ಬೆಂಗಳೂರು : ಫಾಲ್ಗುಣ ಮಾಸವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮಹಾಶಿವರಾತ್ರಿ ಮತ್ತು ಹೋಳಿ ಮುಂತಾದ ಪ್ರಮುಖ ಹಬ್ಬಗಳು ಈ ಮಾಸದಲ್ಲಿಯೇ ಬರುತ್ತವೆ. ಇದಲ್ಲದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ, ಶುಕ್ರ ಮತ್ತು ಸೂರ್ಯ ಕೂಡ ಫಾಲ್ಗುಣ ಮಾಸದಲ್ಲಿ ಸಂಕ್ರಮಿಸುತ್ತಿದ್ದಾರೆ. ಈ ಗ್ರಹಗಳ ರಾಶಿ ಬದಲಾವಣೆಯು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಫಾಲ್ಗುಣ ಮಾಸದಲ್ಲಿ ಈ ಗ್ರಹಗಳ ಸಂಕ್ರಮಣವು ಕೆಲವು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿ : ಫಾಲ್ಗುಣ ಮಾಸದಲ್ಲಿ ಸಂಭವಿಸುವ ಗ್ರಹಗಳ ಸಂಕ್ರಮಣವು ಮೇಷ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಸಹಕಾರವಿರುತ್ತದೆ. ಉದ್ಯೋಗದಲ್ಲಿ ಪ್ರಗತಿ ಸಿಗಲಿದೆ. ಆದಾಯ ಹೆಚ್ಚಲಿದೆ. ಸಂಪಟ್ಟಿನಲ್ಲಿ ಹೆಚ್ಚಳವಾಗಲಿದೆ. ಏನೇ ಕೆಲಸ ಮಾಡುವುದಿದ್ದರೂ ಸ್ನೇಹಿತರ ನೆರವು ದೊರೆಯಲಿದೆ.
ಮಿಥುನ ರಾಶಿ : ಆತ್ಮ ವಿಶ್ವಾಸ ಬೆಳೆಯುತ್ತದೆ. ಕುಟುಂಬದಲ್ಲಿ ಯಾವುದೇ ಶುಭ, ಧಾರ್ಮಿಕ ಕಾರ್ಯಗಳು ನೆರವೇರಬಹುದು. ಯಾವ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಇದು ಉತ್ತಮ ಸಮಯ. ಆದರೂ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಸಿಂಹ ರಾಶಿ : ಆಸ್ತಿಯಿಂದ ಲಾಭ ಇರುತ್ತದೆ. ಈ ತಿಂಗಳ ಗ್ರಹಗಳ ಸಂಚಾರದಿಂದ ಆದಾಯ ಹೆಚ್ಚಾಗುತ್ತದೆ. ತಾಯಿಯಾ ಕಡೆಯಿಂದ ಲಾಭವಾಗುವುದು. ಸೃಜನಾತ್ಮಕ ಕ್ಷೇತ್ರದ ಜನರಿಗೆ ಲಾಭವಾಗಲಿದೆ. ಉದ್ಯೋಗದಲ್ಲಿ ಬದಲಾವಣೆಯಾಗಬಹುದು. ಹೊಸ ಉದ್ಯೋಗ ಸಿಗಬಹುದು. ಕುಟುಂಬದಲ್ಲಿ ಸಂತೋಷ ಇರುತ್ತದೆ. ಆದಾಯ ಹೆಚ್ಚಲಿದೆ. ವಾಹನ ಖರೀದಿಯ ಯೋಗ ಕೂಡಿ ಬರಲಿದೆ.
ಧನು ರಾಶಿ : ಈ ತಿಂಗಳು ಧನು ರಾಶಿಯವರ ಆತ್ಮವಿಶ್ವಾಸ ಹೆಚ್ಚಲಿದೆ. ಕೆಲಸದಲ್ಲಿ ಉತ್ಸಾಹ ಹೆಚ್ಚಾಗಿರುತ್ತದೆ. ಉದ್ಯೋಗಕ್ಕೆ ಒಳ್ಳೆಯ ಸಮಯ ಬರಲಿದೆ. ಉದ್ಯೋಗದಲ್ಲಿ ಕೆಲಸದ ಹೊರೆ ಹೆಚ್ಚಾಗಲಿದೆ. ಆದಾಯ ಹೆಚ್ಚಲಿದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನ ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)