8ನೇ ವೇತನ ಆಯೋಗದಲ್ಲಿ ವೇತನವನ್ನು ಗಗನಕ್ಕೇರಿಸುವುದೇ ಫಿಟ್‌ಮೆಂಟ್ ಫ್ಯಾಕ್ಟರ್ ! ಇದರ ಲೆಕ್ಕಾಚಾರ ಹೇಗೆ ? ಈ ಬಾರಿ ಎಷ್ಟು ಏರಿಕೆಯಾಗಲಿದೆ ಈ ಅಂಶ

ವೇತನ ಏರಿಕೆಗೆ ಮೂಲ ಕಾರಣವಾಗುವುದು ಫಿಟ್ಮೆಂಟ್ ಫ್ಯಾಕ್ಟರ್. ಅಂದರೆ, ಈ ಫಿಟ್‌ಮೆಂಟ್ ಅಂಶ ಕಡಿಮೆಯಿದ್ದರೆ, ವೇತನ ಕಡಿಮೆಯಾಗುತ್ತದೆ, ಫಿಟ್‌ಮೆಂಟ್ ಅಂಶ ಹೆಚ್ಚಿದ್ದರೆ, ವೇತನವೂ ಹೆಚ್ಚಾಗುತ್ತದೆ.

8th Pay Commission Salary Hike : 8ನೇ ವೇತನ ಆಯೋಗ ಜಾರಿಗೆ ಬಂದರೆ ಮಾಸಿಕ ಆದಾಯ, ಪಿಂಚಣಿ ಮೊತ್ತ ಮತ್ತು ಭತ್ಯೆಗಳನ್ನು ಪರಿಷ್ಕರಿಸಲಾಗುವುದು.ಅದರಲ್ಲೂ 8ನೇ ವೇತನ ಆಯೋಗ ಜಾರಿಗೆ ಬಂದರೆ ಕೇಂದ್ರ ಸರ್ಕಾರಿ ನೌಕರರ ಮಾಸಿಕ ಆದಾಯ ಹಾಗೂ ಪಿಂಚಣಿದಾರರ ಪಿಂಚಣಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

8ನೇ ವೇತನ ಆಯೋಗಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುತ್ತಿದ್ದಂತೆ ಕೇಂದ್ರ ಸರ್ಕಾರಿ ನೌಕರರಲ್ಲಿ ಹರ್ಷ ಮೂಡಿದೆ.ಈ ಮೂಲಕ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆ ಈಡೇರಿದೆ.

2 /8

8ನೇ ವೇತನ ಆಯೋಗ ಜಾರಿಗೆ ಬಂದರೆ ಮಾಸಿಕ ಆದಾಯ, ಪಿಂಚಣಿ ಮೊತ್ತ ಮತ್ತು ಭತ್ಯೆಗಳನ್ನು ಪರಿಷ್ಕರಿಸಲಾಗುವುದು.ಅದರಲ್ಲೂ 8ನೇ ವೇತನ ಆಯೋಗ ಜಾರಿಗೆ ಬಂದರೆ ಕೇಂದ್ರ ಸರ್ಕಾರಿ ನೌಕರರ ಮಾಸಿಕ ಆದಾಯ ಹಾಗೂ ಪಿಂಚಣಿದಾರರ ಪಿಂಚಣಿ ಭಾರೀ  ಪ್ರಮಾಣದಲ್ಲಿ ಏರಿಕೆಯಾಗಲಿದೆ. 

3 /8

ಇಲ್ಲಿ ವೇತನ ಏರಿಕೆಗೆ ಮೂಲ ಕಾರಣವಾಗುವುದು ಫಿಟ್ಮೆಂಟ್ ಫ್ಯಾಕ್ಟರ್. ಅಂದರೆ, ಈ ಫಿಟ್‌ಮೆಂಟ್ ಅಂಶ ಕಡಿಮೆಯಿದ್ದರೆ, ವೇತನ ಕಡಿಮೆಯಾಗುತ್ತದೆ, ಫಿಟ್‌ಮೆಂಟ್ ಅಂಶ ಹೆಚ್ಚಿದ್ದರೆ, ವೇತನವೂ ಹೆಚ್ಚಾಗುತ್ತದೆ.

4 /8

6ನೇ ವೇತನ ಆಯೋಗದ ಅವಧಿಯಲ್ಲಿ ಫಿಟ್‌ಮೆಂಟ್ ಅಂಶ 1.86 ಆಗಿತ್ತು. ಇದರಿಂದ ಸರಕಾರಿ ನೌಕರರ ಮೂಲ ವೇತನ 7 ಸಾವಿರ ರೂ.ಆಗಿತ್ತು. ನಂತರ ಫಿಟ್‌ಮೆಂಟ್ ಅಂಶವು 7 ನೇ ಪೇ ಬ್ಯಾಂಡ್‌ನಲ್ಲಿ 2.57 ಆಗಿದೆ. ಇದರಿಂದ ಮೂಲವೇತನ ರೂ.7 ಸಾವಿರದಿಂದ 18 ಸಾವಿರಕ್ಕೆ ಏರಿಕೆಯಾಗಿದೆ. ಈ ಪ್ರಕಾರ 8 ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವು 2.86 ಅಥವಾ ಅದಕ್ಕಿಂತ ಹೆಚ್ಚೇ ಇರಲಿದೆ.

5 /8

ಒಂದು ವೇಳೆ 8ನೇ ವೇತನ ಆಯೋಗದ ಫಿಟ್‌ಮೆಂಟ್ ಅಂಶವನ್ನು 2.86ಕ್ಕೆ ನಿಗದಿಪಡಿಸಿದರೆ ಮೂಲ ವೇತನ 18 ಸಾವಿರದಿಂದ 51 ಸಾವಿರದ 480ಕ್ಕೆ ಏರಿಕೆಯಾಗಲಿದೆ. ಪಿಂಚಣಿ 9 ಸಾವಿರದಿಂದ 25 ಸಾವಿರದ 740 ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ.   

6 /8

ಇದೇ ವೇಳೆ ಫಿಟ್‌ಮೆಂಟ್ ಅಂಶವನ್ನು 3.68ಕ್ಕೆ ನಿಗದಿಪಡಿಸಬೇಕು ಎಂದು ಸರಕಾರಿ ನೌಕರರ ಸಂಘ ಒತ್ತಾಯಿಸುತ್ತಿದೆ. ಇದು ಜಾರಿಗೆ ಬಂದರೆ  ಆದಾಯ ಮತ್ತಷ್ಟು ಹೆಚ್ಚಾಗಲಿದೆ.

7 /8

ಈ ಫಿಟ್‌ಮೆಂಟ್ ಅಂಶವು ಸರ್ಕಾರಿ ನೌಕರರ ಮಾಸಿಕ ಆದಾಯ ಮತ್ತು ಪಿಂಚಣಿದಾರರ ಪಿಂಚಣಿಯನ್ನು ಹಣದುಬ್ಬರಕ್ಕೆ ಅನುಗುಣವಾಗಿ ಹೊಂದಿಸಲು ಅನುಸರಿಸುವ ಪ್ರಮುಖ ಕಾರ್ಯವಿಧಾನವಾಗಿದೆ. ವಿವಿಧ ಅಂಶಗಳನ್ನು ಆಧರಿಸಿ, ಮೂಲ ಆದಾಯವನ್ನು ಹೆಚ್ಚಿಸಲಾಗುತ್ತದೆ ಮತ್ತು ಹೊಸ ವೇತನದ ಪ್ರಕಾರ ಲೆಕ್ಕಹಾಕಲಾಗುತ್ತದೆ.

8 /8

3.68ಕ್ಕೆ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವಂತೆ ಸರ್ಕಾರಿ ನೌಕರರ ಸಂಘ ಒತ್ತಾಯಿಸುತ್ತಿದೆ.  ಸರ್ಕಾರದ ಆರ್ಥಿಕ ಸ್ಥಿತಿ ಮತ್ತು ಹಣದುಬ್ಬರ ದರವನ್ನು ಗಮನದಲ್ಲಿಟ್ಟುಕೊಂಡು ಫಿಟ್‌ಮೆಂಟ್ ಅಂಶವನ್ನು ಅಂತಿಮಗೊಳಿಸಲಾಗುತ್ತದೆ.