ಒಂಟಿಯಾಗಿರುವುದು ಅಪರಾಧವಲ್ಲ ಎಂದು ಕಂಪನಿ ಸ್ಪಷ್ಟವಾಗಿ ಹೇಳಿದೆ. ಜನರು ಡೇಟಿಂಗ್ ಅಪ್ಲಿಕೇಶನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರೆ, ನೈಜ ಜಗತ್ತಿನಿಂದ ದೂರ ಉಳಿಯುತ್ತಾರೆ. ಈ ಕಾರಣದಿಂದಲೇ ಈ ಆಪ್ ವಾರದಲ್ಲಿ ಒಂದು ದಿನ ಮಾತ್ರ ಕಾರ್ಯನಿರ್ವಹಿಸುತ್ತದೆ.
ಲಂಡನ್: ಈಗ ಅನುಪಯುಕ್ತ ಡೇಟಿಂಗ್ ಅಪ್ಲಿಕೇಶನ್‌ಗಳನ್ನು (Dating app) ಮರೆತುಬಿಡಿ. ಏಕೆಂದರೆ ಈ ಅಪ್ಲಿಕೇಶನ್‌ಗಳಲ್ಲಿ ನಿರಂತರವಾಗಿ ಸಮಯ ಕಳೆಯುತ್ತಿದ್ದರೂ, ನೀವು ಅಪೇಕ್ಷಿಸುವ ಸಂಗಾತಿಗಳು ನಿಮಗೆ ಸಿಗದೇ ಇರಬಹುದು. ಈ ಹಿನ್ನೆಲೆಯಲ್ಲಿ ಬ್ರಿಟನಿನ್ (Britain) ಒಂದು ಕಂಪನಿಯು ವಿಶೇಷ ಡೇಟಿಂಗ್ ಆಪ್ ಅನ್ನು ಪರಿಚಯಿಸಿದೆ. ಈ ಆಪ್ ವಾರದಲ್ಲಿ ಒಂದು ದಿನ ಮಾತ್ರ ಕಾರ್ಯನಿರ್ವಹಿಸಲಿದೆ. ಡೇಟಿಂಗ್ ಆಪ್ ಹೊರತಾಗಿಯೂ ಜೀವನವಿದೆ. ಹಾಗಾಗಿ ವಾರದಲ್ಲಿ ಒಂದಿ ದಿನ ಮಾತ್ರ ಆಪ್ ಕಾರ್ಯ ನಿರ್ವಹಿಸಲಿದೆ ಎಂದು ಕಂಪನಿ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಈ ಐಟಿ ಕಂಪನಿಯು ಟಿಂಡರೆಲ್ಲಾ ಎಂದು ಕರೆಯಲ್ಪಡುವ ಈ ಅಪ್ಲಿಕೇಶನ್ ಅನ್ನು ರಚಿಸಿದ .ಇದಕ್ಕೆ , 'Thursday' ಎಂದು ಹೆಸರಿಸಲಾಗಿದೆ. ಕಂಪನಿಯು 'Thursday' ಎಂದು ಹೆಸರಿಟ್ಟಿರುವ ಹಿಂದೆಯೂ ಕಾರಣವಿದೆ. ಹೆಸರೇ ಸೂಚಿಸುವಂತೆ ಈ ಆಪ್ ಗುರುವಾರ ಮಾತ್ರ ಕಾರ್ಯನಿರ್ವಹಿಸುತ್ತದೆ. ಕಂಪನಿ ಪ್ರಕಾರ ಜನರು ವಾಋದ ಳು ದಿನವೂ ಡೆಟಿಂಗ್ ನಲ್ಲಿ ಕಾಲ ಕಳೆಯುವಂತಾಗಬಾರದು. ಡೇಟಿಂಗ್ ಹೊರತಾಗಿಯೂ ಜೀವನದಲ್ಲಿ ಬೇರೆ ಕಾರ್ಯಗಳಿರುತ್ತವೆ.
ಕಂಪನಿಯು ಇದೀಗ ಈ ಅಪ್ಲಿಕೇಶನ್ ಅನ್ನು ಲಂಡನ್ ಮತ್ತು ನ್ಯೂಯಾರ್ಕ್ನಲ್ಲಿ ಬಿಡುಗಡೆ ಮಾಡಿದೆ. ಬಹ ಳ ಕಡಿಮೆ ಸಮಯದಲ್ಲಿ, Thursday' ಹೆಸರಿನ ಈ ಅಪ್ಲಿಕೇಶನ್ ಬಹಳ ಜನಪ್ರಿಯವಾಗಿದೆ. ಇದುವರೆಗೆ ಬಹಳಷ್ಟು ಸಂಖ್ಯೆಯಲ್ಲಿ ಜನರು ಈ ಆಪ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಉಳಿದ ಡೆಟಿಂಗ್ ಆಪ್ ನಲ್ಲಿ ಜನ ಸಂಗಾತಿಗಾಗಿ ಹುಡಿಕಾಟ ನಡೆಸುತ್ತಾರೆ. ಕೊನಗೆ ಸಂಗಾತಿ ಸಿಗದೆ ನಿರಾಸೆಗೊಳ್ಳುತ್ತಾರೆ. ಈ ಅಪ್ಲಿಕೇಶನ್ ಈ ಸಮಸ್ಯೆಯನ್ನು ತೊಡೆದುಹಾಕುತ್ತದೆ ಎಂದು ಕಂಪನಿ ಹೇಳಿದೆ.
ಒಂಟಿಯಾಗಿರುವುದು ಅಪರಾಧವಲ್ಲ ಎಂದು ಕಂಪನಿ ಸ್ಪಷ್ಟವಾಗಿ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಡೇಟಿಂಗ್ ಅಪ್ಲಿಕೇಶನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರೆ, ನೈಜ ಜಗತ್ತಿನಿಂದ ದೂರ ಉಳಿಯುತ್ತಾರೆ. ಈ ಕಾರಣದಿಂದಲೇ ಈ ಆಪ್ ಗುರುವಾರ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಕಂಪನಿಯು ಗೌಪ್ಯತೆ ನೀತಿಗೆ ಹೆಚ್ಚಿನ ಒತ್ತು ನೀಡುತ್ತಿದೆ.
ಈ ಅಪ್ಲಿಕೇಶನ್ ಪ್ರಸ್ತುತ ಲಂಡನ್ ಮತ್ತು ನ್ಯೂಯಾರ್ಕ್ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರೂ, ಶೀಘ್ರದಲ್ಲೇ ಇದನ್ನು ಡಬ್ಲಿನ್, ಕಾರ್ಡಿಫ್ ಮತ್ತು ಗ್ಲ್ಯಾಸ್ಗೋದಂತಹ ನಗರಗಳಿಗೆ ವಿಸ್ತರಿಸಲಾಗುವುದು ಎಂದು ಲಂಡನ್ ಮೂಲದ ಕಂಪನಿ ಹೇಳಿದೆ. ಈ ಅಪ್ಲಿಕೇಶನ್‌ನ 1 ಲಕ್ಷ 10 ಸಾವಿರಕ್ಕೂ ಹೆಚ್ಚು ಜನ ಡೌನ್ ಲೋಡ್ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ.