ಮಾರ್ಚ್ 11ರಂದು ಮಹಾಶಿವರಾತ್ರಿ ಹಬ್ಬ. ಈ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಶಿವನ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು. ಯಾವ ವಿಧಾನದಲ್ಲಿ ಪೂಜೆ ಸಲ್ಲಿಸಬೇಕು ಎಂದು ತಿಳಿದುಕೊಳ್ಳೋಣ..
ಬೆಂಗಳೂರು : ಶಿವನನ್ನು ಭೋಲೆ ಶಂಕರ ಎಂದು ಕರೆಯುತ್ತಾರೆ. ಹೌದು, ಶಿವ ಪುರಾಣದ ಪ್ರಕಾರ, ಶಿವನು ಭಕ್ತರ ಭಕ್ತಿಯಿಂದ ಬಹಳ ಬೇಗನೇ ಪ್ರಸನ್ನನಾಗುವಂತಹ ದೇವ. ಭಕ್ತರ ಇಷ್ಟಾರ್ಥಗಳನ್ನು ಬಹುಬೇಗನೇ ನೆರವೆರಿಸುತ್ತಾನೆ. ಶಿವನು ತನ್ನ ಭಕ್ತರ ಕಲ್ಯಾಣ ಮಾಡುವಾಗ, ಭಕ್ತಿ ನೋಡುತ್ತಾನೆಯೇ ಹೊರತು, ಆತ ದಾನವನೋ ಮಾನವನೋ ಎನ್ನುವುದನ್ನಲ್ಲ. ಇನ್ನು ಈಶ್ವರನ ಕೃಪೆಗೆ ಪಾತ್ರರಾಗಲು ವಿಶೇಷ ಪೂಜೆಯ ಅಗತ್ಯವಿಲ್ಲ. ಶಿವಲಿಂಗಕ್ಕೆ ನೀರು , ಬಿಲ್ವಪತ್ರೆಯನ್ನು ಅರ್ಪಿಸುವುದರಿಂದಲೂ ಶಿವ ಪ್ರಸನ್ನನಾಗುತ್ತಾನೆ. ಈ ಸಲ ಮಾರ್ಚ್ 11 ರಂದು ಮಹಾಶಿವರಾತ್ರಿಯ (Mahashivaratri) ಹಬ್ಬ. ಹಬ್ಬದ ಸಮಯದಲ್ಲಿ ಪೂಜಾ ವಿಧಿವಿಧಾನ ಹೇಗಿರಬೇಕು ಎಂಬುದರ ಮಾಹಿತಿ ಇಲ್ಲಿದೆ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಬಿಲ್ವಪತ್ರೆ ಶಿವನಿಗೆ ಅತ್ಯಂತ ಪ್ರಿಯವಾದದ್ದು. ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ. ವೈವಾಹಿಕ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಎದುರಾಗಬಹುದಾದ ರೋಗ ರುಜಿನಗಳು ನಿವಾರಣೆಯಾಗುತ್ತದೆ. ಜೀವನದ ಎಲ್ಲಾ ರೀತಿಯ ಸಮಸ್ಯೆಗಳನ್ನು ಇದು ತೊಡೆದುಹಾಕುತ್ತದೆ. ಬಿಲ್ವಪತ್ರೆಯನ್ನು ಮೂರರಿಂದ 11ರತನಕ ಅರ್ಪಿಸಬಹುದು. ಬಿಲ್ವಪತ್ರೆ ಅರ್ಪಿಸುವ ಸಮಯದಲ್ಲಿ ಹರಿದ ಪತ್ರೆಗಳನ್ನು ಯಾವುದೇ ಕಾರಣಕ್ಕೂ ಅರ್ಪಿಸಬಾರದು ಎನ್ನುವುದು ನೆನಪಿರಲಿ..
ಶಿವಪುರಾಣದ ಪ್ರಕಾರ, ಶಿವ ಲಿಂಗವನ್ನು ಶಿವನ ನಿರಾಕಾರ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಹಾಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ ಮಾತ್ರವಲ್ಲ, ಪ್ರತಿದಿನವೂ ಶಿವಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಿದರೆ, ದುರಾದೃಷ್ಟ ಕೂಡಾ ಅದೃಷ್ಟವಾಗಿ ಬದಲಾಗುತ್ತದೆಯಂತೆ. ಧರ್ಮಗ್ರಂಥಗಳ ನಂಬಿಕೆಯ ಪ್ರಕಾರ, ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಿದರೆ ದೈಹಿಕ ಮತ್ತು ಮಾನಸಿಕ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವುದು ನಂಬಿಕೆ. ಇದಲ್ಲದೆ, ಶಿವಲಿಂಗಕ್ಕೆ ಹಾಲಿನಿಂದ ಅಭಿಷೇಕ ಮಾಡಿದರೆ, ಎಲ್ಲಾ ಆಸೆಗಳನ್ನು ಈಡೇರುತ್ತದೆಯಂತೆ.
ಶಿವ ಧಾತುರವನ್ನು ಬಹಳ ಇಷ್ಟಪಡುತ್ತಾನೆ. ಆದ್ದರಿಂದ ಮಹಾಶಿವರಾತ್ರಿಯ ದಿನದಂದು, ಮನಸ್ಸು ಮತ್ತು ಆಲೋಚನೆಗಳ ಕಹಿ ತೆಗೆದುಕೊಳ್ಳಲು ಮತ್ತು ಶಿವಲಿಂಗದ ಮೇಲೆ ಧಾತುರವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದಲೂ ಶಿವನು ಸಂತೋಷಗೊಳ್ಳುತ್ತಾನೆ. .
ಕೇವಲ 4 ಕಾಳು ಅಕ್ಕಿಯನ್ನು ಅರ್ಪಿಸುವುದರಿಂದಲೂ ಶಿವನು ಸಂತಸಗೊಂಡು ಭಕ್ತನಿಗೆ ಅಪಾರ ಸಂತೋಷವನ್ನು ಕರುಣಿಸುತ್ತಾನೆ ಎಂದು ನಂಬಲಾಗಿದೆ. ಸ್ವಚ್ಚ ಮತ್ತು ಮುರಿಯದೇ ಇರುವಂಥಹ ಅಂದರೆ ಇಡೀ ಅಕ್ಕಿ ಕಾಳನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಶಿವ ಪುರಾಣದ ಪ್ರಕಾರ, ಶಿವನು ಶಿವಲಿಂಗಕ್ಕೆ ಅಕ್ಕಿಯನ್ನು ಅರ್ಪಿಸುವುದರ ಮೂಲಕ ಶಿವನನ್ನು ಸಂತೋಷಪಡಿಸಬಹುದು. ಹೀಗೆ ಮಾಡುವುದರಿಂದ ಈಶ್ವರನು ಭಕ್ತರಿಗೆ ಸಂಪತ್ತು, ಗೌರವವನ್ನು ಕರುಣಿಸುತ್ತಾನೆ.
ಮಹಾಶಿವರಾತ್ರಿಯಂದು, ಭೋಲೆಶಂಕರನನ್ನು ಮೆಚ್ಚಿಸಲು ಮತ್ತು ಅವರ ಅನುಗ್ರಹವನ್ನು ಪಡೆಯಲು ಈ ಮಂತ್ರಗಳನ್ನು ಪಠಿಸಬಹುದು. ಮಂತ್ರವನ್ನು ಪಠಿಸುವಾಗ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತಿರಬೇಕು.. 1 ಓಂ ನಮಃ ಶಿವಾಯ. 2 ನಮೋ ನೀಲಕಂಠಯಾಃ. 3 ಓಂ ಪಾರ್ವತಿಪತಯೇ ನಮಃ 4 ಓಂ ಹ್ರೀಂ ಹ್ರೂಂ ನಮಃ ಶಿವಾಯ 5 ಓಂ ನಮೋ ಭಗವತೇ ದಕ್ಷಿಣಮೂರ್ತಯೆ ಮಹ್ಯಾಮ್ ಮೇಧಾ ಪ್ರಾಯ್ಚಾ ಸ್ವಾಹಾ.