Love Hormone: ಈ 5 ಆಹಾರ-ಪಾನೀಯಗಳ ಸೇವನೆಯಿಂದ ಹೆಚ್ಚಾಗುತ್ತದೆ ಲವ್ ಹಾರ್ಮೋನ್

Foods For Oxytocin Hormone: ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಅನ್ನು 'ಪ್ರೀತಿಯ ಹಾರ್ಮೋನ್' ಎಂದೂ ಕರೆಯುತ್ತಾರೆ, ಏಕೆಂದರೆ ದೇಹದಲ್ಲಿ ಅದರ ಉಪಸ್ಥಿತಿಯಿಂದಾಗಿ, ಪ್ರೀತಿ, ದೈಹಿಕ ಸಂಬಂಧದ ಬಯಕೆ ನಮ್ಮಲ್ಲಿ ಹಾಗೇ ಉಳಿಯುತ್ತದೆ ಎನ್ನಲಾಗುತ್ತದೆ. 

Foods For Oxytocin Hormone: ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಅನ್ನು 'ಪ್ರೀತಿಯ ಹಾರ್ಮೋನ್' ಎಂದೂ ಕರೆಯುತ್ತಾರೆ, ಏಕೆಂದರೆ ದೇಹದಲ್ಲಿ ಅದರ ಉಪಸ್ಥಿತಿಯಿಂದಾಗಿ, ಪ್ರೀತಿ, ದೈಹಿಕ ಸಂಬಂಧದ ಬಯಕೆ ನಮ್ಮಲ್ಲಿ ಹಾಗೇ ಉಳಿಯುತ್ತದೆ ಎನ್ನಲಾಗುತ್ತದೆ. ಪ್ರೀತಿಯ ಭಾವನೆ ಸ್ವಲ್ಪ ಹೆಚ್ಚಾಗಬೇಕೆಂದು ನೀವು ಬಯಸುತ್ತಿದ್ದರೆ, ಇದಕ್ಕಾಗಿ ನೀವು ಕೆಲವು ವಿಶೇಷ ಕೆಲ ಆಹಾರ-ಪಾನೀಯಗಳನ್ನು ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಬೇಕು. ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಆಹಾರ ತಜ್ಞ ಡಾ. ಆಯುಷಿ ಯಾದವ್ ಅವರು ಆಕ್ಸಿಟೋಸಿನ್ ಅನ್ನು ಹೆಚ್ಚಿಸಲು ಕೆಲಸ ಮಾಡುವ ಕೆಲ ಆಹಾರಗಳ ಕುರಿತು ಮಾಹಿತಿಯನ್ನು ನೀಡಿದ್ದಾರೆ.

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ಓದಿ-Heart Attack: ಈ ಒಂದೇ ಒಂದು ಟೆಸ್ಟ್ ನಿಂದ ಹೃದ್ರೋಗಗಳನ್ನು ಮೊದಲೇ ಪತ್ತೆಹಚ್ಚಬಹುದು

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಡಾರ್ಕ್ ಚಾಕ್ಲೆಟ್ - ಈ ಆಹಾರ ಪದಾರ್ಥದ ಹೆಸರು ಕೇಳುತ್ತಿದ್ದಂತೆಯೇ ಬಾಯಿಯಲ್ಲಿ ನೀರೂರುತ್ತದೆ. ಆದರೆ, ಇದನ್ನೂ ಸೇವಿಸುವುದರಿಂದ ಮೂಡ್ ತುಂಬಾ ಉತ್ತಮವಾಗಿರುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಇದರಿನ ಮೂಡ್ ಉತ್ತಮವಾಗಿ ಮನಸ್ಸಿನಲ್ಲಿ ಲವ್ ಮಾಡುವ ಭಾವನೆ ಹೆಚ್ಚಾಗುತ್ತದೆ. 

2 /5

2. ಬ್ರೋಕೊಲಿ - ಹಸಿರು ತರಕಾರಿಗಳಲ್ಲಿ ಬ್ರೋಕೊಲಿಯನ್ನು ಆರೋಗ್ಯಕ್ಕೆ ಅತ್ಯಂತ ಲಾಭಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಹಲವು ವಿಟಮಿನ್ ಗಳ ಆಗರವಾಗಿದೆ. ಇದನ್ನು ಸೇವಿಸುವುದರಿಂದ ಶರೀರಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ ಮತ್ತು ಆಕ್ಸಿಟೋಶಿನ್ ಹಾರ್ಮೋನ್ ಕೂಡ ಹೆಚ್ಚು ಸ್ರವಿಕೆಯಾಗುತ್ತದೆ. 

3 /5

3. ಕಾಫಿ: ಕಾಫಿ ಟೇಬಲ್ ಮೇಲೆ ಒಟ್ಟಿಗೆ ಕುಳಿತುಕೊಳ್ಳುವುದರಿಂದಲೂ ಕೂಡ ಮೂಡ್ ಬದಲಾಗುತ್ತದೆ ಎನ್ನಲಾಗುತ್ತದೆ. ಇದೆ ಕಾರಣದಿಂದ ಲವ್ ಬರ್ಡ್ಸ್ ಯಾವಾಗಲು ಕಾಫಿ ಶಾಪ್ ನಲ್ಲಿ  ಕಾಣಿಸಿಕೊಳ್ಳುತ್ತಾರೆ. ಈ ಪನೀಯದಲ್ಲಿರುವ ಕ್ಯಾಫಿನ್ ಆಕ್ಸಿಟೋಸಿನ್ ನಮ್ಮ ದೇಹದೊಳಗೆ ನ್ಯೂರಾನ್ಸ್ ಅನ್ನು ಎಕ್ಸೈಟ್ ಮಾಡುತ್ತದೆ ಮತ್ತು ಇದರಿಂದ ನಮ್ಮ ಭಾವನೆಗಳಿಗೆ ಉತ್ತೇಜನ ಸಿಗುತ್ತದೆ ಹಾಗೂ ಜೋಡಿಗಳು ತಮ್ಮ ಮನದಾಳದ ಮಾತುಗಳನ್ನಾಡಲು ಆರಂಭಿಸುತ್ತಾರೆ ಎನ್ನಲಾಗಿದೆ. 

4 /5

4. ಚಿಯಾ ಬೀಜಗಳು - ಈ ಬೀಜಗಳ ಸೇವನೆಯಿಂದ ಭಾವನೆಗಳಿಗೆ ಉತ್ತೇಜನ ಸಿಗುತ್ತದೆ ಹಾಗೂ ನೀವು ನಿಮ್ಮ ಸಂಗಾತಿಯ ಜೋತೆಗೆ ಬಹಿರಂಗವಾಗಿ ಮಾತನಾಡಲು ಆರಭಿಸುವಿರಿ ಎನ್ನಲಾಗುತ್ತದೆ. ಹಲವು ವಿಧಗಳಲ್ಲಿ ಅವುಗಳನ್ನು ನೀವು ಸೇವಿಸಬಹುದು. ನೀರಿನಲ್ಲಿ ನೆನೆಹಾಕಿಯೂ ಕೂಡ ನೀವು ಚೀಯಾ ಬೀಜಗಳನ್ನು ಸೇವಿಸಬಹುದು. 

5 /5

5. ಕಿತ್ತಳೆ ಹಣ್ಣಿನ ರಸ - ಈ ಹಣ್ಣಿನಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್ ಸಿ ಕಂಡುಬರುತ್ತದೆ ಹಾಗೂ ಈ ಹಣ್ಣಿನ ಆಂಟಿಆಕ್ಸಿಡೆಂಟ್ ಗುಣಧರ್ಮಗಳು ನಮ್ಮ ಶರೀರದಲ್ಲಿ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ಮೈಂಡ್ ಫುಲ್ ಆದ ಭಾವನೆ ಉಂಟಾಗುತ್ತದೆ ಹಾಗೂ ಪ್ರೀತಿ ಮಾಡುವ ಭಾವನೆ ಹೆಚ್ಚಾಗುತ್ತದೆ.