Divita Rai : ʼ2023 ಮಿಸ್‌ ಯನಿವರ್ಸ್‌ʼಗೆ ಇಂಡಿಯಾ ಪ್ರತಿನಿಧಿಸಿ ಸ್ಪರ್ಧೆ ಮಾಡಿದ ʼಕರುನಾಡಿನ ಗೊಂಬೆʼ...!

Miss Universe 2023 Divita Rai : ಮಿಸ್‌ ಯನಿವರ್ಸ್‌ 2023 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕರುನಾಡ ಸುಂದರಿ ದಿವಿತಾ ರೈ ಭಾಗವಹಿಸುತ್ತಿದ್ದಾರೆ. ಪ್ರಸ್ತುತ, ಅವರು ರಾಷ್ಟ್ರೀಯ ಕಾಸ್ಟ್ಯೂಮ್ ರೌಂಡ್‌ನಲ್ಲಿ ಚಿನ್ನದ ಹಕ್ಕಿಯಂತೆ ಕಂಗೊಳಿಸಿದ್ದಾರೆ. ಈ ಕುರಿತು ಫೋಟೋಗಳನ್ನು ತಮ್ಮ ಇನ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಿಸ್‌ ಯನಿವರ್ಸ್‌ 2023 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕರುನಾಡ ಸುಂದರಿ ದಿವಿತಾ ರೈ ಭಾಗವಹಿಸುತ್ತಿದ್ದಾರೆ. ಪ್ರಸ್ತುತ, ಅವರು ರಾಷ್ಟ್ರೀಯ ಕಾಸ್ಟ್ಯೂಮ್ ರೌಂಡ್‌ನಲ್ಲಿ ಚಿನ್ನದ ಹಕ್ಕಿಯಂತೆ ಕಂಗೊಳಿಸಿದ್ದಾರೆ. ಈ ಕುರಿತು ಫೋಟೋಗಳನ್ನು ತಮ್ಮ ಇನ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

1 /8

ಅಮೆರಿಕದ ಲೂಸಿಯಾನದಲ್ಲಿ ನಾಳೆ (14) ವಿಶ್ವ ಸುಂದರಿ 2023ರ ಸ್ಪರ್ಧೆ ನಡೆಯಲಿದೆ. ಮಂಗಳೂರಿನ ಸುಂದರಿ ದಿವಿತಾ ರೈ ಇದರಲ್ಲಿ ಸ್ಪರ್ಧಿಸುತ್ತಿದ್ದಾರೆ.

2 /8

25 ವರ್ಷದ ದಿವಿತಾ ರೈ ಕಳೆದ ವರ್ಷ ಆಗಸ್ಟ್‌ನಲ್ಲಿ ಮಿಸ್ ದಿವಾ ಯೂನಿವರ್ಸ್ 2022 ಆಗಿ ಆಯ್ಕೆಯಾಗಿದ್ದರು.

3 /8

ದಕ್ಷಿಣ ಕನ್ನಡದ ಸುಂದರಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.

4 /8

ದಿವಿತಾ ಗೋಲ್ಡನ್ ಡ್ರೆಸ್ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ. 

5 /8

ಸುಂದರಿ ದಿವಿತಾ ವಿಶಿಷ್ಟ ವೇಷಭೂಷಣಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಕಾಸ್ಟ್ಯೂಮ್‌ ರೌಂಡ್‌ಗಾಗಿ ದಿವಿತಾ ಈ ವಿಶಿಷ್ಟ ಬಟ್ಟೆಯನ್ನು ಧರಿಸಿದ್ದರು.

6 /8

‌ಬಂಗಾರದ ಜಿಂಕೆಯಂತೆ ಕಂಗೊಳಿಸುತ್ತಿರುವ ದಿವಿತಾ ಅವರನ್ನು ನೋಡಿದ ಮೇಲೆ ಮತ್ತೊಮ್ಮೆ ಭಾರತಕ್ಕೆ ಮಿಸ್‌ ಯುನಿವರ್ಸ್‌ ಪಟ್ಟ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

7 /8

ಹರ್ನಾಜ್ ಸಂಧು 2021 ರಲ್ಲಿ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದರು. ಈ ಬಾರಿ ದಿವಿತಾ ರೈ ಬರವಸೆ ಮೂಡಿಸುತ್ತಿದ್ದಾರೆ.

8 /8

ಸುಮಾರು 80 ದೇಶಗಳ ಸುಂದರಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ದಿವಿತಾ ಯಾರಿಗೂ ಕಡಿಮೆಯಿಲ್ಲ, ಬಿಕಿನಿ ರೌಂಡ್‌ನಲ್ಲೂ ಸಹ ದಿವಿತಾ ರೈ ಮಿಂಚಿದ್ದರು.