Hair Care: ಮೊಟ್ಟೆ ಜೊತೆ 2 ಚಮಚ ಈ ಎಣ್ಣೆಯನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ: ತಕ್ಷಣವೇ ಕೂದಲು ಆಗುತ್ತೆ ಶೈನ್!

Hair Care: ಸುಂದರವಾದ ಹೊಳೆಯುವ ಕೂದಲು ಪಡೆಯಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಕೂದಲಿಗೆ ಅನೇಕ ವಿಧಗಳಲ್ಲಿ ಹಾನಿಯಾಗಲು ಪ್ರಾರಂಭವಾಗುತ್ತದೆ. ಅದಕ್ಕಾಗಿಯೇ ಇಂದು ನಾವು ನಿಮಗಾಗಿ ಹೊಳೆಯುವ ಕೂದಲು ಪಡೆಯಲು ಹೇರ್ ಕೇರ್ ಟಿಪ್ಸ್ ಒಂದನ್ನು ತಂದಿದ್ದೇವೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಸುಂದರವಾದ ಹೊಳೆಯುವ ಕೂದಲು ಪಡೆಯಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಕೂದಲಿಗೆ ಅನೇಕ ವಿಧಗಳಲ್ಲಿ ಹಾನಿಯಾಗಲು ಪ್ರಾರಂಭವಾಗುತ್ತದೆ. ಅದಕ್ಕಾಗಿಯೇ ಇಂದು ನಾವು ನಿಮಗಾಗಿ ಹೊಳೆಯುವ ಕೂದಲು ಪಡೆಯಲು ಹೇರ್ ಕೇರ್ ಟಿಪ್ಸ್ ಒಂದನ್ನು ತಂದಿದ್ದೇವೆ.

2 /4

ಹೊಳೆಯುವ ಕೂದಲಿಗೆ ಬೇಕಾದ ಪ್ಯಾಕ್’ನ್ನು ಮೊಟ್ಟೆ ಮತ್ತು ತೆಂಗಿನ ಎಣ್ಣೆಯ ಸಹಾಯದಿಂದ ತಯಾರಿಸಲಾಗುತ್ತದೆ. ಮೊಟ್ಟೆಯಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್ ಇದ್ದು ಇದು ನಿಮ್ಮ ಕೂದಲಿಗೆ ಆಂತರಿಕ ಪೋಷಣೆಯನ್ನು ನೀಡುತ್ತದೆ. ಮತ್ತೊಂದೆಡೆ, ತೆಂಗಿನ ಎಣ್ಣೆಯು ನಿಮ್ಮ ಕೂದಲನ್ನು ಆಳವಾಗಿ ಪೋಷಿಸುವ ಅನೇಕ ಗುಣಗಳನ್ನು ಹೊಂದಿದೆ. ಈ ಹೇರ್ ಪ್ಯಾಕ್ ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

3 /4

ಈ ಹೇರ್ ಪ್ಯಾಕ್ ಮಾಡಲು ಮೊದಲು 2-3 ಮೊಟ್ಟೆಗಳನ್ನು ತೆಗೆದುಕೊಳ್ಳಿ. ಅದನ್ನು ಒಂದು ಬೌಲ್’ಗೆ ಹಾಕಿ. ಬಳಿಕ 2 ರಿಂದ 3 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ, ಅದನ್ನು 2 ರಿಂದ 3 ನಿಮಿಷಗಳ ಕಾಲ ತೆಗೆದಿಡಿ. ಈಗ ನೈಸರ್ಗಿಕವಾದ ಹೇರ್ ಪ್ಯಾಜ್ ಸಿದ್ಧವಾಗಿದೆ.

4 /4

ಈ ಮಿಶ್ರಣವನ್ನು ನಿಧಾವನವಾಗಿ ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ. ಸುಮಾರು 20 ನಿಮಿಷಗಳ ನಂತರ ನೀರಿನ ಸಹಾಯದಿಂದ ಕೂದಲನ್ನು ತೊಳೆದು ಸ್ವಚ್ಛಗೊಳಿಸಿ. ಮೊಟ್ಟೆಯ ವಾಸನೆಯನ್ನು ಹೋಗಲಾಡಿಸಲು ಶಾಂಪೂ ಮತ್ತು ಕಂಡೀಷನರ್ ಎರಡನ್ನೂ ಬಳಸಬಹುದು. ಉತ್ತಮ ಫಲಿತಾಂಶಕ್ಕಾಗಿ, ಈ ಹೇರ್ ಮಾಸ್ಕ್ ಅನ್ನು ವಾರಕ್ಕೆ 2 ಬಾರಿ ಹಚ್ಚಬಹುದು.