Lucky Zodiac Signs: ಜುಲೈ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ..!

Lucky Zodiac Signs in July: ಮಕರ ರಾಶಿಯವರಿಗೆ ಶನೀಶ್ವರನ ಆಶೀರ್ವಾದ ಸಿಗಲಿದೆ. ಜುಲೈ ತಿಂಗಳು ಮಕರ ರಾಶಿಯವರಿಗೆ ಸೌಕರ್ಯ ಮತ್ತು ಐಷಾರಾಮಿಗಳಿಂದ ತುಂಬಿರುತ್ತದೆ. ಈ ತಿಂಗಳು ನೀವು ಸಂತೋಷದ ಜೀವನವನ್ನು ನಡೆಸುತ್ತೀರಿ. ನಿಮ್ಮ ಮನೆಯಲ್ಲಿ ಸಂತೋಷ ಹೆಚ್ಚುತ್ತದೆ ಮತ್ತು ಆದಾಯ ಹೆಚ್ಚಾಗುವ ಸಾಧ್ಯತೆಯಿದೆ.

Lucky Zodiac Signs in July: ಜೂನ್ ತಿಂಗಳು ಮುಗಿದು ಜುಲೈ ತಿಂಗಳು ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇವೆ. ಈ ಹಂತದಲ್ಲಿ ಅನೇಕ ಗ್ರಹಗತಿಗಳು ಬದಲಾಗುತ್ತವೆ. ಜುಲೈ ತಿಂಗಳು ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನದ ವಿಷಯದಲ್ಲಿ ಬಹಳ ವಿಶೇಷವಾಗಿರುತ್ತದೆ. ಜುಲೈ ತಿಂಗಳಲ್ಲಿ ಕೆಲ ರಾಶಿಯ ಜನರು ಆರ್ಥಿಕ, ವ್ಯಾಪಾರ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಲಾಭವನ್ನು ಪಡೆಯುತ್ತಾರೆಂದು ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜುಲೈನಲ್ಲಿ ಅನೇಕ ಗ್ರಹಗಳು ರಾಶಿಗಳನ್ನು ಬದಲಾಯಿಸಲಿವೆ. ಶುಕ್ರನು ಕರ್ಕ ರಾಶಿಯನ್ನು ಪ್ರವೇಶಿಸಲಿದ್ದು, ಗ್ರಹಗಳ ರಾಜ ಸೂರ್ಯನು ಕರ್ಕಾಟಕದಲ್ಲಿ ಸಾಗಲಿದ್ದಾನೆ. ಮಂಗಳವು ಮೇಷ ರಾಶಿಯಲ್ಲಿದ್ದು, ದೇವರ ಅಧಿಪತಿ ಎಂದು ಪರಿಗಣಿಸಲ್ಪಟ್ಟ ಗುರುವು ವೃಷಭ ರಾಶಿಯಲ್ಲಿ ವಿಹರಿಸುತ್ತಿದ್ದಾನೆ. ಕರ್ಮಕ್ಕೆ ಅನುಗುಣವಾಗಿ ಫಲಿತಾಂಶ ನೀಡುವ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಹಂತದಲ್ಲಿ ಸಂಚರಿಸಲಿದ್ದಾನೆ. ಗ್ರಹಗಳ ಅಧಿಪತಿ ಬುಧ ಸಹ ಕರ್ಕಾಟಕದಲ್ಲಿ ತನ್ನ ಸಂಚಾರವನ್ನು ಮಾಡಲಿದ್ದಾನೆ. ಹಲವು ಗ್ರಹಗಳ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ತಿಳಿದುಕೊಳ್ಳಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಜುಲೈ ತಿಂಗಳು ವೃಷಭ ರಾಶಿಯವರಿಗೆ ವಿಶೇಷವಾಗಿರುತ್ತದೆ. ಈ ರಾಶಿಯವರು ಈ ಅವಧಿಯಲ್ಲಿ ಆರ್ಥಿಕ ಲಾಭಕ್ಕಾಗಿ ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಸಿಹಿಸುದ್ದಿ ಸಿಗಲಿದೆ. ಉದ್ಯೋಗಸ್ಥರು ಹೊಸ ಉದ್ಯೋಗಕ್ಕಾಗಿ ಉತ್ತಮ ಕೊಡುಗೆ ಪಡೆಯಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು, ನೀವು ಹಿಂದೆ ಮಾಡಿದ ಹೂಡಿಕೆಯಿಂದ ಉತ್ತಮ ಲಾಭ ಪಡೆಯುತ್ತೀರಿ. ಒಟ್ಟಾರೆ ಜುಲೈ ತಿಂಗಳು ನಿಮಗೆ ತುಂಬಾ ಶುಭಕರವಾಗಿರುತ್ತದೆ.

2 /5

ಕರ್ಕಾಟಕ ರಾಶಿಯವರು ಯಾವ ಕನಸು ಕಂಡರು ಸಹ ಜುಲೈ ತಿಂಗಳಲ್ಲಿ ನನಸಾಗುತ್ತದೆ. ಈ ಅವಧಿಯಲ್ಲಿ ಹೊಸ ಉದ್ಯೋಗಗಳು ಸಿಗುವ ಸಾಧ್ಯತೆಯಿದೆ. ನಿಮ್ಮ ಆತ್ಮಸ್ಥೈರ್ಯ ಹೆಚ್ಚಲಿದ್ದು, ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಬೆಂಬಲ ಸಿಗಲಿದೆ. ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ & ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ.

3 /5

ಕನ್ಯಾ ರಾಶಿಯ ಜನರು ಜುಲೈ ತಿಂಗಳಲ್ಲಿ ತಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಪಡೆಯುತ್ತಾರೆ. ಈ ಸಮಯದಲ್ಲಿ ನಿಮಗೆ ಅದೃಷ್ಟವು ದೊರೆಯಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಕೆಲವು ಕಷ್ಟಕರ ಕೆಲಸಗಳಲ್ಲಿ ಯಶಸ್ವಿಯಾಗಲು ನಿಮಗೆ ಅದೃಷ್ಟ ಸಹಾಯ ಮಾಡುತ್ತದೆ. ನ್ಯಾಯಾಲಯದ ಪ್ರಕರಣಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.

4 /5

ತುಲಾ ರಾಶಿಯವರಿಗೆ ಜುಲೈ ತಿಂಗಳು ಮಂಗಳಕರವಾಗಿರುತ್ತದೆ. ಈ ಸಮಯವು ಈ ರಾಶಿಯವರಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಕೆಲಸದಲ್ಲಿ ನಿಮಗೆ ಬಡ್ತಿ ಸಿಗಲಿದ್ದು, ವ್ಯಾಪಾರಿಗಳಿಗೆ ಈ ಅವಧಿ ಲಾಭದಾಯಕವಾಗಿರುತ್ತದೆ. ನಿಮ್ಮ ಕೆಲವು ಕನಸುಗಳು ನನಸಾಗುತ್ತವೆ. ಹಣಕಾಸಿನ ಪರಿಸ್ಥಿತಿಯಲ್ಲಿ ತೀವ್ರ ಬದಲಾವಣೆ ಸಾಧ್ಯತೆಯಿದೆ.

5 /5

ಮಕರ ರಾಶಿಯವರಿಗೆ ಶನೀಶ್ವರನ ಆಶೀರ್ವಾದ ಸಿಗಲಿದೆ. ಜುಲೈ ತಿಂಗಳು ಮಕರ ರಾಶಿಯವರಿಗೆ ಸೌಕರ್ಯ ಮತ್ತು ಐಷಾರಾಮಿಗಳಿಂದ ತುಂಬಿರುತ್ತದೆ. ಈ ತಿಂಗಳು ನೀವು ಸಂತೋಷದ ಜೀವನವನ್ನು ನಡೆಸುತ್ತೀರಿ. ನಿಮ್ಮ ಮನೆಯಲ್ಲಿ ಸಂತೋಷ ಹೆಚ್ಚುತ್ತದೆ ಮತ್ತು ಆದಾಯ ಹೆಚ್ಚಾಗುವ ಸಾಧ್ಯತೆಯಿದೆ.