಕ್ರಿಕೆಟಿಗ!

Mohammad Azharuddin Love Story: ಟೀಂ ಇಂಡಿಯಾಗೆ ಮತ್ತು ಬಾಲಿವುಡ್’ಗೆ ವಿಶೇಷ ಬಾಂಧವ್ಯವಿದೆ. ಉಭಯ ಕ್ಷೇತ್ರಗಳ ಸೆಲೆಬ್ರಿಟಿಗಳು ಪ್ರೀತಿಸಿ ಮದುವೆಯಾಗೋದು ಹೊಸ ಟ್ರೆಂಡ್ ಏನು ಅಲ್ಲ. ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಟ್ಯಾಗೋರ್ ಅವರಿಂದ ಆರಂಭವಾದ ಕ್ರಿಕೆಟ್ ಮತ್ತು ಬಾಲಿವುಡ್ ನಡುವಣ ಬಾಂಧವ್ಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /9

ನಾವಿಂದು ಈ ವರದಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಜೀವನದ ಕುರಿತಾದ ಕೆಲ ಆಸಕ್ತಿಕರ ವಿಷಯಗಳನ್ನು ನಿಮ್ಮ ಮುಂದಿಡಲಿದ್ದೇವೆ.

2 /9

1985ರಲ್ಲಿ ಜಾಹೀರಾತಿನ ಚಿತ್ರೀಕರಣದ ವೇಳೆ ಮೊಹಮ್ಮದ್ ಅಜರುದ್ದೀನ್, ನಟಿ ಸಂಗೀತಾ ಬಿಜಲಾನಿ ಅವರನ್ನು ಭೇಟಿಯಾದರು. ಅದಾಗಲೇ ಅಜರ್’ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಸಹ ಸಂಗೀತಾ ಮೇಲೆ ಪ್ರೀತಿ ಬೆಳೆದಿತ್ತು.  

3 /9

ಇನ್ನು ಮೊಹಮ್ಮದ್ ಅಜರುದ್ದೀನ್ ಮತ್ತು ಸಂಗೀತಾ ಬಿಜಲಾನಿ ನಡುವಿನ ಸಂಬಂಧ 1990 ರ ದಶಕದಲ್ಲಿ ಬೆಳಕಿಗೆ ಬಂದಿತು. ಸ್ಟೈಲಿಶ್ ಬ್ಯಾಟ್ಸ್‌ಮನ್ ಅಜರುದ್ದೀನ್ ಆ ಸಮಯದಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದರು ಮತ್ತು ಸುಂದರಿ ಸಂಗೀತಾ ಬಿಜಲಾನಿ 1980 ರಲ್ಲಿ ಮಿಸ್ ಇಂಡಿಯಾ ಪಟ್ಟವನ್ನು ಗೆದ್ದಿದ್ದರು.

4 /9

ಇನ್ನು ಮೊಹಮ್ಮದ್ ಅಜರುದ್ದೀನ್ ಅವರು ನೌರೀನ್ ಎಂಬಾಕೆಯನ್ನು ವಿವಾಹವಾಗಿದ್ದರು. ಇಬ್ಬರ ದಾಂಪತ್ಯ ಜೀವನ ತುಂಬಾ ಸುಂದರವಾಗಿ ಸಾಗುತ್ತಿತ್ತು. ಇಬ್ಬರು ಗಂಡು ಮಕ್ಕಳಿದ್ದರು. ಜೂನ್ 1995 ರಲ್ಲಿ, ಖಲೀಜ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅಜರುದ್ದೀನ್ ಅವರು “ನಾನು ವಿವಾಹವಾದ ದಿನ ನನಗೆ ಮರೆಯಲಾಗದ ಕ್ಷಣ” ಎಂದು ಹೇಳಿದ್ದರು. ಆದರೆ ಈ ಸಂದರ್ಶನದ ನಡೆದ ಕೇವಲ ಒಂದು ವರ್ಷದ ನಂತರ, ಅಜರ್ ಮತ್ತು ನೌರೀನ್ ದೂರವಾಗಿದ್ದರು. ಇದಕ್ಕೆ ಕಾರಣ ಸಂಗೀತಾ ಬಿಜಲಾನಿ.

5 /9

ಸಂಗೀತಾ ಬಿಜಲಾನಿ ಅಜರುದ್ದೀನ್ ಜೀವನದಲ್ಲಿ ಬಂದ ನಂತರ, ಮಾಜಿ ಕ್ಯಾಪ್ಟನ್ ಹೈದರಾಬಾದ್‌ನಲ್ಲಿರುವ ಅವರ ಮನೆಗೆ ಹೋಗುವುದನ್ನು ನಿಲ್ಲಿಸಿದ್ದರು. ಸಂಗೀತಾ ಬಂದ ನಂತರ ನೌರೀನ್ ಬಗೆಗಿನ ಅಜರ್’ನ ಧೋರಣೆಯೇ ಬದಲಾಯಿತು.

6 /9

ಅಜರುದ್ದೀನ್ ಮತ್ತು ಸಂಗೀತಾ ಬಿಜಲಾನಿ ಪಾರ್ಟಿಗಳಲ್ಲಿ, ಗೆಟ್ ಟುಗೆದರ್‌’ಗಳಲ್ಲಿ ಮತ್ತು ಭಾರತೀಯ ಕ್ರಿಕೆಟ್ ತಂಡದ ಪ್ರವಾಸಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. 1996 ರ ಇಂಗ್ಲೆಂಡ್ ಪ್ರವಾಸದಲ್ಲಿ ಸಂಗೀತಾ ಅಜರ್ ಜೊತೆಗಿದ್ದರು. ಇದಾದ ಬಳಿಕ ಇಡೀ ಜಗತ್ತಿಗೆ ಎಲ್ಲವೂ ಸ್ಪಷ್ಟವಾಯಿತು.

7 /9

1994 ರಲ್ಲಿ, ಮೊಹಮ್ಮದ್ ಅಜರುದ್ದೀನ್ ಮತ್ತು ಸಂಗೀತಾ ಬಿಜಲಾನಿ ಅವರ ಪ್ರೇಮದ ಬಗ್ಗೆ ಚರ್ಚೆಗಳು ಪ್ರಾರಂಭವಾದವು. ನಂತರ ಅಜರುದ್ದೀನ್ 1996 ರಲ್ಲಿ ನೌರೀನ್‌’ಗೆ ವಿಚ್ಛೇದನ ನೀಡಿದರು. ನೌರೀನ್‌’ನಿಂದ ಬೇರ್ಪಟ್ಟ ನಂತರ, ಸಂಗೀತಾ ಮತ್ತು ಅಜರ್ 1996 ರಲ್ಲಿ ವಿವಾಹವಾದರು.

8 /9

ಅಜರ್‌’ನನ್ನು ಮದುವೆಯಾಗಲು ಸಂಗೀತಾ ತನ್ನ ಧರ್ಮವನ್ನು ಬದಲಾಯಿಸಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ಆಕೆಯ ಹೆಸರನ್ನು ಆಯೇಷಾ ಬೇಗಂ ಎಂದು ಬದಲಾಯಿಸಲಾಯಿತು.

9 /9

ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ. 14 ವರ್ಷಗಳ ದಾಂಪತ್ಯದ ನಂತರ 2010 ರಲ್ಲಿ ಇಬ್ಬರೂ ಬೇರೆಯಾದರು. ಇನ್ನು ಈ ಸಂಬಂಧ ಸಂಬಂಧ ಮುರಿದು ಬೀಳಲು ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಕಾರಣ ಎನ್ನಲಾಗಿದೆ.