Makar Sankranti 2024: ಎಪ್ಪತ್ತೇಳು ವರ್ಷಗಳ ಮಕರ ಸಂಕ್ರಾಂತಿಯಂದು ಹಲವು ಅದ್ಭುತ ಯೋಗಗಳು, ಈ ಜನರಿಗೆ ಭಾರಿ ಧನಲಾಭ!

Makar Sankranti 2024 Horoscope: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಮಕರ ಸಂಕ್ರಾಂತಿ ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ಈ ಬಾರಿಯ ಮಕರ ಸಂಕ್ರಾಂತಿಯ ದಿನ ಹಲವು ಶುಭಯೋಗಗಳು ರಚನೆಯಾಗುತ್ತಿವೆ. ಇದರಿಂದ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. (Spiritual News In Kannada)
 

ಬೆಂಗಳೂರು: ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವನ್ನು ಕೊಡಲಾಗಿದೆ. ಈ ದಿನ ಸ್ನಾನ ಹಾಗೂ ದಾನಕ್ಕೆ ವಿಶೇಷ ಮಹತ್ವ ಕೊಡಲಾಗಿದೆ. ಈ ದಿನ ಗ್ರಹಗಳ ರಾಜ ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದೆ ಕಾರಣದಿಂದ ಇದನ್ನು ಸೂರ್ಯ ಸಂಕ್ರಾಂತಿ ಎಂದೂ ಕೂಡ ಕರೆಯಲಾಗುತ್ತದೆ. ಈ ಬಾರಿ ಜನವರಿ 15, 2024 ರಂದು ಸೂರ್ಯ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಬಾರಿಯ ಮಕರ ಸಂಕ್ರಾಂತಿ ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ಎಪ್ಪತ್ತೇಳು ವರ್ಷಗಳ ಸುದೀರ್ಘ ಅವಧಿಯ ಬಳಿಕ ಮಕರ ಸಂಕ್ರಾಂತಿಯ ದಿನ ರವಿ ಹಾಗೂ ವರಿಯಾನ್ ಯೋಗಗಳ ಅದ್ಭುತ ಸಂಯೋಜನೆ ನೋಡಲು ಸಿಗಲಿದೆ. ಇದಲ್ಲದೆ ಈ ಬಾರಿ ಮಕರ ಸಂಕ್ರಾಂತಿ ಐದು ವರ್ಷಗಳ ಬಳಿಕ ಸೋಮವಾರದಂದು ಆಚರಿಸಲಾಗುತ್ತಿದೆ. ಮಕರ ಸಂಕ್ರಾಂತಿಯ ದಿನ ಇಂತಹ ಯೋಗ ನಿರ್ಮಾಣದಿಂದ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-Shani Shukra Yog 2024: ಮೂವತ್ತು ವರ್ಷಗಳ ಬಳಿಕ ಶನಿ ಶುಕ್ರರ ಮೈತ್ರಿ, ಧನದಾತನ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ಸುವರ್ಣಕಾಲ ಆರಂಭ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 14, 2024 ರಂದು ರಾತ್ರಿ 2.40 ನಿಮಿಷದಿಂದ ಜನವರಿ 15, 2024ರ ರಾತ್ರಿ 11 ಗಂಟೆ 15 ನಿಮಿಷದ ವರಿಗೆ ವರಿಯಾನ್ ಯೋಗ ರಚನೆಯಾಗಲಿದೆ. ಇದರ ಜೊತೆಗೆ ಜನವರಿ 14, 2024ರ ಬೆಳಗ್ಗೆ 10 ಗಂಟೆ 22 ನಿಮಿಷದಿಂದ  15 ಜನವರಿ 2024ರ ಬೆಳಗ್ಗೆ 7 ಗಂಟೆ 15 ನಿಮಿಷದವರೆಗೆ ರವಿಯೋಗ ಇರಲಿದೆ. ಇದಲ್ಲದೆ ಸಂಜೆ 6 ಗಂಟೆ 27 ನಿಮಿಷದಿಂದ ವಣಿಜ ಕಾರಣ ಕೂಡ ಇರಲಿದೆ. ಈ ದಿನ ಶುಕ್ರ ತನ್ನ ಉಚ್ಚ ರಾಶಿಯಲ್ಲಿ ವಿರಾಜಮಾನನಾಗಿರಲಿದ್ದರೆ, ಶನಿ ತನ್ನ ಮೂಲ ತ್ರಿಕೋನ ರಾಶಿ ಕುಂಭದಲ್ಲಿ ಮತ್ತು ಗುರು ಮೇಷ ರಾಶಿಯಲ್ಲಿ ವಿರಾಜಮಾನನಾಗಿರಲಿದ್ದಾರೆ. 

2 /5

ಮೇಷ ರಾಶಿ: ಈ ಬಾರಿಯ ಮಕರ ಸಂಕ್ರಾಂತಿ ಮೇಷ ರಾಶಿಯ ಜನರಿಗೆ ಅತ್ಯಂತ ವಿಶೇಷವಾಗಿರಲಿದೆ. ಸೂರ್ಯ ನಿಮ್ಮ ಗೋಚರ ಜಾತಕದ ದಶಮ ಭಾವಕ್ಕೆ ಪ್ರವೇಶಿಸುತ್ತಿದ್ದಾನೆ. ಹೀಗಿರುವಾಗ ಈ ರಾಶಿಯ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸಿನ ಜೊತೆಗೆ ಧನಲಾಭ ಸಿಗಲಿದೆ. ವೃತ್ತಿಜೀವನದ ಕುರಿತು ಹೇಳುವುದಾದರೆ ನೌಕರ ವರ್ಗದ ಜನರಿಗೆ ಅವರ ಪರಿಶ್ರಮದ ಸಂಪೂರ್ಣ ಫಲ ಸಿಗಲಿದೆ. ನಿಮ್ಮ ಕೆಲಸವನ್ನು ನೋಡಿ ನಿಮಗೆ ಪದೋನ್ನತಿಯ ಜೊತೆಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ವಿದೇಶದಲ್ಲಿ ನೌಕರಿ ಮಾಡುವ ನಿಮ್ಮ ಕನಸು ಕೂಡ ಈಡೇರುವ ಸಾಧ್ಯತೆ ಇದೆ. ಬಿಸ್ನೆಸ್ ಮಾಡುವವರಿಗೂ ಕೂಡ ಅಪಾರ ಲಾಭದ ಜೊತೆಗೆ ಧನಲಾಭವಾಗಲಿದೆ. ವಿದೇಶದಲ್ಲಿ ನಡೆಯುತ್ತಿರುವ ಬಿಸ್ನೆಸ್ನಿಂದಲೂ ಕೂಡ ನಿಮಗೆ ಲಾಭ ಸಿಗುವ ಪ್ರಬಲ ಯೋಗವಿದೆ. 

3 /5

ಸಿಂಹ ರಾಶಿ: ಸೂರ್ಯನ ಮಕರ ಸಂಕ್ರಮಣ ನಿಮ್ಮ ಪಾಲಿಗೂ ಕೂಡ ವರದಾನ ಸಾಬೀತಾಗಲಿದೆ. ವೃತ್ತಿ ಜೀವನದಲ್ಲಿ ಅಪಾರ ಯಶಸ್ಸಿನ ಜೊತೆಗೆ ಪ್ರಶಂಸೆ ಸಿಗಲಿದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಉನ್ನತ ಶಿಕ್ಷಣ ಪಡೆಯುವ ನಿಮ್ಮ ಆಸೆ ಈಡೇರಲಿದೆ. ವ್ಯಾಪಾರದಲ್ಲಿಯೂ ಕೂಡ ಲಾಭ ನಿಮ್ಮದಾಗಲಿದೆ. ಷೇರುಮಾರುಕಟ್ಟೆಯಿಂದ ಅಪಾರ ಲಾಭ ಉಂಟಾಗುವ ಯೋಗವಿದೆ. ಬಿಸ್ನೆಸ್ ನಲ್ಲಿ ಮಹತ್ವದ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಬಾಳಸಂಗಾತಿಯ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ. 

4 /5

ಮೀನ ರಾಶಿ: ಈ ಬಾರಿಯ ಮಕರ ಸಂಕ್ರಮಣ ನಿಮ್ಮ ಪಾಲಿಗೂ ಕೂಡ ವಿಶೇಷವಾಗಿರಲಿದೆ. ಮಕರ ಸಂಕ್ರಾಂತಿಯ ದಿನ ನಿರ್ಮಾಣಗೊಳ್ಳುತ್ತಿರುವ ಗ್ರಹಗಳ ಶುಭ ಸಮೋಯೋಜನೆಗಳಿಂದ ನಿಮಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲಗಳನ್ನು ನೀಡಲಿದೆ. ಅದ್ಬುತ ವೃತ್ತಿ ಜೀವನದ ಆರಂಭವನ್ನು ನೀವು ನೋಡುವಿರಿ. ಪದೋನ್ನತಿಯ ಪ್ರಬಲ ಯೋಗ ಕೂಡ ರಚನೆಯಾಗುತ್ತಿದೆ. ಬಿಸ್ನೆಸ್ ಕುರಿತು ಹೇಳುವುದಾದರೆ, ಆರ್ಥಿಕವಾಗಿ ನಿಮಗೆ ತುಂಬಾ ಲಾಭದಾಯಕವಾಗಿರಲಿದೆ. ಅರ್ಥಾತ್ ನಿಮಗೆ ಒಳ್ಳೇಯ ವಿತ್ತೀಯ ಲಾಭ ಸಿಗಲಿದೆ. ಹಲವು ಆಸೆ ಆಕಾಂಕ್ಷೆಗಳು ಈಡೇರಲಿವೆ. ಸಂಬಂಧಗಳು ಗಟ್ಟಿಯಾಗಿರಲಿವೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)