Photo Gallery: ಅಚ್ಚರಿಗಳನ್ನು ಬಚ್ಚಿಟ್ಟುಕೊಂಡ ಮಾವು ಬೇವು

  • Apr 14, 2023, 03:48 AM IST

ವಿಶಿಷ್ಟ ನಟರಾಗಿ ಪ್ರಸಿದ್ಧರಾಗಿ, ತಮ್ಮ ಸ್ಫುಟವಾದ ಕನ್ನಡ ಭಾಷಾ ಪ್ರಯೋಗಗಳ ಮೂಲಕ ಗಮನ ಸೆಳೆದಿರುವವರು ಸುಚೇಂದ್ರ ಪ್ರಸಾದ್. ಅವರು `ಮಾವು ಬೇವು’ ಎಂಬ ಸದಭಿರುಚಿಯ ಸಿನಿಮಾವೊಂದನ್ನು ನಿರ್ದೇಶನ ಮಾಡಿರೋದರ ಬಗ್ಗೆ ಈಗಾಗಲೇ ಅನೇಕ ಬಗೆಗಳಲ್ಲಿ ಸುದ್ದಿಯಾಗಿದೆ. 

1 /6

ಅಂಥಾ ಗೀತ ಗುಚ್ಛವನ್ನು ಸಿನಿಮಾ ರೂಪಕ್ಕೆ ತರಬೇಕೆಂದು ಸಿ ಅಶ್ವತ್ಥ್, ಬಾಲಸುಬ್ರಮಣ್ಯಂ, ದೊಡ್ಡರಂಗೇಗೌಡರು ನಲವತ್ತು ವರ್ಷಗಳಿಂದೀಚೆಗೆ ಬಹುವಾಗಿ ಪ್ರಯತ್ನಿಸಿದ್ದರು. 

2 /6

ರಾಜಶೇಖರ್ ಅವರು ಅತ್ಯಂತ ಆಸ್ಥೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುಚೇಂದ್ರ ಪ್ರಸಾದ್ ಅವರ ಕನಸಿಗೆ ಜೊತೆಯಾಗಿದ್ದಾರೆ. ಒಟ್ಟಾರೆಯಾಗಿ ಮಾವು ಬೇವು ಕನ್ನಡದ ಪ್ರೇಕ್ಷಕರಿಗೆ ಹೊಸಾ ಬಗೆಯ ಅನುಭೂತಿಯನ್ನು ಕೊಡಮಾಡಲಿರುವುದು ನಿಜ. 

3 /6

 ಹಿರಿಯ ನಟ ಶ್ರೀನಿವಾಸ ಮೂರ್ತಿ, ಸುಂದರಶ್ರೀ, ನೀನಾಸಂ ಸಂದೀಪ್, ಚೈತ್ರ ಎಚ್.ಜಿ, ಡ್ಯಾನಿ ಕುಟ್ಟಪ್ಪ, ಸುಪ್ರಿಯಾ ಎಸ್ ರಾವ್, ರಂಜಿತಾ ಎಚ್, ಸಿತಾರಾ, ಚಕ್ರವರ್ತಿ ದಾವಣಗೆರೆ, ರಂಜನ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

4 /6

70-80ರ ದಶಕದಲ್ಲಿ ಹಾಡುಗಳೆಂದರೆ ಹುಚ್ಚೇಳುವ, ಮುದಗೊಳ್ಳುವ ಕಾಲಮಾನವೊಂದಿತ್ತು. ಅಂಥಾ ಘಳಿಗೆಯಲ್ಲಿ ಕನ್ನಡದ ಮೇರು ಕವಿ ದೊಡ್ಡರಂಗೇಗೌಡರು, ಪ್ರಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಮತ್ತು ಜನಪ್ರಿಯ ಸಂಗೀತ ನಿರ್ದೇಶಕರುಗಳಾದ ಅಶ್ವತ್ಥ್-ವೈದಿ ಜೋಡಿಯ ಸಮಾಗಮ ಸಂಭವಿಸಿತ್ತು. 

5 /6

ಅದನ್ನು ತಣಿಸುತ್ತಲೇ, ಅಗಾಧ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಸಬಲ್ಲ ಒಂದಷ್ಟು ವಿಚಾರಗಳೀಗ ಚಿತ್ರತಂಡದ ಕಡೆಯಿಂದ ಹೊರಬಿದ್ದಿವೆ!

6 /6

ಮಾವು ಬೇವು’ ಇದೇ ಏಪ್ರಿಲ್ 21ರಂದು ಬಿಡುಗಡೆಗೊಳ್ಳಲಿದೆ. ಸುಚೇಂದ್ರ ಪ್ರಸಾದ್ ಸಾರಥ್ಯ ವಹಿಸಿದ್ದಾರೆಂದ ಮೇಲೆ ಮಾವು ಬೇವಿನ ಬಗ್ಗೆ ತಾನೇ ತಾನಾಗಿ ಕುತೂಹಲವೊಂದು ಮೂಡಿಕೊಳ್ಳುತ್ತದೆ.